ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ABVP protests demanding appropriate compensation for farmers
ಬಳ್ಳಾರಿ 06: ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದ ಕಾರಣ ರೈತರು ಇಂದು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ, ರೈತರು ತಮ್ಮ ಬೆಳೆಗಳನ್ನ ಬೆಳೆಯಲು ಉಪಯೋಗಿಸುವ ರಸಗೊಬ್ಬರ, ಹಾಗೂ ಇನ್ನಿತರ ವಸ್ತುಗಳ ಬೆಲೆ ಹೆಚ್ಚಾಗಿರುವುದು ನಮಗೆಲ್ಲ ತಿಳಿದಿರುವ ಸಂಗತಿ, ಹೀಗೆ ಖರ್ಚು ಮಾಡಿ ಒಂದು ವರ್ಷಗಳ ಕಾಲ ಕಷ್ಟ ಪಟ್ಟು ಬೆಳೆದ ಬೆಳೆಗಳಿಗೆ ಸರಿಯಾದ ರೀತಿಯ ಬೆಲೆ ಸಿಗದೇ ಇರುವ ಕಾರಣ ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ, ಹಿಂದಿನ ಸರಕಾರ ರೈತರ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಜಾರಿಗೆ ಮಾಡಿದ್ದ ರೈತ ವಿದ್ಯಾ ನಿಧಿಯನ್ನು ಸಹಿತ ಇಂದಿನ ಸರಕಾರ ಸ್ಥಗಿತ ಮಾಡಿದ್ದು ರೈತರ ಮಕ್ಕಳಿಗೆ ಮಾಡಿದ ಅನ್ಯಾಯವಾಗಿದೆ.
ಈ ಕೂಡಲೇ ಪ್ರತಿಭಟನೆ ನಿರತರೈತರ ಬೇಡಿಕೆಗಳನ್ನು ಆಲಿಸಿ ಅವುಗಳನ್ನು ಕಾಲಮಿತಿ ಒಳಗೆ ಪೂರೈಸಬೇಕು. ಮೊದಲೇ ಮಳೆ, ನೆರೆಯಿಂದ ತಮ್ಮ ಕೃಷಿ ಉತ್ಪನ್ನಗಳನ್ನು ಕಳೆದುಕೊಂಡ ರೈತರಿಗೆ ಉಳಿದ ಬೆಳೆಗೂ ಸೂಕ್ತ ಬೆಲೆ ಸಿಗದೆ ಹೋದರೆ ಅವರನ್ನು ಮತ್ತಷ್ಟು ನೋವಿಗೆ ತಳ್ಳಿದಂತಾಗುತ್ತದೆ. ಸರ್ಕಾರ ಅವರ ಬೇಡಿಕೆ ಈಡೇರಿಸದೇ ಹೋದರೆ ರಾಜ್ಯದ ವಿದ್ಯಾರ್ಥಿಗಳು ಕೂಡ ರೈತರನ್ನು ಬೆಂಬಲಿಸಿ ಬೀದಿಗಿಳಿದು ಹೋರಾಡಲು ಸಿದ್ಧವಿದೆ. ಕೂಡಲೇ ಸರ್ಕಾರ ಗಮನ ಹಸರಿಸಲು ಒತ್ತಾಯಿಸುತ್ತಿದ್ದೇವೆ. ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು ರವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಕೆ.ದೀಲೀಪ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಟಿ.ಭರತ್ ಹಂಪಾಪಟ್ಟಣ, ನಗರ ಕಾರ್ಯದರ್ಶಿ ಆಂಜಿನೇಯ, ಕಾರ್ಯಕರ್ತರಾದ ಮಾರುತಿ, ದರ್ಶನ್, ವಂಶಿ, ಶಶಿಕಲಾ ನಂದಿನಿ, ಮಹೇಶ್, ಪ್ರಜ್ವಲ್, ಲೋಹಿತ್, ವಿನೋದ್ ಹಾಗೂ ಮತ್ತಿತರರು ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 