ಕೃಪೆಯಿಂದ ಅವಳಿ ನಗರದ ನಾಗರೀಕರಿಂದ ಐತಿಹಾಸಿಕ ಬೆಳಗಾವಿ ಸುವರ್ಣ ಸೌಧ ವೀಕ್ಷಣೆ

A view of the historic Belgaum Suvarna Soudha courtesy the citizens of the twin cities

ಕೃಪೆಯಿಂದ ಅವಳಿ ನಗರದ ನಾಗರೀಕರಿಂದ ಐತಿಹಾಸಿಕ ಬೆಳಗಾವಿ ಸುವರ್ಣ ಸೌಧ ವೀಕ್ಷಣೆ

ಗದಗ 23:  ಇದೇ ದಿನಾಂಕ 21 ರಂದು ಬೆಳಗಾವಿಯಲ್ಲಿ ಜರುಗಿದ ಬೆಳಗಾವಿ ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವದ ಆಚರಣೆಯ ಭಾಗವಾಗಿ ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ ಎಂಬ ಐತಿಹಾಸಿಕ ಸಮಾವೇಶಕ್ಕೆ ಭಾಗಿಯಾಗಿ ಸಮ್ಮೇಳನದ ಸಾಕ್ಷಿಯಾಗಲು ಹೋರಟ ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 27 ನೇ ವಾರ್ಡಿನ ನಾಗರಿಕರು ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ತಮ್ಮ ಒಂದು ಕಿರು ಸೇವೆಯನ್ನು ಒದಗಿಸಿದ ಸಂತೃಪ್ತಿಯನ್ನು ವ್ಯೆಕ್ತಪಡಿಸಿದರು. ಇದೇ ಸಂಧರ್ಭದಲ್ಲಿ ಕಾಂಗ್ರೇಸ್ ಬೆಳಗಾವಿ ಅಧಿವೇಶನದ ದ್ಯೋತಕವಾಗಿ ಪ್ರತಿವರ್ಷ ಚಳಿಗಾಲದ ಅಧಿವೇಶನ ಜರುಗುವ ಸುವರ್ಣ ಸೌಧಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಈ ಸಂಧರ್ಭದಲ್ಲಿ ಗದಗ ಬೆಟಗೇರಿ ನಗರಸಭೆಯ 27 ನೇ ವಾರ್ಡಿನ ನಗರಸಭಾ ಸದಸ್ಯಣಿಯರಾದ ಲಲಿತಾ.ಬ.ಅಸೂಟಿ. ಗದಗ ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಬಿ. ಅಸೂಟಿ. ರಮೇಶ್ ಅಣ್ಣಿಗೇರಿ. ದಾವಲ್ ಸಾಬ್ ರೋಣದ. ಕಳಕಪ್ಪ ಕಡಬಲಕಟ್ಟಿ. ಸಂಗಪ್ಪ ಲೇಬಗೇರಿ .ಗಂಗಾಧರ್ ಬಳೆಗಾರ. ಮಂಜು ಮಡಿವಾಳರ್‌.ಚನ್ನಪ್ಪ ಅಕ್ಕಿ. ಶಿವಪ್ಪ ಬದನಾಲ ಗೌರವ ಹುಣಸಿಕಟ್ಟಿ .ಲಲಿತಾ ಬಳ್ಳಾರಿ .ದ್ರಾಕ್ಷಾಯಿಣಿ ಹೈದ್ರಿ ಶ್ರೀಮತಿ ಅಂದಮ್ಮ ಕುರಹಟ್ಟಿ.ಹಾಗೂ ಇನ್ನೂ ಮುಂತಾದ ಸಮಸ್ತ ಬಡಾವಣೆಯ ನಾಗರಿಕರು ಭಾಗವಹಿಸಿದ್ದರು.