ಅದ್ಧೂರಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ವಿಜಯಪುರ 09: ಸಾಯಿ ಪಾರ್ಕ್‌ನ ಎಗ್ಝಾಟಿಕಾ ಕಾಲನಿಯಲ್ಲಿ ರಾಣಿ ಚನ್ನಮ್ಮ ಸ್ವಸಹಾಯ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಜಗತ್ತಿನಲ್ಲಿ ಬಹುತೇಕ ವಿಚಾರಗಳಿಗೆ ಒಂದೊಂದು ದಿನ ಮೀಸಲಿಟ್ಟಿರುವಂತೆ ಮಹಿಳೆಯರಿಗೂ ಕೂಡ ಒಂದು ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಅದೇ ವಿಶ್ವದಾದ್ಯಂತ ಆಚರಣೆ ಮಾಡುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದೆ. ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ಸ್ವಸಹಾಯ ಸಂಘದ ಎಗ್ಝಾಟಿಕಾ ಕಾಲನಿಯ ಸಾಯಿ ಪಾರ್ಕ್ ಸಂಘದ ಅಧ್ಯಕ್ಷರಾದ ಗೌರಾಬಾಯಿ ಕುಬಕಡ್ಡಿ, ಉಪಾಧ್ಯಕ್ಷರಾದ ಶಾಂತಾ ಬಿರಾದಾರ, ಶೋಭಾ ಮೇಂಡೇಗಾರ್, ಗೌರಮ್ಮ ರೆಡ್ಡಿ, ಇಂದುಮತಿ ಬಿದರಿ, ಸುನಿತಾ ಪಾಟೀಲ, ಕಾಲೋನಿಯ ಹಿರಿಯರಾದ ಶಾಂತವ್ವ ಇಜೇರಿ, ಲೀಲಾಬಾಯಿ ಕಂಪ್ಲಿಕರ್, ಶಿಲ್ಪಾ ಕುಲಕರ್ಣಿ, ಪವಿತ್ರ ಕಂಪ್ಲಿಕರ್, ಮೀರಾ ಕಂಪ್ಲಿಕರ್, ದೇವಕಿ ನಾಯಕ, ಸವಿತಾ ಬೋಳೆಗಾವ್, ಮಂಜುಳಾ ಚಕ್ರವರ್ತಿ, ಮಂಗಳಾ ರೋಗಿ, ಲಕ್ಷ್ಮೀ ಚಿಮ್ಮುಲಗಿ, ಲಕ್ಷ್ಮೀ ಮೂಲಿಮನಿ, ನಂದಿನಿ ಹಜೇರಿ, ಲಕ್ಷ್ಮೀ ಇಜೇರಿ, ಕಾಶಮ್ಮ ವಾಲಿಕಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶೋಭಾ ಕಸನಕ್ಕೆ ಸ್ವಾಗತಿಸಿದರು. ಗೌರಾಬಾಯಿ ಕುಬಕಡ್ಡಿ ನಿರೂಪಿಸಿದರು. ವಿಜಯಲಕ್ಷ್ಮಿ ಹುರುಗಡ್ಲಿ ವಂದಿಸಿದರು.