ಉತ್ತಮ ಕಾರ್ಯಗಳ ಮೂಲಕ ಮತದಾರರ ಋಣ ತೀರಿಸಿ ಯುವ ಕಾಂಗ್ರೆಸ್ ಪಧಾದಿಕಾರಿಗಳ ಸತ್ಕಾರ ಸಮಾರಂಭ
ಚಿಮ್ಮಡ 9 : ಸರಕಾರದಿಂದ ಬರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ತಮಗೆ ಮತ ನೀಡಿರುವ ಮತದಾರರ ಋಣ ತೀರಿಸಬೇಕೆಂದು ಕಾಂಗ್ರೆಸ್ ಗ್ರಾಮ ಘಟಕದ ಅಧ್ಯಕ್ಷ ಉಮೇಶ ಪೂಜಾರಿ ಹೇಳಿದರು.
ಗ್ರಾಮದ ಕಾಂಗ್ರೆಸ್ ಕಛೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನೂತನವಾಗಿ ಆಯ್ಕೆಯಾದ ಯುವ ಪಧಾದಿಕಾರಿಗಳ ಸತ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಘಟಾನುಘಟಿ ನಾಯಕರು ಕೂಡ ಇಂತಹ ಚುನಾವಣೆಗಳ ಮೂಲಕವೇ ರಾಜಕೀಯ ಪ್ರವೇಶ ಮಾಡಿದ್ದು ನಿಮ್ಮ ಮುಂದಿನ ರಾಜಕೀಯ ಭವಿಷ್ಯ ಕೂಡ ಉಜ್ವಲವಾಗಲಿದೆ ಎಂದರು.
ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಅಶೋಕ ಧಡೂತಿ ಮಾತನಾಡಿ ಆಂತರಿಕ ಚುನಾವಣೆಗಳಲ್ಲಿ ಸೋತ ಅಭ್ಯರ್ಥೀಗಳು, ಗೆದ್ದ ಅಭ್ಯರ್ಥಿಗಳು ನಮ್ಮವರೇ ಆಗಿರುವುದರಿಂದ ಎಲ್ಲರನ್ನು ವಿಸ್ವಾಸಕ್ಕೆ ತೆಗೆದುಕೊಂಡು ಉತ್ತಮ ಕಾರ್ಯಗಳನ್ನು ಮಾಡಬೇಕೆಂದು ಸಲಹೆ ನೀಡಿದರು.
ಗ್ರಾ.ಪಂ. ಸದಸ್ಯ ಮಹಾಲಿಂಗ ಮಾಯನ್ನವರ ಮಾತನಾಡಿದರು. ಇದೇ ಸಂಧರ್ಬದಲಿದಿತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನೂತನವಾಗಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶೀಯಾಗಿ ಆಯ್ಕೆಯಾದ ಸೂರಜ ಅವಟಿ, ಬಾಗಲಕೋಟ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶೀಯಾಗಿ ಆಯ್ಕೆಯಾದ ಅಜಯಕುಮಾರ ಬಾಳಪ್ಪಾ ಗಾಣಿಗೇರ, ಸುನೀಲ ಹರಿಜನ, ತೇರದಾಳ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದ ಪ್ರವೀಣ ಪೂಜಾರಿಯವರನ್ನು ಸತ್ಕರಿಸಿ ಗೌರವಿಸಲಾಯಿತು.
ಪ್ರಮುಖರಾದ ಅಶೋಕ ಮೋಟಗಿ, ಮಹಾಲಿಂಗ ಬಳಗಾರ, ಶ್ರೀಶೈಲ ಮಠಪತಿ, ಅಶೋಕ ನಾವಿ, ಮಲ್ಲಿಕಾರ್ಜುನ ಬಳಗಾರ, ಪ್ರಭು ಬಿದರಿ, ಪಿರಸಾಬ ನದಾಫ, ರವಿ ದೊಡವಾಡ ಸೇರಿದಂತೆ ಹಲವಾರು ಜನ ಪ್ರಮುಖರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.