ಬೀದಿ ನಾಯಿಗಳನ್ನು ಹಿಡಿದು ಎ.ಬಿ.ಸಿ ಕೇಂದ್ರಕ್ಕೆ ಸಾಗಿಸುತ್ತಿರುವ ತರಬೇತಿ ತಂಡ
A training team is catching stray dogs and transporting them to the ABC center
ದೇವರ ಹಿಪ್ಪರಗಿ 10: ಪಟ್ಟಣದಾದ್ಯಂತ ಹೆಚ್ಚಾದ ಬೀದಿ ನಾಯಿಗಳ ಉಪಟಳ ತಡೆಯಲು ಪ.ಪಂ ವಿಶೇಷ ಅಭಿಯಾನ ನಡೆಸಿತು.ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಹಾಗೂ ಮಕ್ಕಳ ಮೇಲಿನ ದಾಳಿ ಪ್ರಕರಣ ಹೆಚ್ಚಿದ ಹಿನ್ನಲೆಯಲ್ಲಿ ಸುಪ್ರಿಂ ಕೋರ್ಟನ ಮಾರ್ಗದರ್ಶನ ಹಾಗೂ ಪ್ರಾಣಿ ನಿಯಂತ್ರಣ ನಿಯಮಗಳು 2023 ರ ಅನ್ವಯ ಬೀದಿ ನಾಯಿಗಳ ನಿರ್ವಹಣೆಗಾಗಿ ಪಟ್ಟಣದಲ್ಲಿ ವಿಶೇಷ ಕಾರ್ಯಾಚರಣೆ ನಡೆಯಿತು.
ಇದರ ಪ್ರಯುಕ್ತ ಪ.ಪಂ ಮುಖ್ಯಾಧಿಕಾರಿ ಆಫ್ರೋಜ ಅಹ್ಮದ ಪಟೇಲ ಮಾತನಾಡಿ ಉತ್ತರ ಪ್ರದೇಶದ ತರಬೇತಿ ಪಡೇದ ತಂಡಗಳು ಜನನೀಬೀಡ ಪ್ರದೇಶದಲ್ಲಿನ ಶ್ವಾನಗಳನ್ನು ಹಿಡಿದು ಎ.ಬಿ.ಸಿ ಕೇಂದ್ರಕ್ಕೆ ಸಾಗಿಸಿ ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ ನಿರೋಧಕ ಲಸಿಕೆ ನೀಡಿ ಮೂರು ದಿನಗಳವರೆಗೆ ಆರೈಕೆ ಮಾಡಲಾಗುತ್ತದೆ. ಈ ಪ್ರಕ್ರೀಯೆ ಮುಗಿದು ಚೇತರಿಸಿಕೊಂಡ ನಾಯಿಗಳಿಗೆ ಗುರುತನ್ನು ಮಾಡಿ ಮರಳಿ ಬಿಡಲಾಗುತ್ತದೆ ಈ ಕಾರ್ಯಾಚರಣೆ ಇನ್ನು ಕೆಲ ದಿನಗಳ ವರೆಗೆ ನಡೇಯಲಿದೆ. ನಾಯಿಗಳನ್ನು ಹಿಡಿಯುವ ಸಂಧರ್ಭದಲ್ಲಿ ಯಾವೂದೆ ರೀತಿ ಹಿಂಸೆ ಆಗದಂತೆ ಎಚ್ಚರ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಂಜೆಯಾದರೆ ಹೊರಗಡೆ ಹೋಗಲು ಭಯವಾಗುತ್ತದೆ.
ಕ್ಕಮಕ್ಕಳ ಮೇಲೆ ಬೀದಿ ನಾಯಿಗಳು ನಡೆಸಿದ ಮಾರಣಾಂತಿಕ ದಾಳಿಯ ಬಗ್ಗೆ ಕೇಳಿದಾಗ ಮಕ್ಕಳನ್ನು ಹೊರಗಡೆ ಆಟಕ್ಕೆ ಬಿಡಲೂ ಸಹ ಹೆದರಿಕೆ ಆಗುತ್ತದೆ ಇದಕ್ಕಾಗಿ ಪ.ಪಂ ನಡೆಸುತ್ತಿರುವ ಈ ಕಾರ್ಯಾಚರಣೆಯಿಂದ ನಾಯಿಗಳ ಸಂಖ್ಯೆ ಹಾಗೂ ಅವುಗಳಿಂದ ಹರಡುವ ರೇಬೀಸ ಅಪಾಯವನ್ನು ತಡೇಯಬಹುದಾಗಿದೆ ಇದು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದಲೂ ಉತ್ತಮ ನಿರ್ಧಾರ ಎಂದು ಪಟ್ಟಣದ ನಿವಾಸಿಗಳಾದ ಮುನೀರ್ ಅಹ್ಮದ್ ಮಳಖೇಡ,ಜಿ.ಪಿ.ಬಿರಾದಾರ,ಕಾಶಿನಾಥ ಕೋರಿ, ಶಿವರಾಜ ತಳವಾರ ಹೇಳುತ್ತಾರೆ.ಈ ಕಾರ್ಯಾಚರಣೆಯು ಬೀದಿ ನಾಯಿಗಳ ಉಪಟಳ ಕಡಿಮೆಗೊಳಿಸುವುದಲ್ಲದೆ ರೇಬೀಸ ಮುಕ್ತ ವಾತವರಣ ಸೃಷ್ಟಿಯಾಗಿ ಪಟ್ಟಣದ ನಾಗರಿಕರು ಯಾವೂದೆ ಭಯವಿಲ್ಲದೆ ಓಡಾಡಲು ಸಾದ್ಯವಾಗುವ ವಿಶ್ವಾಸವನ್ನು ಸ್ಥಳೀಯ ಆಡಳಿತ ವ್ಯಕ್ತ ಪಡಿಸಿದೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 