ಸುತ್ತಲಿನ ಪರಿಸರ ಸ್ವಚ್ಛವಾಗಿರುವುದೇ ಆರೋಗ್ಯ ಕಾಪಾಡುವ ಕವಚ, ಪ್ರತಿ ವ್ಯಕ್ತಿಯೂ ಒಂದು ಸಸಿಯನ್ನು ನೆಡುವ ಅಭ್ಯಾಸ ಬೆಳೆಸಿಕೊಳ್ಳಬೇಕು

 ಸುತ್ತಲಿನ ಪರಿಸರ ಸ್ವಚ್ಛವಾಗಿರುವುದೇ ಆರೋಗ್ಯ ಕಾಪಾಡುವ ಕವಚ, ಪ್ರತಿ ವ್ಯಕ್ತಿಯೂ ಒಂದು ಸಸಿಯನ್ನು ನೆಡುವ ಅಭ್ಯಾಸ ಬೆಳೆಸಿಕೊಳ್ಳಬೇಕು A clean environment is the shield that protects health. Every person should develop the habit of pl

ವಿಜಯಪುರ 15 : ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನೀಡಬೇಕಾದರೆ, ನಾವು ಇಂದು ಕೈಜೋಡಿಸಿ ಸೇವಾಭಾವದಿಂದ ಕಾರ್ಯನಿರ್ವಹಿಸುವುದು ಅಗತ್ಯ ಎಂದು ಮಹಿಳಾ ವಿವಿಯ ಎನ್‌.ಎಸ್‌.ಎಸ್ ಘಟಕದ ಸಂಯೋಜನಾಧಿಕಾರಿ ಪ್ರೊ.ಅಶೋಕಕುಮಾರ ಸುರಪುರ ಹೇಳಿದರು. 

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲದ ಎನ್‌.ಎಸ್‌.ಎಸ್‌. ಘಟಕ, ಭಾರತ ಸರ್ಕಾರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ರಾಷ್ಟ್ರೀಯ ಸೇವಾ ಯೋಜನೆಯ ನಿರ್ದೇಶನಾಲಯ, ಬೆಂಗಳೂರು ಮತ್ತು ಎನ್‌.ಎಸ್‌.ಎಸ್‌. ಕೋಶ ಇವರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಸ್ಮಚ್ಛತಾ ಚಟುವಟಿಕೆ‘ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಎನ್‌.ಎಸ್‌.ಎಸ್‌. ಸೇವೆಯ ಅರ್ಥವೇ ‘ನನಗಾಗಿ ಅಲ್ಲ, ನಮಗಾಗಿ’ ಎಂಬ ನುಡಿಗಟ್ಟು. ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿರುವುದೇ ನಮ್ಮೆಲ್ಲರ ಆರೋಗ್ಯ ಕಾಪಾಡುವ ಕವಚವಾಗಿದೆ. ಪ್ರತಿ ವ್ಯಕ್ತಿಯೂ ತಮ್ಮ ಜನ್ಮದಿನದಂದು ಒಂದು ಸಸಿಯನ್ನು ನೆಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಆ ಸಸಿ ಅಜರಾಮರಾಗಿ ಬೆಳೆದರೆ, ಅದು ನಮ್ಮ ಜೀವನಕ್ಕೆ ಅರ್ಥಪೂರ್ಣವಾದ ಕೊಡುಗೆ ಆಗುತ್ತದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಶಿಕ್ಷಣ ನಿಕಾಯ ಡೀನ ಪ್ರೊ. ಸಕ್ಪಾಲ್ ಹೂವಣ್ಣ ಮಾತನಾಡಿ, ಸ್ವಚ್ಛತೆ ಮತ್ತು ಜಾಗೃತಿ ಮೂಡಿಸುವ ಕಾರ್ಯವನ್ನು ಆರಂಭಿಸಿದವರು ಘಾಡಗೆ ಬಾಬಾ ಎಂದು ಅವರು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕ ಅವರ ಸೇವಾ ಮನೋಭಾವವನ್ನು ನೆನೆದು, ವಿದ್ಯಾರ್ಥಿನಿಯರೂ ಅವರಂತೆಯೇ ನಿಸ್ವಾರ್ಥ ಸೇವಕಿಯರಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಹಾರೈಸಿದರು. ರಾಷ್ಟ್ರೀಯ ಸೇವೆ ಎಂಬುದು ಧರ್ಮಹಿಜಾತಿ ಮುಕ್ತ, ಮನಶುದ್ಧ ಮತ್ತು ನಿಸ್ವಾರ್ಥತೆಯ ಕಾರ್ಯ. ಪರಿಸರದ ಶುದ್ಧತೆ ಮತ್ತು ಮನಶುದ್ಧತೆ ಎರಡೂ ಕೈಕೈ ಹಿಡಿದು ಸಾಗಬೇಕಾದ ಕಾರ್ಯ ಎಂದರು. 

ಕಾರ್ಯಕ್ರಮದಲ್ಲಿ ಎನ್‌.ಎಸ್‌.ಎಸ್‌. ಘಟಕ ‘ಬ’ ದ ಕಾರ್ಯಕ್ರಮ ಅಧಿಕಾರಿ ಡಾ.ಅಮರನಾಥ ಪ್ರಜಾಪತಿ, ಮುಕ್ತ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ದೀಪಕ ಶಿಂದೆ, ‘ಎ’ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಗುಲಾಬ ರಾಠೋಡ ಹಾಗೂ ‘ಶಿಕ್ಷಣ’ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಪ್ರಕಾಶ ಸಣ್ಣಕ್ಕನ್ನವರ, ಎನ್‌.ಎಸ್‌.ಎಸ್‌. ಕೋಶದ ಸಿಬ್ಬಂಧಿಗಳಾದ ಲಕ್ಷ್ಮೀ ಪಾರ್ಸಿ ಮತ್ತು ಇನಾಮದಾರ್ ಹಾಗೂ ಎಲ್ಲಾ ಘಟಕದಿಂದ ಸುಮಾರು 300 ಎನ್‌.ಎಸ್‌.ಎಸ್‌. ಸ್ವಯಂ ಸೇವಕಿಯರು ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಯು.ಜಿ. ‘ಎ’ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಭಾಗ್ಯಶ್ರೀ ಹ. ದೊಡಮನಿ ನಿರೂಪಿಸಿದರು. ಹಾಗೂ ವಿಶ್ವವಿದ್ಯಾನಿಲಯದ ಆಡಳಿತ ಭವನ, ಡಾ. ಬಿ.ಆರ್‌.ಅಂಬೇಡ್ಕರ್ ಭವನ ಮತ್ತು ಯು.ಜಿ. ಕಟ್ಟಡದ ಹೊರಾವರಣ ಸ್ವಚ್ಛತೆಯ ಕಾರ್ಯವನ್ನು ಪೂರ್ಣಗೊಳಿಸಿದರು.