ಬೆಟಗೇರಿಯಲ್ಲಿ ಸಂಭ್ರಮದಿಂದ ನಡೆದ ಬಣ್ಣದಾಟ
A festive color parade was held in Betageri
ವರದಿ: ಅಡಿವೇಶ ಮುಧೋಳ.
ಬೆಟಗೇರಿ 04 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಕಾಮಣ್ಣನ ದಹನ ಹಾಗೂ ಬಣ್ಣದಾಟ ದಿನವಾದ ಮಾರ್ಚ.4ರಂದು ರಂಗು ರಂಗಿನ ಬಣ್ಣದೊಕುಳಿ ಸಡಗರ, ಸಂಭ್ರಮದಿಂದ ನಡೆಯಿತು.
ಸಂಪ್ರದಾಯದಂತೆ ಗ್ರಾಮದ ಹಿರಿಯರು ಬೆಳಗ್ಗೆ 6 ಗಂಟೆಗೆ ಗ್ರಾಮದ ದಲಿತ ಕೇರಿಯ ಕಾಮಣ್ಣನ ದಹನಕ್ಕೆ ಚಾಲನೆ ನೀಡಿದ ಬಳಿಕ ಸ್ಥಳೀಯ ಮಾರುಕಟ್ಟೆ ಆವರಣದಲ್ಲಿ ಬೆರಣಿ, ಕಟ್ಟಿಗೆ ಸಂಗ್ರಹಿಸಿದನ್ನು ಒಟ್ಟಿಗೆ ಸೇರಿಸಿ ಕಾಮ ದಹನಕ್ಕೆ ಪ್ರತಿಷ್ಠಾಪಿಸಲ್ಪಟ್ಟ ಕಾಮಣ್ಣನ ದಹನ ಮಾಡಲಾಯಿತು. ಎಲ್ಲ ಸಮುದಾಯದ ಹಿರಿಯರು, ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಕಾಮ ದಹನ ಕಾರ್ಯಕ್ರಮದಲ್ಲಿ ಇದ್ದರು.
ಕಾಮದಹನದಲ್ಲಿರುವ ಬೆಂಕಿಯುಕ್ತ ಕುಳ್ಳ ಮನೆತಂದು ಕಡಲೆ ಬೀಜ ಸುಟ್ಟು ತಿಂದು, ತೆಂಗಿನ ಕೊಬರಿಯ ಸುಟ್ಟು ಕಾಮಕರಿಯನ್ನು ಸ್ಥಳೀಯರು ಹಣೆಗೆ ನಾಮಕೂರೆದುಕೊಂಡು ಬಣ್ಣದಾಟದಲ್ಲಿ ಪಾಲ್ಗೊಂಡಿದ್ದರು. ರಾಸಾಯನಿಕಯುಕ್ತ ಬಣ್ಣ ಬಳಿಕೆ ಹಾಗೂ ಮಧ್ಯ ಸೇವನೆಗೆ ಕಡಿವಾಣ ಹಾಕಿರುವ ಸಂಗತಿ ಗ್ರಾಮದೆಲ್ಲೆಡೆ ಕಾಣುತ್ತಿತ್ತು. ಎರಡು ದಿನಗಳ ಕಾಲ ಗ್ರಾಮದ ನಾಗರಿಕರು, ಯುವಕರು, ಹೊಳಿ ಹಬ್ಬದ ಪ್ರಯುಕ್ತ ಹಂತಿ, ಲವಾಣಿ ಪದ ಒಬ್ಬರಿಗೊಬ್ಬರು ಜಿದ್ದಾ ಜಿದ್ದಿಯಾಗಿ ಹಾಡಿ ಕೇಳುಗರ ಮನ ರಂಜಿಸಿದರು.
ಗ್ರಾಮದ ಎಲ್ಲೆಡೆ ಹೋಳಿ ಹಬ್ಬದ ಪ್ರಯುಕ್ತ ಯುವಕರು, ಮಕ್ಕಳಿಂದ ಹಲಗೆ, ತಮಟೆಯ ನಿನಾದ ಬಲು ಜೋರಾಗಿತ್ತು. ಇಲ್ಲಿಯ ಎಲ್ಲ ಸಮುದಾಯದ ಹಿರಿಯರು, ಯುವಕರು, ಮಕ್ಕಳು, ಪುರುಷರು, ಮಹಿಳೆಯರು ಬಣ್ಣದೊಕುಳಿಯಲ್ಲಿ ಪಾಲ್ಗೊಂಡು ಒಬ್ಬರಿಗೊಬ್ಬರು ಬಣ್ಣ ಎರಚಿ ಬಣ್ಣದೊಕುಳಿಯಲ್ಲಿ ರಂಗು ರಂಗಾಗಿ ಮುಖಕ್ಕೆ ಬಣ್ಣ ಬಳಿದುಕೊಂಡು ಮಿಂದೆದ್ದು ಸಂಭ್ರಮಿಸಿ ಶಾಂತಿ ಸೌಹಾರ್ದತೆಯಿಂದ ಹೋಳಿ ಹಬ್ಬವನ್ನು ಸ್ಥಳೀಯರು ಆಚರಿಸಿದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 