ಮಗವಿನ ಬೆಳವಣಿಗೆಯಲ್ಲಿ ತಾಯಿ ಪಾತ್ರ ಬಹುಮುಖ್ಯವಾದ್ದು: ಯಶವಂತ ಪಾಟೀಲ

A mother's role is very important in the development of her son: Yashwant Patil

ಮಗವಿನ ಬೆಳವಣಿಗೆಯಲ್ಲಿ ತಾಯಿ ಪಾತ್ರ ಬಹುಮುಖ್ಯವಾದ್ದು: ಯಶವಂತ ಪಾಟೀಲ 

ಇಂಡಿ 30: ತಾಲ್ಲೂಕಿನ ಬಬಲಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ನೇ ವರ್ಗದ ವಿದ್ಯಾರ್ಥಿಗಳಿಗ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಬಹುಮುಖ್ಯವಾದದ್ದು. ಮನೆಯ ಮೊದಲು ಪಾಠ ಶಾಲೆ ತಾಯಿ ಮೊದಲು ಗುರು ಎನ್ನುವ ಹಾಗೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿರುವುದರ ಮೂಲಕ ಭವ್ಯ ಭಾರತದ ಪ್ರಜೆಗಳನ್ನಾಗಿ ಮಾಡಿ ಎಂದು ಹೇಳಿದರು.ನಂತರ ಮಾತನಾಡಿದ ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು  ಮಕ್ಕಳು ತಮ್ಮ ಗುರಿಯನ್ನು ಸಾಧಿಸಲು ಇಂತಹ ಉತ್ತಮ ಶಿಕ್ಷಣ  ಕಲಿತು ಹೆಚ್ಚಿನ ಅಂಕ ಪಡೆದು ತಮ್ಮ ಗುರಿಯತ್ತ ಸಾಗಬೇಕು ಹಾಗೂ ಮಕ್ಕಳಿಗೆ ಪಾಲಕರ ಹೆಚ್ಚಿನ ಜವಾಬ್ದಾರಿ ವಹಿಸಿ ಅವರ ತಮ್ಮ ಗುರಿ ಮುಟ್ಟುವಹಾಗೆ ಸಹಕರಿಸಬೇಕು. ಮಕ್ಕಳು ಇನ್ನು ಉತ್ತರುತ್ತರವಾಗಿ ಬೆಳಿಯಲಿ, ಮಕ್ಕಳ ಬದುಕು ಹಸನಾಗಿಸಲು ಎಂದು ಹೇಳಿದರು.ನಂತರ ಮಾತನಾಡಿದ ಹಿರಿಯ ಸಾಹಿತಿ ಸಿದ್ದಪ್ಪ ಬೀದರಿ ಮಾತನಾಡಿ ಭಾರತ ಭವ್ಯವಾದ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರವಾಗಿದೆ. 

ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಎಲ್ಲರ ಕೆಲಸವಾಗಬೇಕು,ಮಕ್ಕಳಿ ಶಿಕ್ಷಣದ ಜೊತೆಗೆ ವ್ಯವಸಾಯದ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಹೇಳಿದರು.ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಪರಮ ಪೂಜ್ಯ ಮಾತುಶ್ರೀ ವಿದ್ಯಾದೇವಿ ತಾಯಿ ಆರೂಢಾಶ್ರಮ ಕಲಬುರಗಿ,ಬಬಲಾದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಿದ್ಧರಾಯಗೌಡ ಬರಾದಾರ, ಎಸ್ಡಿಎಂಸಿ ಅಧ್ಯಕ್ಷರಾದ ಬಸವರಾಜ್ ಪಾರೆ , ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ, ಕ್ಷೇತ್ರ ಸಮನ್ವಯ ಅಧಿಕಾರಿ ಎಸ್ ಆರ್ ನಡುಗಡ್ಡಿ,ಬಬಲಾದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್ ಡಿ ಬಿರಾದಾರ, ಶಿಕ್ಷಣ ಸಂಯೋಜಕರಾದ ಎ ಸಿ ಹುಣಸಿಗಿ ಹಾಗೂ ಎಂ ಜಿ ಚೌಧರಿ, ಎಚ್ ಎಂ ಮಾಳಗೊಂಡ, ಯಶವಂತ ಪಾಟೀಲ, ದಾದಾ ಶ್ಯಾಮಣ್ಣವರ ಬಬಲಾದ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಹಾಗೂ ಎಸ್ ಡಿ ಎಂ ಸಿ ಸದಸ್ಯರು ಹಾಗೂ ಪಾಲಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.