ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ, ನೃತ್ಯ ಸ್ಪರ್ಧೆ ಕಾರ್ಯಕ್ರಮ
ರಾಯಬಾಗ, 27; ಇಂದು ಮಹಿಳೆಯರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸಬಲೀಕರಣ ಆಗಬೇಕೆಂದು ಉಪನ್ಯಾಸಕಿ ಪಿ.ಕೆ.ಪಾಟೀಲ ಹೇಳಿದರು. ಗುರುವಾರ ಪಟ್ಟಣದ ಎಸ್.ಪಿ.ಎಮ್. ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಮತ್ತು ಎಂ.ಕಾಂ, ಎಂ.ಎ (ರಾಜ್ಯಶಾಸ್ತ್ರ) ವಿಭಾಗ, ಮಹಿಳಾ ಸಬಲೀಕರಣ ಘಟಕ ಹಾಗೂ ಸಾಂಸ್ಕೃತಿಕ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮತ್ತು ನೃತ್ಯ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಇಂದು ಪುರುಷರ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡ್ತಾ ಇರುವುದು ಹೆಮ್ಮೆಯ ವಿಷಯ ಎಂದರು.
ಸಾಧನೆ ಮಾಡಿದ ಮಹಿಳೆಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ನಾವು ಉನ್ನತ ಸಾಧನೆ ಮಾಡಬೇಕು. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೇ, ಸಮಾಜದಲ್ಲಿ ಸ್ವಾವಲಂಬನೆ ಜೀವನ ನಡೆಸಬೇಕೆಂದು ಕರೆ ನೀಡಿದರು. ಎಸ್.ಪಿ.ಎಮ್ ನಿರ್ದೇಶಕಿ ಭಾಗ್ಯಶ್ರೀ ಪಾಟೀಲ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಚಾರ್ಯ ಐ.ಎಸ್.ಗೋಕಾಕ, ಪ್ರಾಧ್ಯಾಪಕರಾದ ಆರ್.ಎಸ್.ಗುಡೋಡಗಿ, ವಿದ್ಯಾಶ್ರೀ ದೊಡ್ಡಮನಿ, ಡಾ.ಪಿ.ಆರ್.ರಾಮತೀರ್ಥ, ಡಾ.ರಣಧೀರ ಕಾಂಬಳೆ, ಎಲ್.ಎಸ್.ಹೊಸಟ್ಟಿ, ಎಸ್.ಬಿ.ಮರಲಿಂಗನ್ನವರ, ಪಿ.ಎಸ್.ಕಾಂಬಳೆ, ಎಸ್.ಎಮ್.ಗುತ್ತಿ, ಆರಿ್ಬ.ಪಾಂಡ್ರೆ, ಎಸ್.ವಾಯ್.ಗೊಟನೆ, ಎಸ್.ಎಸ್.ಮುಲ್ಲಾ, ಎಲ್.ಎಮ್.ಹಿರೇಕೊಡಿ, ಎಸ್.ಎ.ಬಾಗಿ, ಎಮ್.ಎಮ್.ಮೊಮಿನ, ಎ.ಎಸ್.ಗೌಂಡಿ, ಎಮ್.ಎ.ತರತರಿ ಹಾಗೂ ವಿದ್ಯಾರ್ಥಿಗಳು ಇದ್ದರು.