ಸೃಜನಾತ್ಮಕ ಕಲಿಕೆಗೆ ತಯಾರಿ ಕಲಿಕಾ ಹಬ್ಬ: ಕಪನಿಂಬರಗಿ

ಸೃಜನಾತ್ಮಕ ಕಲಿಕೆಗೆ ತಯಾರಿ ಕಲಿಕಾ ಹಬ್ಬ: ಕಪನಿಂಬರಗಿ  A learning festival preparing for creative learning: Kapanimbaragi

           ದೇವರಹಿಪ್ಪರಗಿ 30: ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಗುಣ ಮತ್ತು ಕಲೆಯನ್ನು ಹೊರಗೆಳೆಯಲು ಪೂರ್ವತಯಾರಿ ನಡೆಸುವ ಹಬ್ಬವೇ ಕಲಿಕಾ ಹಬ್ಬ ಎಂದು ತಾಲೂಕು ಶಿಕ್ಷಣ ಸಂಯೋಜಕ ಎಸ್‌.ಎಮ್‌.ಕಪನಿಂಬರಗಿ ಅಭಿಪ್ರಾಯಪಟ್ಟರು.  ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಸಿದ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. 

   ಕಲಿಕಾ ಹಬ್ಬವು ಮಕ್ಕಳಲ್ಲಿರುವ ವಿವಿಧ ಬಗೆಯ ಪ್ರತಿಭೆಯ ಸಾಮರ್ಥ್ಯವನ್ನು ಪ್ರಸ್ತುತಪಡಿಸಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುತ್ತದೆ. ಕಲಿಕಾ ಹಬ್ಬ ಚಟುವಟಿಕೆ ಆಧಾರಿತವಾಗಿದೆ. ಇದರಿಂದ ಹೊಸ ಹೊಸ ಬಗೆಯ ಪಠ್ಯೇತರ ಚಟುವಟಿಕೆಯನ್ನು ಮಗು ಕಲಿಯಲು ಸಾಧ್ಯವಾಗುತ್ತದೆ. ಮಗುವಿನಲ್ಲಿ ಗುಪ್ತವಾಗಿರುವ ಜ್ಞಾನವನ್ನು ಚಟುವಟಿಕೆಯ ಮೂಲಕ ತೆರೆದಿಡಬಹುದು. ಇದರಿಂದ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕವಾಗಿ ಬಲಗೊಳ್ಳುವಂತೆ ಕಲಿಕಾ ಹಬ್ಬ ಮಾಡುತ್ತದೆ.

           ಒಟ್ಟಾರೆ ಮಕ್ಕಳ ಸವಾಂರ್ಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ. ಶಿಕ್ಷಕರು ವರ್ಷವಿಡಿ ಮಕ್ಕಳಿಗೆ ತರಗತಿಯಲ್ಲಿ ಪಾಠ ಬೋಧನೆ ಮಾಡುವುದರಿಂದ ಪುಸ್ತಕದ ಹುಳಗಳನ್ನಾಗಿ ಮಾಡಿದಂತಾಗುತ್ತದೆ. ಅದರ ಜೊತೆಗೆ ಚಟುವಟಿಕೆ ಆಧಾರಿತ ಕಲೆಯನ್ನು ಮಕ್ಕಳಲ್ಲಿ ತುಂಬಿದರೆ ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಲು ಕಲಿಸಿಕೊಟ್ಟಾಂತಾಗುತ್ತದೆ ಎಂದು ಹೇಳಿದರು.  

           ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಅಮೀರ್ ಮಾಕಂದಾರ ವಹಿಸಿದ್ದರು. ಸಿಆರ್‌ಪಿ ಎಫ್‌.ಎನ್‌.ನದಾಫ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಅಬ್ದುಲ್ ಅಜೀಜ ಬಾಗವಾನ ವಂದಿಸಿದರು.  ಶಾಲೆಯ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.