ಮಹಿಳೆಯೊರ್ವಳು ತನ್ನ 2 ವರ್ಷದ ಹೆಣ್ಣು ಮಗುವಿನ ಜೊತೆಗೆ ಕಾಣೆ

A woman is missing with her 2-year-old daughter

ಮಹಿಳೆಯೊರ್ವಳು ತನ್ನ 2 ವರ್ಷದ ಹೆಣ್ಣು ಮಗುವಿನ ಜೊತೆಗೆ ಕಾಣೆ

ರಾಯಬಾಗ: ತಾಲೂಕಿನ ನಿಡಗುಂದಿ ಗ್ರಾಮದ ವಿವಾಹಿತ ಮಹಿಳೆಯೊರ್ವಳು ತನ್ನ 2 ವರ್ಷದ ಹೆಣ್ಣು ಮಗುವಿನ ಜೊತೆಗೆ ಕಾಣೆಯಾಗಿರುವ ಬಗ್ಗೆ ಈಕೆ ಗಂಡ ತುಕಾರಾಮ ಇತನು ರಾಯಬಾಗ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.ನಿಡಗುಂದಿ ಗ್ರಾಮದ ಕವಿತಾ ತುಕಾರಾಮ ಬಾಸ್ಕರ (28) ಕಾಣೆಯಾಗಿರುವ ವಿವಾಹಿತ ಮಹಿಳೆ. ಇವಳು ಡಿ.19 ರಂದು ಬೆಳಿಗ್ಗೆ ಗಂಡನ ಮನೆಯಿಂದ ಯಾರಿಗೂ ಹೇಳದೆ ಮನೆಯಿಂದ ಹೋದವಳು ಮರಳಿ ಬಂದಿರುವುದಿಲ್ಲ.  ಇವಳು 5 ಫೂಟ್ 4 ಇಂಚ ಎತ್ತರವಿದ್ದು, ಮೈಯಿಂದ ಸದೃಢ, ಸಾದಾಗಪ್ಪು ಮೈಬಣ್ಣ, ದುಂಡು ಮುಖ ಹೊಂದಿರುವ ಇವಳು ಬಲಗೈ ಮೇಲೆ ಕವಿತಾ-ತುಕಾರಾಮ ಅಂತಾ ಹಂಚಿಬೊಟ್ಟು ಹಾಕಿಸಿರುತ್ತಾಳೆ, ಮನೆಯಿಂದ ಹೋಗುವಾಗ ಬಂಗಾರ ಬಣ್ಣದ ಜಂಪರ, ಕೆಂಪು ಬಣ್ಣದ ಸೀರೆ ಧರಿಸಿದ್ದು, ಕನ್ನಡ, ಮರಾಠಿ ಭಾಷೆ ಮಾತನಾಡುವ ಇವಳು ಯಾರಿಗಾದರೂ ಕಂಡು ಬಂದರೆ ರಾಯಬಾಗ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಫೋಟೊ: 25 ರಾಯಬಾಗ 2ಫೋಟೊ ಶೀರ್ಷಿಕೆ: ಕಾಣೆಯಾದ ವಿವಾಹಿತ ಮಹಿಳೆ ಕವಿತಾ ತುಕಾರಾಮ ಬಾಸ್ಕರ್‌.