ವಾಲ್ಮೀಕಿ ನಿಗದ ಚೇತನ ಕೋಳರಗಿಯವನ್ನು ಮುಂದೊರೆಸಲು ಮನವಿ
ವಿಜಯಪುರ, 28: ವಿಜಯಪುರ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಜಿಲ್ಲಾ ಕಛೇರಿಯಲ್ಲಿ ಹೊರಮೂಲ ಸಿಬ್ಬಂದಿಯಾದ ಚೇತನ ಶಿವರಾಮ ಕೋಳರಗಿಯವರನ್ನು ಮುಂದುವರೆಸಬೇಕೆಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಸರ್ಕಾರದ ಪರಿಶಿಷ್ಠ ಪಂಗಡದ ಪ್ರಧಾನ ಕಾರ್ಯದರ್ಶಿಗಳಾದ ಡಿ. ರಂದೀಪ ಅವರಿಗೆ ವಾಲ್ಮೀಕಿ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು.
ವಿಜಯಪುರ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ವಿಜಯಪುರ ಜಿಲ್ಲಾ ಕಛೇರಿಯಲ್ಲಿ ಹೊರಮೂಲ ನೌಕರನಾದ ಚೇತನ ಶಿವರಾಮ ಕೋಳುರಗಿ ಇವರು ನಿಗಮದ ಕೆಲಸವನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದು, ನುರಿತ ಅನುಭವವುಳ್ಳ ನೌಕರನಾಗಿರುವುದರಿಂದ ಸೇವೆಯು ಜಿಲ್ಲಾ ಕಛೇರಿಗೆ ಅವಶ್ಯಕತೆ ಇರುತ್ತದೆ. ಫಲಾನುಭವಿಗಳಿಗೆ ಸರಿಯಾಗಿ ಸ್ಪಂದಿಸಿ ಅತ್ಯುತ್ತಮವಾಗಿ ಕೆಲಸವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದು ಸದರಿಯವರನ್ನು ಮುಂದುವರೆಸಲು ಈ ಮೂಲಕ ಕೋರಲಾಗಿದೆ. ಇವರ ಮುಂದುವರೆದು ಈಗಾಗಲೇ ನಿಗಮದ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯಾ ಬಂದಿದ್ದು, 2022-23ನೇ ಸಾಲಿನಿಂದ ಇಲ್ಲಿಯವರೆಗೆ ನಿಗಮದಿಂದ ಆಯ್ಕೆಯಾದ ಯಾವುದೇ ಫಲಾನುಭವಿಗಳಿಗೆ ಇನ್ನು ಸಹಾಯಧನ ಸಾಲ ಸೌಲಭ್ಯಾ ಕಲ್ಪಿಸಿರುವುದಿಲ್ಲ. ವಾಲ್ಮೀಕಿ ಸಮಾಜ ಕುಟುಂಬವು ಸಾಕಷ್ಟು ವಂಚಿತಗೊಂಡಿದ್ದಾವೆ. ಇಂತಹ ಸಮಯದಲ್ಲಿ ಜಿಲ್ಲಾ ಕಛೇರಿಯಲ್ಲಿ ಒಬ್ಬರೆ ಸಿಬಂದಿ ಇದ್ದು ಅವರನ್ನು ಸಹ ಕೆಲಸದಿಂದಾ ತೆಗೆದುಹಾಕಿದ್ದಾರೆಂದು ತಿಳಿದು ಬಂದಿರುತ್ತದೆ. ಈ ರೀತಿಯಾದಲ್ಲಿ ಪರಿಶಿಷ್ಟ ಪಂಗಡದ ಜನರು ಎಲ್ಲಿಗೆ ಹೋಗಬೇಕು. ಈ ಕೂಡಲೇ ಜಿಲ್ಲಾ ಕಛೇರಿಗೆ ಸಿಬ್ಬಂದಿಯನ್ನು ನಿಯೋಜಿಸಿ ಕೆಲಸ ಕಾರ್ಯರೂಪಕ್ಕೆ ತಂದು ವಂಚಿತಗೊಂಡ ವಾಲ್ಮಿಕಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜನ ಬಟಗಿ, ರಾಯಚೂರ ಜಿಲ್ಲೆಯ ಅಧ್ಯಕ್ಷರಾದ ಲಿಂಗಯ್ಯ ನಾಯ್ಕ ಒತ್ತಾಯಿಸಿದ್ದಾರೆ.