ನಗರದ ಜೋಡ ಮಾರುತಿ ದೇವಸ್ಥಾನ ಹತ್ತಿರ ಹೈಟೆಕ್ ತಂತ್ರಜ್ಞಾನಯುಳ್ಳ ನವೀಕೃತ ಶುದ್ಧ ನೀರಿನ ಘಟಕ ಲೋಕಾರೆ್ಣ
A modernized pure water unit with high-tech technology is being built near the Joda Maruti temple i
ಗದಗ 29: ಅವಳಿ ನಗರವಾದ ಗದಗ ಬೆಟಗೇರಿ ನಗರದ ಪ್ರಮುಖ ಮಧ್ಯವರ್ತಿ ಸ್ಥಳವಾದ ಜೋಡು ಮಾರುತಿ ದೇವಸ್ಥಾನದ ಹತ್ತಿರದಲ್ಲಿ ಕೆ ಎಚ್ ಪಾಟೀಲ್ ಪ್ರತಿಷ್ಠಾನ ಹಾಗೂ ಎಚ್ ಕೆ ಪಾಟೀಲ್ ಸೇವಾ ತಂಡದ ಸಂಯುಕ್ತಾಶ್ರಯದಲ್ಲಿ ಇಂದು ದಿನಾಂಕ 29/01/2026 ರಂದು ಬೆಳಿಗ್ಗೆ 10 ಘಂಟೆಗೆ ಶ್ರೀ ಎಚ್.ಕೆ. ಪಾಟೀಲ್ ಸೇವಾ ತಂಡದ ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಹೈಟೆಕ್ ತಂತ್ರಜ್ಞಾನಯುಳ್ಳ ನವೀಕೃತ ಶುದ್ಧ ನೀರಿನ ಘಟಕವನ್ನು ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಬೋಳನವರ ರವರು ಲೋಕಾರೆ್ಣಗೊಳಿಸಿದರು
ಈ ಒಂದು ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರಾದ ಪ್ರಭು ಬುರಬುರೆಯವರು ಮಾತನಾಡಿ ಶುದ್ಧ ನೀರಿನ ಘಟಕಗಳ ಮೂಲಕ ಬಡಾವಣೆಯ ನಾಗರಿಕರಿಗೆ ಕೇವಲ 2 ರೂಪಾಯಿಗೆ 20 ಲೀಟರ್ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿದ್ದು, ಇದು ಜನಸಾಮಾನ್ಯರಿಗೆ ಅತ್ಯಂತ ಅನುಕೂಲಕರವಾಗಿರುತ್ತದೆ. ಎಚ್.ಕೆ. ಪಾಟೀಲ್ ಸೇವಾ ತಂಡವು ಸದಾ ಜನಪರ ಸೇವೆ, ಸಮಾಜಮುಖಿ ಕಾರ್ಯಗಳು ಹಾಗೂ ಸಾರ್ವಜನಿಕರ ಕಲ್ಯಾಣಯುಕ್ತ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಶ್ರಮಿಸುತ್ತಾ ಬಂದಿದೆ. ಇಂತಹ ಜನಪರ ಕಾರ್ಯಗಳು ಮುಂದುವರಿಯಲಿ ಎಂಬುದುನಮ್ಮ ನಿಮ್ಮೆಲ್ಲರ ಆಶಯ. ಆ ಪ್ರಯುಕ್ತ ಸಮಸ್ತ ನಾಗರಿಕ ಬಂಧುಗಳ ಸಹಾಯ, ಸಹಕಾರ ಹಾಗೂ ನೈತಿಕ ಬೆಂಬಲ ಸದಾ ಅವಶ್ಯಕ ಎಂದು ನುಡಿದರು.
ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಬೋಳನವರ, ಗದಗ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಶ್ರೀಮತಿ ಸಾವಿತ್ರಿ ಹೂಗಾರ, ಕಾಂಗ್ರೇಸ್ ಮಹಿಳಾ ಮುಖಂಡರಾದ ಗೀತಾಬಾಯಿ ಹಬೀಬ್, ಎಚ್ ಕೆ ಪಾಟೀಲ್ ಸೇವಾ ತಂಡದ ಕೋ ಆರ್ಡಿನೇಟರ್ ರಾದ ರಾಮಣ್ಣ ಬಾಕಳೆ, ಆನಂದ ಸರ್ವದೆ, ಅಂಬಾಲಾಲ್ ಖೋಡೆ, ಮಲ್ಲಣ್ಣ ಹಡಪದ್, ಮಹಮ್ಮದ್ ಬೆಟಗೇರಿ, ವಿಜಯಕುಮಾರ ಹಾಲಮಠ,ಮಂಜುನಾಥ್ ಜೋಗದಂಡಕರ, ಮೋಹನ ಪವಾರ, ಕೆ ಎಚ್ ಪಾಟೀಲ್ ಸೇವಾ ತಂಡದ ಕ್ಯಾಪ್ಟನರಾದ ಶಿವಪ್ಪ ತಿಪ್ಪಣ್ಣ ಬಳ್ಳಾರಿ, ಶಿವು ಚವಾಣ್,ಶ್ರೀಮತಿ ಮುಸ್ಕಾನ್ ಕೊಪ್ಪಳ, ಪ್ರವೀಣ ವಾರಕರ, ಸಂಜಯ ದಲಬಂಜನ, ವಿಶಾಲ ಸಿದ್ಲಿಠ, ಹಾಗೂ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಹಾಗೂ ಸಮಸ್ತ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 