ಬಾಣಂತಿರಯರ ಸರಣಿ ಸಾವುಗಳ ಹಿನ್ನೆಲೆ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನಾ ಮೆರವಣಿಗೆ

A protest march by Mahila Morcha against the background of serial deaths of Banantirayas

ಬಾಣಂತಿರಯರ ಸರಣಿ ಸಾವುಗಳ ಹಿನ್ನೆಲೆ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನಾ ಮೆರವಣಿಗೆ 

ವಿಜಯಪುರ 06: ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ, ವತಿಯಿಂದ ರಾಜ್ಯದಲ್ಲಿ ಮುಂದುವರೆದಿರುವ ಬಾಣಂತಿರಯರ ಸರಣಿ ಸಾವುಗಳ ಹಿನ್ನೆಲೆ ಮಹಿಳಾ ಮೋರ್ಚಾ, ವಿಜಯಪುರ ವತಿಯಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು. 

ನಗರದ ಅಂಬೇಡ್ಕರ್ ಸರ್ಕಲ್‌ದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗಳಾದ ಸೋಮನಿಂಗ ಗೆಣ್ಣೂರ ರವರಿಗೆ ಮನವಿ ಸಲ್ಲಿಸಲಾಯಿತು. 

ಪ್ರತಿಭಟನೆಯಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಕಣಮುಚನಾಳ ಮಾತನಾಡಿ ಸರಕಾರಿ ಆಸ್ಪತ್ರೆಗಳಲ್ಲಿ ಸಾವನಪ್ಪಿರುವ ಬಾಣಂತಿಯರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ರಾಜ್ಯಾದ್ಯಂತ ನಿರಂತರವಾಗಿ ಬಡಕುಟುಂಬಗಳ ತಾಯಂದಿರು ಹಾಗೂ ಹಸುಗೂಸುಗಳು ಸಾವು ನೋವುಗೊಳಗಾಗುತ್ತಿದ್ದರೂ ಜನಸಾಮಾನ್ಯರು ಬೀದಿಗಿಳಿದೆ ಪ್ರತಿಭಟನೆ ನಡೆಸಿದರೂ ಎಚ್ಚುತ್ತುಕೊಳ್ಳದ ಸರಕಾರ ಕ್ರಮ ಕೈಕೊಳ್ಳಲು ತಾತ್ಸಾರ ಧೋರಣೆ ತಾಳಿದೆ. ಕಾಂಗ್ರೆಸ್ ಸರಕಾರಕ್ಕೆ ಜನಸಾಸಾಮನ್ಯರು ಬಡವರಾ ಶಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷರಾದ ಶಿಲ್ಪಾ ಕುದುರಗೊಂಡ ಮಾತನಾಡಿ ಬೇಜವಾಬ್ದಾರಿಯಿಂದ ಆಡಳಿತ ನಡೆಸುತ್ತಿರುವ ಮತ್ತು ಸರಣಿ ಸಾವು ಸಂಭವಿಸುತ್ತಿದ್ದರೂ ಇದಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತಿರುವ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸಚಿವ ಸಂಪುಟದಿಂದ ಸಿ.ಎಂ. ಅವರು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. 

ಸುಷ್ಮತಾ ವಾಂಡಕರ, ಸಾಮಿ ಎಸ್‌. ಹಿಕ್ಕನಗುತ್ತಿ, ಮಧು ಬ. ಪಾಟೀಲ, ಗೀತಾ ಚೌಧರಿ, ವಿಜಯಲಕ್ಷ್ಮೀ ರೂಗಿಮಠ, ಅನುಸೂಯಾ ಮದರಿ, ಭಾರತಿ ಶಿವಣಗಿ ಲಕ್ಷ್ಮೀ ಕನ್ನೊಳ್ಳಿ ನೀಲಮ್ಮ ಯಡ್ರಾಮಿ, ಸುವರ್ಣಾ ಯಡ್ರಾಮಿ, ಮಾಮವ್ವ ಉಪ್ಪಾರ, ದಿಶಾ ಚಿಕ್ಕನಾಥ, ಸ್ವೀತಾ ಹುಣಶ್ಯಾಳ, ಪ್ರೇಮಾ ಕರಡಿ, ರಾಜಲಕ್ಷ್ಮೀ ಪರವತ್ತನೂರ, ಛಾಯಾ ಬಿ.ಎಮ್‌. ಭಾರತಿ ಪೂತದಾರ, ಸುನಂದಾ ಗಿರಣಿವಡ್ಡರ, ಬೋರಮ್ಮ ನಾವಿ, ಶಾಮಲಾ ಬಗಲಿ ರೇಣುಕಾ ಗುನ್ನಾಪೂರ ಹಾಗೂ ಇತರರು ಉಪಸ್ಥಿತರಿದ್ದರು.