ಸರಳ ವ್ಯಕ್ತಿತ್ವದ ಶಿಕ್ಷಕ ಇತರರಿಗೆ ಮಾದರಿ: ಬೇವನೂರ
A teacher with a simple personality is a role model for others: Bevanura
ದೇವರಹಿಪ್ಪರಗಿ 07: ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದುಕೊಂಡು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿರುವ ಪರಶುರಾಮ ಲಮಾಣಿಯವರಂತಹ ಗುರುಗಳು ಇಂದಿನ ಸಮಾಜದಲ್ಲಿ ತುಂಬಾ ಅಪರೂಪ. ಅವರ ಸರಳತೆ ಎಲ್ಲರಿಗೂ ಮಾದರಿಯಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಜಿ.ಎಸ್.ಬೇವನೂರ ಅವರು ಹೇಳಿದರು.
ಕಳೆದ ತಿಂಗಳು ಸೇವಾನಿವೃತ್ತಿಯನ್ನು ಹೊಂದಿರುವ ಜಾಲವಾದ ಗ್ರಾಮದ ಪೂಜಾರಿ ವಸ್ತಿ ಕಿರಿಯ ಪ್ರಾಥಮಿಕ ಶಾಲೆಯ ಪರಶುರಾಮ ಲಮಾಣಿ ಗುರುಗಳ ಬೀಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ಥಳೀಯ ಪೂಜಾರಿ ವಸ್ತಿ ಶಾಲೆಯ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಾಲವಾದ ಕ್ಲಸ್ಟರಿನ ಶಿಕ್ಷಕರೆಲ್ಲರೂ ಕೂಡಿಕೊಂಡು ದಂಪತಿ ಸಮೇತವಾಗಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ಕೆಪಿಎಸ್ ಜಾಲವಾದ ಶಾಲೆಯ ಮುಖ್ಯಗುರು ಡಿ.ಎಚ್.ಲಮಾಣಿ, ಸ್ಥಳೀಯ ಶಾಲೆಯ ಮುಖ್ಯಗುರು ಎಸ್.ಬಿ.ಸಿಂದಗಿ,ಶಿಕ್ಷಕ ಅಪ್ಪಾಸಾಹೇಬ ಕರಿಕಬ್ಬಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶರಣು ಸೋಲಾಪುರ, ಶಿಕ್ಷಕರಾದ ರಾಮು ನಾಯಕ, ಆರಿ್ಬ.ಹಟ್ಟಿ,ಕೆ.ಆರ್.ಸೌದಿ,ಜಿ.ಬಿ.ಲಮಾಣಿ,ಸುರೇಶ ಚವ್ಹಾಣ,ಸಲೀಂ ಮುಲ್ಲಾ,ವಿಲಾಸ ಕೊಟಗಿ, ಉಮೇಶ ಕಿರಣಗಿ,ಸುಧಾ ಪಾಟೀಲ ಸೇರಿದಂತೆ ಶಿಕ್ಷಕರು, ಮಕ್ಕಳು,ಗ್ರಾಮಸ್ಥರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಶಿಕ್ಷಕ ಎಸ್.ಬಿ.ಕನ್ನೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರೆ,ಶಿಕ್ಷಕ ಪಿ.ಎಸ್.ಹುಣಶ್ಯಾಳ ವಂದಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 