ಉತ್ತಮ ನಾಗರಿಕ ಜೀವನಕ್ಕೆ ಸ್ವಾಸ್ಥ್ಯ ಸಂಕಲ್ಪ ಅಗತ್ಯ: ರಮೇಶ್ ಕಾಳೆ
A resolve for well-being is essential for a good civic life: Ramesh Kale
ರಾಣೆಬೆನ್ನೂರು 02: ತಂದೆ, ತಾಯಿ ಮತ್ತು ಕುಟುಂಬದವರು ಮಕ್ಕಳ ಭವಿಷ್ಯಕ್ಕಾಗಿ ಅನೇಕ ರೀತಿಯಲ್ಲಿ ತ್ಯಾಗ ಮಾಡುತ್ತಿದ್ದು, ಅವರ ಪರಿಶ್ರಮಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಗೌರವಯುತ ಜೀವನ ನಡೆಸಬೇಕು ಎಂದು ರಮೇಶ್ ಕಾಳೆ ಹೇಳಿದರು.
ಅವರು ಮಾತನಾಡಿ, ಉತ್ತಮ ವಿದ್ಯಾರ್ಥಿಯ ಗುಣಲಕ್ಷಣಗಳು ಶಿಕ್ಷಣದ ಜೊತೆಗೆ ಆಚಾರ-ವಿಚಾರ, ಸಂಸ್ಕೃತಿ, ಸಂಸ್ಕಾರ, ದಯೆ, ಕರುಣೆ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡಾಗ ಮಾತ್ರ ಭವಿಷ್ಯದ ಉತ್ತಮ ನಾಗರಿಕನಾಗಲು ಸಾಧ್ಯ ಎಂದು ತಿಳಿಸಿದರು.
ತಾಲೂಕಾ ಯೋಜನಾಧಿಕಾರಿ ಮಂಜುನಾಥಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದು, ಉತ್ತಮ ಶಿಕ್ಷಣದೊಂದಿಗೆ ನೈತಿಕತೆ ಮತ್ತು ಶಿಸ್ತು ಅವಿಭಾಜ್ಯ ಅಂಗವಾಗಬೇಕು ಎಂದರು. ತಂದೆ-ತಾಯಿಯ ಋಣ ತೀರಿಸಲು ಗುರುಗಳ ಮಾರ್ಗದರ್ಶನ ಹಾಗೂ ಸ್ಪಷ್ಟ ಗುರಿ ಅಗತ್ಯವಿದೆ ಎಂದು ಹೇಳಿದರು. “ಸಜ್ಜನರ ಸಂಗವು ಹೆಜ್ಜೇನು ಸವಿದಂತೆ” ಎಂಬ ಕವಿವಾಣಿಯನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವಂತರೊಂದಿಗೆ ಬೆಳೆದು ಭವಿಷ್ಯದ ಉತ್ತಮ ನಾಗರಿಕರಾಗಬೇಕು ಎಂದು ಕರೆ ನೀಡಿದರು.
ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ನಡೆದ ಈ ಕಾರ್ಯಕ್ರಮವು ಕೇಂದ್ರ ಕಚೇರಿಯಿಂದ ಆನ್ಲೈನ್ ಮೂಲಕ ಆರಂಭಗೊಂಡಿದ್ದು, ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕಕಾಲಕ್ಕೆ ನಡೆಯಿತು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ತುಮ್ಮಿನಕಟ್ಟಿ ಸಂಗನಬಸವೇಶ್ವರ ಕಾಲೇಜು ಹಾಗೂ ಕುಪ್ಪೇಲೂರು ಪ್ರೌಢಶಾಲೆ ಸೇರಿದಂತೆ ಅನೇಕ ಸಂಸ್ಥೆಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸವಿತಾ ಪಾಟೀಲ, ಪಲ್ಲವಿ ನಾಯಕ, ತಬಸುಮ್ ಯಲ್ಲಾಪುರ, ಅಕ್ಕಮಹಾದೇವಿ ಮಣ್ಣಮ್ಮನವರ, ಮೇಲ್ವಿಚಾರಕಿ ನವೀನಾ ಬಿ., ಸೇವಾ ಪ್ರತಿನಿಧಿ ವೀಣಾ, ಕಚೇರಿ ಸಹಾಯಕ ಪ್ರದೀಪ, ಪತ್ರಕರ್ತ ಕೆ.ಎಸ್. ನಾಗರಾಜ್ ಹಾಗೂ ಇನ್ನಿತರ ಗಣ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕವಿತಾ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಯೋಜನಾ ಮೇಲ್ವಿಚಾರಕಿ ಬಿ. ಗೌರಮ್ಮ ಸ್ವಾಗತಿಸಿದರು. ಸೇವಾ ಪ್ರತಿನಿಧಿ ನಂದಿನಿ ನಿರೂಪಿಸಿದರು ಹಾಗೂ ಕೊನೆಯಲ್ಲಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 