ಲೋಕದರ್ಶನ ವರದಿ
ವಿಜಯಪುರ 04 : ಭಾರತ ಧ್ಯಾನ, ಯೋಗ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿ ಸ್ವಾಸ್ಥ್ಯ ಸಮಾಜವನ್ನು ನೀಡುವ ಪುಣ್ಯಭೂಮಿಯಾಗಿದೆ ಎಂದು ಆಸ್ಟ್ರೇಲಿಯಾದ ವಿದ್ವಾಂಸರೊಬ್ಬರು ಡಾ. ವಿಜಯಲಕ್ಷ್ಮೀ ಬಾಳಿಕುಂದ್ರಿಯವರನ್ನು ಪರಿಚಯ ಮಾಡುವ ಸಂದರ್ಭದಲ್ಲಿ ಹೇಳಿದರೆಂದು, ಮುಖ್ಯ ಅತಿಥಿಯಾಗಿ ಆಗಮಿಸಿರುವ ಖ್ಯಾತ ವೈದ್ಯ ಸಾಹಿತಿ ಡಾ. ವಿಜಯಲಕ್ಷ್ಮೀಯವರು ಹೇಳಿದರು. ಅದಕ್ಕಾಗಿ 111 ವರ್ಷ ಬದುಕಿ ಬಾಳಿದ ಸಿದ್ಧಗಂಗಾ ಶ್ರೀಗಳನ್ನು ಸ್ಮರಿಸಬೇಕೆಂದರು.
ನಗರದ ಬಿಎಲ್ಡಿಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ.ಸಿ.ಬಿ. ವಿಜ್ಞಾನ ಮಹಾವಿದ್ಯಾಲಯದ ಸಹಯೋಗದೊಂದಿಗೆ ಪ್ರಾ. ಎ.ಎಸ್.ಹಿಪ್ಪರಗಿ ಪ್ರತಿಷ್ಠಾನದ 15ನೇ ವಾಷರ್ಿಕೋತ್ಸವ, ಶಿವಕುಮಾರ ಕೊಂತಿಕಲ್, ಸಿದ್ದಪ್ಪ ಗೋಟ್ಯಾಳ ಮತ್ತು ಗಿರಿಮಲ್ಲಪ್ಪ ಬಜಂತ್ರಿ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು.
ವ್ಯಕ್ತಿತ್ವ ಎಂದರೆ ವಿಕಸನ ವಿ-ವಿಕಾಸ, ಕ-ಕಣ್ಣಿನಲ್ಲಿ ಕನಸು, ಸ-ಸಂತೋಷ, ನ-ನಯ ವಿನಯ ಬೆಳೆಸಿಕೊಂಡಾಗ ಮಾತ್ರ ಆದರ್ಶತನ ಬದುಕಿಗೆ ಮಾದರಿ ಆಗಲು ಸಾಧ್ಯ. ತಾವು ವ್ಯಸನ ಮುಕ್ತವಾಗುವುದರಿಂದ ದುಃಖ ದುರಾಭ್ಯಾಸವನ್ನು ಹೋಗಲಾಡಿಸಲು ಸಾಧ್ಯ ಅದರಿಂದ ಸುಚಿತ್ವ, ಸ್ವಚ್ಚ, ಆರೋಗ್ಯ ಇವು ಮನುಷ್ಯನನ್ನು ಧರ್ಮನಿಷ್ಠಕನಾಗಿ ಮಾಡುತ್ತವೆಂದರು.
ಬೇಟಿ ಪಡಾವೊ, ಬೇಟಿ ಬಚಾವೊ- ಹೆಣ್ಣು ಮಕ್ಕಳನ್ನು ಓದಿಸಿ, ಶಿಕ್ಷಣವು-ಕೇಳಿ, ಓದಿ, ನೋಡಿ, ಆಡಿ ಮತ್ತು ಮಾಡಿ ಆತ್ಮಸ್ಥೈರ್ಯದಿಂದ ಮುನ್ನಡೆದಾಗ ಅಪೇಕ್ಷಿಸಿದ ಗುರಿಯನ್ನು ಮುಟ್ಟಲಾಗುತ್ತದೆ. ಅದಕ್ಕೆ ತಾಯಿ, ತಂದೆ, ಗುರುಗಳೇ ನಮಗೆ ಸಾಕಿ ಸಲುಹವುವರೇ ನಮಗೆ ದೇವರು. ಉತ್ತಮ ಲೇಖನಗಳಿಂದಲೂ, ಚಚರ್ೆ, ಭಾಷಣದಿಂದಲೂ ವ್ಯಕ್ತಿಗಳ ಮನಸ್ಸನ್ನು ಬದಲಿಸಲು ಸಾಧ್ಯವಿದೆ ಎಂದು ತಮ್ಮ ಅಂಕಣದಿಂದ ಬರುವ ಲೇಖನಗಳನ್ನು ಉದಾಹರಿಸಿ ವಿದ್ಯಾಥರ್ಿಗಳಿಗೆ ಸಂದೇಶ ನೀಡಿದರು.
ಒಟ್ಟಿನಲ್ಲಿ ಗಿಡ ಬೆಳಿಸುವದು, ಜ್ಞಾನ, ವಿಜ್ಞಾನ, ತತ್ವಜ್ಞಾನ ಮೂರರ ಸಂಗಮ ಅಳವಡಿಸುವದು. ತಾಯಿ ಮಕ್ಕಳಿಗೆ ತಲೆ ಸವರುವದು, ತಂದೆಯ ಶ್ರಮದ ಬೇವರು, ಗುರುಗಳ ಆಶರ್ಿವಾದ ಬಹುಮುಖ್ಯ. ಸತ್ಯಶುದ್ಧಕಾಯಕದಿಂದ ಮನಸ್ಸಿನ ಒತ್ತಡ ಕಡಿಮೆ ಮಾಡಿ, ನಿರಂತರ ಅಧ್ಯಯನದಲ್ಲಿ ತೊಡಗಿರಿ ಆಗ ಎಂತವನು ವಿದ್ಯೆಗೆ ತಲೆ ಬಾಗುವನು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ ಇಂತಹ ಕಾರ್ಯಕ್ರಮಗಳನ್ನು ಭಾಗವಹಿಸುವದರಿಂದ ರಾಜಕಾರಣಿಗಳಿಗೂ ಸಮಾಧಾನ ನೀಡುತ್ತದೆ. 15 ವರ್ಷದಿಂದ ನಡೆದುಕೊಂಡು ಬಂದಿರುವ ಬಗ್ಗೆ ಪ್ರಶಂಸಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಕೆ.ಜಿ.ಪೂಜಾರಿ ವಹಿಸಿದ್ದರು. ಐಶ್ವರ್ಯ ಪ್ರಾಥರ್ಿಸಿದರೆ, ವಿ.ಸಿ.ನಾಗಠಾಣ ಪರಿಚಯಿಸಿ ಸನ್ಮಾನಿಸಿದರು. ಡಾ. ವಿ.ಡಿ.ಐಹೊಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಧಕರ ಪರಿಚಯ ದೊಡ್ಡಣ್ಣ ಬಜಂತ್ರಿ ಮಾಡಿದರು. ಕಾರ್ಯಕ್ರಮ ನಿರೂಪಣೆ ಬಿ.ಕೆ.ಗೊಟ್ಯಾಳ ಮಾಡಿದರು. ಶ್ರೀಮತಿ ಬಿ.ಸಿ.ಹತ್ತಿ ವಂದಿಸಿದರು. ಮಹಾಂತ ಗುಲಗಂಜಿ, ಶಂಭು ತುಪ್ಪದ, ಆರ್.ಕೆ.ಕುಲಕಣರ್ಿ, ಅರವಿಂದ ಕಂಚ್ಯಾಣಿ, ಎಸ್.ವಾಯ್.ಗದಗ, ಮುಗುಚಿ, ಡಾ.ಅಂಬಲಿ, ಡಾ. ಮೆಹರವಾಡೆ, ಡಾ. ಪವಾರ ಮತ್ತಿತರರು ಇದ್ದರು.