ಪಾಲಿಕ್ಲಿನಿಕ್ ನೂತನ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭ
ಹಾವೇರಿ29: ಹಾವೇರಿ ಜಿಲ್ಲೆಯ ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಾಲಿಕ್ಲಿನಿಕ್ನ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ ಗುರುವಾರ ನಗರದಲ್ಲಿ ಜರುಗಿತು.
ಶಾಸಕರಾದ ನೆಹರು ಓಲೇಕಾರ ಅವರು ಅಡಿಗಲ್ಲು ಕಾಮಗಾರಿಗೆ ಚಾಲನೆ ನೀಡಿದರು. ಸದರಿ ಪಶುವೈದ್ಯಕೀಯ ಪಾಲಿಕ್ಲಿನಿಕ್ ಕಟ್ಟಡವು ಸುಸಜ್ಜಿತ ಮೇಲ್ದಜರ್ೆ ಆಸ್ಪತ್ರೆಯಾಗಿದ್ದು, ರೂ 2.10 ಕೋಟಿ ರೂಗಳಲ್ಲಿ 811.54 ಚ.ಮೀ ವಿಸ್ತೀರ್ಣದಲ್ಲಿ ನಿಮರ್ಿಸಿಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ಭಾಗಗಳಿಂದ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಬರುವ ಜಾನವಾರುಗಳಿಗೆ ಅನುಕೂಲಕರವಾಗಲಿದೆ.
ಈ ಪಶುವೈದ್ಯಕೀಯ ಪಾಲಿಕ್ಲಿನಿಕ್ ಕಟ್ಟಡವು ಸುಸಜ್ಜಿತವಾದ ಸಣ್ಣ ಹಾಗೂ ದೊಡ್ಡ ಪ್ರಾಣಿಗಳ ಪ್ರತ್ಯೇಕ ಶಸ್ತ್ರ ಚಿಕಿತ್ಸಾ ಕೊಠಡಿ, ಹೊರಚಿಕಿತ್ಸೆ, ಒಳಚಿಕಿತ್ಸೆ ಕೊಠಡಿ, ಕ್ಷ -ಕಿರಣ ಕೊಠಡಿ ಹಾಗೂ ಹಲವು ಉನ್ನತ ದಜರ್ೆಯ ಸೌಕರ್ಯವನ್ನು ಒಳಗೊಳ್ಳಲಿದೆ.
ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿದರ್ೇಶಕರು ಡಾ.ಪಿ.ಎನ್ ಹುಬ್ಬಳಿ, ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ಸೈಯದ್, ಪಾಲಿಕ್ಲಿನಿಕ್ ಮುಖ್ಯ ಪಶುವೈದ್ಯಾಧಿಕಾರಿ ಡಾ. ಹೆಚ್ ಬಿ ಸಣ್ಣಕ್ಕಿ, ಸವಣೂರು ಪಶುವೈದ್ಯಾಧಿಕಾರಿ ಡಾ.ಮಹೇಶ, ಕಿರಿಯ ಅಭಿಯಂತರ ಮಂಜುನಾಥ, ಎ.ಸಿ ಕೊರೆ, ರಾಮನಗೌಡ್ರ, ಪ್ರಕಾಶ ಮನೋಳಿ ಇತರರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 