ಕಠಿಣ ವೃತಕ್ಕಿಂತ, ಮೃಧು ವಚನವೇ ಶ್ರೇಷ್ಠ -ಮರೀಗೌಡ ಪಾಟೀಲ್
ಬಳ್ಳಾರಿ 23: ಚಿಂತೆಗೂ ಚಿಂತನೆಗೂ ಅರ್ಥಭೇದ ಉಂಟಾಗುವುದು ಕೇವಲ ಅನುಸ್ವರ, ಸೊನ್ನೆ ಮಾತ್ರ. ಚಿಂತೆಯು ಜೀವಂತ ಶರೀರವನ್ನು ಸುಟ್ಟರೆ, ಚಿತೆಯು ಜೀವವಿಲ್ಲದ ಶರೀರವನ್ನು ಸುಡುತ್ತದೆ. ಚಿಂತೆಯಿಂದ ಸುಡುತ್ತಿರುವ ಶರೀರವನ್ನು ಶರಣರ ವಚನಗಳೆಂಬ ಸುಜಲದ ಚಿಂತನೆಯಿಂದ ಶಾಂತಗೊಳಿಸಬಹುದೆಂದು, ಆಧ್ಯಾತ್ಮ ಚಿಂತಕರು, ಅಮೀರ್ ಏಜೆನ್ಸಿ ವಿತರಕರೂ ಆದ ಮರೀಗೌಡ ಪಾಟೀಲರು ನುಡಿದರು.
ಗಾಂಧೀನಗರದ ಸಿದ್ಧಾರ್ಥ ಕಾಲೋನಿಯಲ್ಲಿಯ ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಏರಿ್ಡಸಿದ್ದ 310ನೇ ಮಹಾಮನೆ ಮನೆ ಮಂದಾರ ಮುದ್ದು ಮಕ್ಕಳ ದತ್ತಿ ಮತ್ತು ಲಿಂಽಽ ಅಂಗಡಿ ನಾಗಪ್ಪ ದತ್ತಿ ಕಾರ್ಯಕ್ರಮದಲ್ಲಿ 'ಚಿಂತೆಗೆ ಬದಲು ವಚನ ಚಿಂತನೆ' ವಿಷಯ ಕುರಿತು ಮಾತನಾಡುತ್ತಾ, ಮಾನವನ ಆರೋಗ್ಯ ಆಹಾರದಿಂದ ಕೆಡುವುದು ಕಡಿಮೆ. ಅದಕ್ಕಿಂತ ಹೆಚ್ಚಾಗಿ ಚಿಂತೆಯಿಂದ ಕೆಡುತ್ತದೆ. ಸಮಸ್ಸು ಚಿಂತೆಯಿಂದ ದೂರಾಗುವುದಿಲ್ಲ. ಶರಣರ ಮನೋವೈಜ್ಞಾನಿಕ ವಾದ ವಚನಗಳ ಚಿಂತನೆಯಿಂದ ದೂರಾಗಬಲ್ಲುದೆಂದರು. ಅಕ್ಕನ ಹೆದರಿರುವ ಮನವೇ ಅಣ್ಣನ ಹೊಗಳುವವರೊಂದು ಕೋಟಿ...
ಬಾರದು ಬಪ್ಪುದು, ಬಪ್ಪುದು ತಪ್ಪದು ಎಂಬ ಹಲವಾರು ಶರಣರ ವಚನಗಳನ್ನು ಉಲ್ಲೇಖಿಸುತ್ತಾ ವಚನಗಳು ಚಿಂತೆಗೆ ಪರಿಹಾರ ನೀಡಬಲ್ಲವೆಂದು ಅಭಿಪ್ರಾಯಪಟ್ಟರು. ಹೋಮಿಯೋ ತಜ್ಞ, ಕರ್ನಾಟಕ ಬ್ಯಾಂಕ್ ನಿವೃತ್ತ ನೌಕರರಾದ ಎಂ.ಜಯರಾಮ್ ರವರು ಅತಿಥಿ ಸ್ಥಾನದಲ್ಲಿ ಮಾತನಾಡುತ್ತಾ ಸಜ್ಜನ ಸಹವಾಸ, ಸತ್ಸಂಗಗಳಿಂದ ನಾವು ಚಿಂತೆಯ ನೋವಿನಿಂದ ಪಾರಾಗಬಹುದು. ಸದಾಕಾಲ ಕ್ರಿಯಾಶೀಲರಾಗಿ ನಡೆಯುವ ಮಾರ್ಗವನ್ನು ಶರಣರು ತಮ್ಮ ವಚನಗಳಲ್ಲಿ ಸೂಚಿಸಿದ್ದಾರೆ .ಅದರಂತೆ ನಾವು ನಡೆದರೆ ನಾವು ಸದಾ ಸುಖಿಗಳಾಗಿರಬಹುದೆಂದರು.
ಬಳ್ಳಾರಿ ಶ್ರೀ ಜಗದ್ಗುರು ಪೀಠದ ಗಣಪತಿ,ಕ್ಯಾಡ್ ಸೆಂಟರಿಗೆ ನಿರ್ದೇಶಕರಾದ ಬಾಲಮುರಳಿ ಕೃಷ್ಣರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಗರೀಕರಾದ ಮಹಾಬಲೇಶ್ವರಗೌಡ್ರು ಪ್ರಾರ್ಥನೆ ಮಾಡಿದರು. ಕೆ.ಎಂ.ನಾಗಭೂಷಣ ಸ್ವಾಗತ ಕೋರಿದರು. ನಾಗಭೂಷಣಯ್ಯ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ದತ್ತಿ ದಾಸೋಹಿಗಳಾದ ಡಿ.ಎ.ಬಸವರಾಜ ಸಹೋದರ ಡಿ.ಎ.ಶಿವಪ್ರಸಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಜೊತೆ ಪ್ರಾಂಶುಪಾಲರಾದ ಮಂಜುನಾಥ್, ಸದಾಶಿವಪ್ಪ, ಮಹಾಬಲೇಶ್ವರಗೌಡ ,ಕುರುಗೋಡು ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮಾಪತಿ ಗೌಡ ಮುಂತಾದವರು ಉಪಸ್ಥಿತರಿದ್ದರು. ಅತಿಥಿಗಳ ಸನ್ಮಾನದೊಂದಿಗೆ ಕಾರ್ಯಕ್ರಮ ಮಂಗಳವಾಯಿತು.