ಸದೃಢ ಮನೋಭಾವವೇ ಸಾಧನೆಗೆ ಅಡಿಗಲ್ಲು: ಹಿರೇಮಠ
A strong attitude is the cornerstone of success: Hiremath
ವಿಜಯಪುರ 22: ಇಂದಿನ ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ವಾಣಿಜ್ಯ ಶಿಕ್ಷಣದ ಪ್ರಸ್ತುತತೆ ಎಂದಿಗಿಂತಲೂ ಹೆಚ್ಚು ಬೆಳದಿದೆ. ವಾಣಿಜ್ಯ ಪದವಿ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಚಾರ್ಟರ್ಡ ಅಕೌಂಟಂಟ್, ಕಂಪನಿ ಸೆಕ್ರೆಟರಿ, ಸರ್ಟಿಫೈಯ್ಡ್ ಮ್ಯಾನೇಜಮೆಂಟ್ ಅಕೌಂಟಿಂಗ್, ಕಾಸ್ಟ್ ಆಂಡ್ ವರ್ಕಿಂಗ್ ಅಕೌಂಟಂಟ್, ಫೈನಾನ್ಸಿಯಲ್ ಎನಾಲಿಸಿಸ್ಟ್, ಎಕ್ಸಿಕ್ಯೂಟಿವ್ಹ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮ್ಯಾನೇಜರ್ ಹೀಗೆ ಹತ್ತು ಹಲವಾರು ಅವಕಾಶಗಳು ದೊರೆಯಲಿವೆ ಎಂದು ಮುಖ್ಯ ಅತಿಥಿಗಳಾದ ಬೆಂಗಳೂರಿನ ಸಿ.ಎಸ್.ಸಿ. ಬಿಸಿನೆಸ್ ಸೊಲ್ಯುಷನ್ ಸಂಸ್ಥೆಯ ಸಿ.ಇ.ಓ. ವಿಜಯಪುರ ಮೂಲದ ಪ್ರಶಾಂತ ಹಿರೇಮಠ ಅವರು ಅಭಿಪ್ರಾಯಪಟ್ಟರು. ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ ಹಣಕಾಸು ನಿರ್ವಹಣೆ ಮತ್ತು ವಿಶ್ಲೇಷಣೆ ವಿಷಯ ಕುರಿತ ಉಪನ್ಯಾಸದಲ್ಲಿ ಅವರು ಸಸಿಗೆ ನೀರುಣಿಸುವದರ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಸ್ತುತ ಜಗತ್ತು ಶೈಕ್ಷಣಿಕ ಶ್ರೇಷ್ಠತೆ, ಜ್ಞಾನ ಮತ್ತು ಪ್ರಾಯೋಗಿಕತೆಗೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಪ್ರಸ್ತುತ ಜಗತ್ತು ಅಪೇಕ್ಷಿತ ಮಟ್ಟದ ವಿಷಯ ಜ್ಞಾನ, ಕೌಶಲ್ಯ, ವಿಶ್ಲೇಷಣಾತ್ಮಕ ಚಿಂತನಾ ಶಕ್ತಿ, ಕಾರ್ಯತತ್ಪರತೆ, ಕ್ರಿಯಾಶೀಲತೆ, ಸೃಜನಾತ್ಮಕತೆ ಮತ್ತು ಪ್ರಾಯೋಗಿಕತೆಯಂತಹ ಓದ್ಯೋಗಿಕ ಕೌಶಲ್ಯಗಳನ್ನು ಪಡೆಯುವುದು ಅಗತ್ಯವಾಗಿದೆ. ಕಷ್ಟಪಟ್ಟು ದುಡಿಯಬೇಕೆನ್ನುವುದು ನಿಮ್ಮ ಜೀವನದ ಮಂತ್ರವಾದರೆ, ಅದೃಷ್ಟ ನಿಮ್ಮ ಮನೆಯ ಬಾಗಿಲನ್ನು ತಟ್ಟುತ್ತದೆ ಎನ್ನುವಂತೆ ಜೀವನದಲ್ಲಿ ನಾವು ಯಶಸ್ಸು ಗಳಿಸಬೇಕಾದರೆ ಓದುವ ಆಸಕ್ತಿ, ಒಳ್ಳೆಯ ಹವ್ಯಾಸ, ನಿರಂತರ ಅಧ್ಯಯನ, ಕಠಿಣ ಪರಿಶ್ರಮ, ಧನಾತ್ಮಕ ಚಿಂತನೆ, ಆತ್ಮವಿಶ್ವಾಸ, ದಿಟ್ಟಛಲದೊಂದಿಗೆ ಯೋಜಿತ ಹಾಗೂ ಉದಾತ್ತವಾದ ಗುರಿಯನ್ನಿಟ್ಟುಕೊಂಡು ಆ ಗುರಿಯ ಸಾಧನೆಯತ್ತ ದಿಟ್ಟ ಹೆಜ್ಜೆ ಹಾಕುತ್ತಾ ಸಾಗಿದರೆ ಯಶಸ್ಸು ಲಭಿಸುತ್ತದೆ. ಕಷ್ಟಪಡದೇ ಕೂತ ಜಾಗದಲ್ಲಿಯೇ ಯಶಸ್ಸು ಸಿಗಬೇಕೆಂದರೆ ಅದು ಕನ್ನಡಿಯೊಳಗಿನ ಗಂಟಿನಂತೆ. ನಮ್ಮ ಕೈಗೆ ಎಟುಕಲಾರದು. ಪ್ರತಿಯೊಬ್ಬರಲ್ಲಿಯೂ ವಿಶಿಷ್ಟವಾದ ಕಲೆ, ಪ್ರತಿಭೆ, ಕೌಶಲ್ಯ, ಜಾಣ್ಮೆ, ಪ್ರಾವೀಣ್ಯತೆ ಮತ್ತು ನೈಪುಣ್ಯತೆ ಇದ್ದೇ ಇರುತ್ತದೆ. ಆದರೆ ಅಂತಹ ಸುಪ್ತವಾಗಿರುವ ಪ್ರತಿಭೆ ಅರಳಲು ದೊರೆಯುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎ.ಐ.ಹಂಜಗಿ ಅವರು ಮಾತನಾಡಿ, ಯಶಸ್ಸು ಮತ್ತು ಅದೃಷ್ಟಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನಮ್ಮ ಕಾರ್ಯಸಾಧನೆಗೆ ಅಥವಾ ಯಶಸ್ಸು ಪಡೆಯಲು ಹಣೆಬರಹ, ಅದೃಷ್ಟವೆಂಬುದು ಖಂಡಿತ ಇಲ್ಲ. ಜಗತ್ತಿನಲ್ಲಿ ಮಹಾನ್ ಸಾಧನಗೈದ ಮಹಾಪುರುಷರೆಲ್ಲರೂ ನಮ್ಮಂತೆ ಮನುಷ್ಯರೇ. ಅವರಲ್ಲಿ ಕಲಿಯುವ, ಕನಸನ್ನು ನನಸು ಮಾಡುವ, ಕೊರತೆಗಳನ್ನೇ ವರದಾನವಾಗಿಸಿಕೊಳ್ಳುವ, ಶ್ರದ್ಧೆಯಿಂದ ದುಡಿಯುವ, ಸದಾ ಸಕಾರಾತ್ಮಕವಾಗಿ ಚಿಂತಿಸುವ ಮತ್ತು ಹಿಡಿದ ಕಾರ್ಯವ ಬಿಡದಿರುವ ದಿಟ್ಟಛಲವೇ ಅವರ ಯಶಸ್ಸಿನ ಗುಟ್ಟು. ನೀವು ಎಂದಿಗೂ ನಿಮ್ಮ ಬಗ್ಗೆ, ನಿಮ್ಮನ್ನು ಕೀಳಾಗಿ ಕಾಣದೇ ಸದೃಢ ಮನೋಬಲ ಮತ್ತು ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿದರೆ ಸಾಧನೆಯೇನು ಗಗನ ಕುಸುಮವೇನಲ್ಲ ಹಾಗೂ ಯಶಸ್ಸು ನಿಮ್ಮ ಮನೆಯ ಬಾಗಿಲಿಗೆ ಬರುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ಐ.ಕ್ಯೂ.ಎ.ಸಿ ಸಂಚಾಲಕ ಪ್ರೊ. ಆರ್.ಎಸ್.ಕುರಿ, ವಾಣಿಜ್ಯಶಾಸ್ತ್ರ ಮುಖ್ಯಸ್ಥ ಪ್ರೊ. ಎಂ.ಎಸ್.ಖೊದ್ನಾಪೂರ, ಸ್ನಾತಕೋತ್ತ್ರ ಎಂ.ಕಾಂ. ವಿಭಾಗದ ಸಂಚಾಲಕ ಡಾ. ಎಸ್.ಬಿ.ಕಬಾಡೆ, ಪ್ರೊ. ವ್ಹಿ.ಆರ್.ಕಬಾಡೆ ವೇದಿಕೆ ಮೇಲಿದ್ದರು. ಶಾಂತೇಶ ಸ್ಥಾವರಮಠ, ತ್ರೀವೇಣಿ ಹಿರೇಮಠ, ಪ್ರೊ. ಸಂಗಮೇಶ ಗುರವ, ಡಾ. ಚಂದ್ರಕಾಂತ.ಬಿ, ಡಾ. ವಿಶಾಲಾಕ್ಷೀ ಹೊನ್ನಾಕಟ್ಟಿ, ಡಾ. ಬಿ.ಎನ್.ಶಾಡದಳ್ಳಿ, ಪ್ರೊ. ಆರ್.ಐ.ಜೋಗೂರ, ಪ್ರೊ. ಸುನೀಲ ಹತ್ತಿ, ಡಾ. ಡಿ.ಬಿ.ಕುಲಕರ್ಣಿ, ಡಾ. ಎಸ್.ಎ.ಯಂಬತ್ನಾಳ, ಡಾ. ರಮೇಶ ನಾಗರಡ್ಡಿ, ಪ್ರೊ. ವಿಶ್ವನಾಥ ಕಲ್ಮೇಶ್ವರ ಇನ್ನಿತರರು ಸಹ ಉಪಸ್ಥಿತರಿದ್ದರು. ಬಿ.ಕಾಂ 5 ನೇಯ ಸೆಮೆಸ್ಟರ್‌ನ ಸೃಷ್ಠಿ ಗೋಂಧಳಿ ಪ್ರಾರ್ಥನಾ ಗೀತೆ ಪ್ರಚುರಪಡಿಸಿದರು. ಶ್ರೀಶೈಲ ಪಟ್ಟಣಶೆಟ್ಟಿ ಸ್ವಾಗತಿಸಿದರು. ಕಾವೇರಿ ಕಂಟೇನವರ ವಂದಿಸಿದರು, ರಾಜಕುಮಾರ ಕನಮಸ್ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 