ಎ.04 ಕೊನೆಯ ದಿನ, ಎ.08 ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ: ಜಿಲ್ಲಾಧಿಕಾರಿ

ಹಾವೇರಿ26: ಲೋಕಸಭಾ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಾಚರ್್ 28 ರಿಂದ ಆರಂಭಗೊಳ್ಳಲಿದೆ. ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಯ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ವಾತರ್ಾ ಇಲಾಖೆ ಹೊರತಂದಿರುವ ಮಾಧ್ಯಮ ಕೈಪಿಡಿ ಬಿಡುಗಡೆಗೊಳಿಸಿ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಕುರಿತಂತೆ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ದೇಶದ ಮೂರನೆಯ ಹಂತದ ಚುನಾವಣೆಗೆ ಮಾಚರ್್ 28 ರಂದು ಅಧಿಸೂಚನೆ ಹೊರಡಿಸಲಾಗುವುದು. ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆ ಮೂರನೆಯ ಹಂತದಲ್ಲಿ ನಡೆಯುವುದರಿಂದ ಮಾಚರ್್ 28ರ ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ ಹಾಲ್ನಲ್ಲಿ ನಾಮಪತ್ರ ಸ್ವೀಕಾರ ನಡೆಯಲಿದೆ ಎಂದು ವಿವರಿಸಿದರು.

ಮಾಚರ್್ 28 ರಿಂದ ಎಪ್ರಿಲ್ 4ರವರೆಗೆ ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಬಹುದು. ಬೆಳಿಗ್ಗೆ 11 ರಿಂದ 3 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಎಪ್ರಿಲ್ 5 ರಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಎಪ್ರಿಲ್ 8 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ತಿಳಿಸಿದರು.

ಚುನಾವಣಾಧಿಕಾರಿ ಕಚೇರಿಯ ಒಳಗಡೆ ನಾಮಪತ್ರ ಸಲ್ಲಿಸಲು ಅಭ್ಯಥರ್ಿ ಒಳಗೊಂಡಂತೆ ಐದು ಜನರಿಗೆ ಮಾತ್ರ ಅವಕಾಶವಿದೆ. 100 ಮೀಟರ್ ಪರದಿಯೊಳಗೆ ಮೂರು ವಾಹನಗಳನ್ನು ತರಲು ಮಾತ್ರ ಅವಕಾಶವಿದೆ. ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ಪಕ್ಷಗಳಿಂದ ಸ್ಪಧರ್ಿಸುವ ಅಭ್ಯಥರ್ಿಗಳು ಕ್ಷೇತ್ರದ ಒಬ್ಬ ಸೂಚಕನ ಬೆಂಬಲದೊಂದಿಗೆ ನಮೂನೆ 2ಎದಲ್ಲಿ ಅಜರ್ಿ ಸಲ್ಲಿಸಬಹುದು. ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ ಆದರೆ ನೋಂದಾಯಿತ ಪಕ್ಷದ ವತಿಯಿಂದ ಅಥವಾ  ಪಕ್ಷೇತರ ವತಿಯಿಂದ ಅಜರ್ಿ ಸಲ್ಲಿಸುವವರು 10 ಜನ ಸೂಚಕರ ಬೆಂಬಲದೊಂದಿಗೆ ನಮೂನೆ 2ಎನಲ್ಲಿ ಅಜರ್ಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.

ಪ್ರತಿ ಅಭ್ಯಥರ್ಿಗಳಿಗೆ 70 ಲಕ್ಷ ರೂ. ಚುನಾವಣಾ ವೆಚ್ಚದ ಮಿತಿಯನ್ನು ನಿಗದಿಪಡಿಸಲಾಗಿದೆ. ಪ್ರತ್ಯೇಕ ಬ್ಯಾಂಕ್ ಖಾತೆ ತೆಗೆದು ವೆಚ್ಚ ನಿರ್ವಹಣೆ ಮಾಡಬೇಕಾಗುತ್ತದೆ. ಕಾಲಕಾಲಕ್ಕೆ ವೆಚ್ಚದ ವಿವರವನ್ನು ಅಧಿಕಾರಿಗಳಿಗೆ ಸಲ್ಲಿಸಬೇಕು. ಮತದಾನ ಮುಕ್ತಾಯವಾದ 30 ದಿನದೊಳಗೆ ಎಲ್ಲ ಮೂಲ ದಾಖಲೆಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಚುನಾವಣಾ ವೆಚ್ಚದ ವಿವರನವನ್ನು ಅಭ್ಯಥರ್ಿಗಳು ಸಲ್ಲಿಸಬೇಕು ಎಂದು ತಿಳಿಸಿದರು.

   ಕಿರು ಹೊತ್ತಿಗೆ ಬಿಡುಗಡೆ: ಪ್ರಸಕ್ತ ಲೋಕಸಭಾ ಚುನಾವಣೆಯ ಮಾಹಿತಿ, ಸಂಪರ್ಕ ಸಂಖ್ಯೆ ಹಾಗೂ ಚುನಾವಣೆ ಹಿನ್ನೋಟದ ಮಾಹಿತಿ ಒಳಗೊಂಡ ಮಾಧ್ಯಮ ಕೈಪಿಡಿಯನ್ನು ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ಬಿಡುಗಡೆಗೊಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಕೆ.ಲೀಲಾವತಿ ಹಾಗೂ ಅಪರ ಜಿಲ್ಲಾಧಿಕಾರಿ ಚಂದ್ರಶೇಖರ, ವಾತರ್ಾಧಿಕಾರಿ ಬಿ.ಆರ್.ರಂಗನಾಥ್ ಅವರು ಉಪಸ್ಥಿತರಿದ್ದರು.