ಕೇಂದ್ರ ಸರ್ಕಾರದ ಜನಸಾಮಾನ್ಯರು ನೀರೀಕ್ಷೆಯಲ್ಲಿದ್ದವರಿಗೆ ದೊಡ್ಡ ನಿರಾಶೆ:ವೆಂಕಟೇಶ್ ಹೆಗಡೆ

ಕೇಂದ್ರ ಸರ್ಕಾರದ ಜನಸಾಮಾನ್ಯರು ನೀರೀಕ್ಷೆಯಲ್ಲಿದ್ದವರಿಗೆ ದೊಡ್ಡ ನಿರಾಶೆ:ವೆಂಕಟೇಶ್ ಹೆಗಡೆ         A big disappointment for those who were expecting the common people from the central government: Ve

ಬಳ್ಳಾರಿ 02:  ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಮೂಲೆಗುಂಪು ಮಾಡಿ, ಗ್ರಾಮೀಣ ಭಾಗದ ಅಭಿವೃದ್ಧಿಗೆ ಮಾರಕವಾಗಿದ್ದ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಇದೀಗ ಗ್ರಾಮೀಣಾಭಿವೃದ್ಧಿಗೆ ಕೇವಲ 1.6 ಲಕ್ಷ ಕೋಟಿ ಅನುದಾನ ನೀಡಿ ಗ್ರಾಮೀಣ ಜನರನ್ನು ಇನ್ನಷ್ಟು ಅದೋಗತಿಗೆ ತಳ್ಳಲು ಸಿದ್ಧವಾಗಿದೆ.ಒಂದು ಕಡೆ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗುತ್ತಿರುವಾಗಲೇ ಭಾರತದ ಷೇರುಮಾಕಟ್ಟೆ ಪ್ರಪಾತಕ್ಕೆ ಕುಸಿದಿದ್ದು, ಈ ಬಾರಿಯ ಬಜೆಟ್ ಎಷ್ಟರ ಮಟ್ಟಿಗೆ ಜನ ಉಪಯೋಗಿ ಎಂಬುದನ್ನು ಮನಗಾಣಬಹುದು.ಇನ್ನು ಮುಂದೆ ಚುನಾವಣೆ ಇರುವ ಪಶ್ಚಿಮ ಬಂಗಾಳ,

 ಕೇರಳ ಮುಂತಾದ ರಾಜ್ಯಗಳಿಗೆ ಕೊಡುಗೆ ನೀಡುವ ಸುಳ್ಳು ಘೋಷಣೆಗಳನ್ನು ನೀಡಿರುವ ಕೇಂದ್ರದ ಮೋದಿ ಸರ್ಕಾರ ಜನಸಾಮಾನ್ಯರ ಬಗ್ಗೆ ಯಾವುದೇ ಗಮನ ಹರಿಸಿಲ್ಲ, ಐದು ಜಲಮಾರ್ಗ ಘೋಷಣೆ ಮಾಡುವ ಮೂಲಕ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ದೇಶದ 20 ಕಡೆ ಹೊಸ ಜಲಮಾರ್ಗ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಮೀನುಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಲಾಶಯ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿ, ಅಲ್ಲಿರುವ ಮೀನುಗಾರರನ್ನು ಮುಂದಿನ ಚುನಾವಣೆಯಲ್ಲಿ ಅವರ ಮತ ಗಳಿಸುವ ಹುನ್ನಾರ ಇದೆ ಹೊರತು ಇದು ನಿಜಕ್ಕೂ ಜಾರಿಯಾಗುವ ಯೋಜನೆ ಅಲ್ಲ.  

ಐದು ಹೊಸ ರೈಲ್ವೆ ಕಾರಿಡಾರ್ ಘೋಷಣೆ ಮಾಡಿರುವುದು ಇವರು ಅದೆಷ್ಟು ಕಾರ​‍್ೋರೇಟ್ ಪರ ಇದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ. ತೆರಿಗೆ ಇಳಿಕೆ ಮಾಡಿರುವ ಉತ್ಪನ್ನಗಳನ್ನು ಗಮನಿಸಿದರೆ ಎಲ್ಲವೂ ಕಾರ​‍್ೋರೇಟ್ ಪರವಾಗಿಯೇ ಇವೆ. ವಿಮಾನದ ಬಿಡಿ ಭಾಗಗಳ ಮೇಲಿನ ತೆರಿಗೆ ಇಳಿಸಿರುವುದು ಭಾರತೀಯ ವಿಮಾನಯಾನ ರಂಗಕ್ಕೆ ಅದಾನಿಯವರು ಕಾಲಿಡುತ್ತಿರುವ ಸಂಬಂಧ ಅವರ ಮನವೊಲಿಕೆಗೆ ಕೈಗೊಂಡ ತೀರ್ಮಾನದಂತೆ ಇದೆ.ಇನ್ನು ಜಿಡಿಪಿ ಬೆಳವಣಿಗೆ ಕುರಿತು ಕೇಂದ್ರ ವಿತ್ತ ಸಚಿವೆ ಲೋಕಸಭೆಯಲ್ಲಿ ಪ್ರಸ್ತಾಪಮಾಡಿ ದೊಡ್ಡ ಸಾಧನೆ ಮಾಡಿದವರ ಹಾಗೆ ಬಿಂಬಿಸಿಕೊಂಡಿದ್ದಾರೆ.

ಆದರೆ, ಇಡೀ ದೇಶದ ಜಿಡಿಪಿಯ ಆದಾಯ ಯಾರ ಜೇಬಿಗೆ ಸೇರುತ್ತಿದೆ ಎಂಬುದನ್ನು ಅವರು ಹೇಳಲು ಸಿದ್ಧರಿಲ್ಲ. ಜನಸಾಮಾನ್ಯರಿಗೆ ಯಾವುದೇ ರೀತಿಯ ಕೊಡುಗೆ ಈ ಜಿಡಿಪಿ ಬೆಳವಣಿಗೆಯಿಂದ ಸಿಗುವುದಿಲ್ಲ ಎಂಬುದನ್ನು ಅವರು ಮರೆಮಾಚಿದ್ದಾರೆ.ಜನಸಾಮಾನ್ಯರಿಗೆ ಭಾರೀ ಕೊಡುಗೆಗಳು ಸಿಗಬಹುದು ಎಂಬ ನೀರೀಕ್ಷೆಯಲ್ಲಿದ್ದವರಿಗೆ ದೊಡ್ಡ ನಿರಾಶೆ ಆಗಿದೆ. ಈ ಬಾರಿಯ ಬಜೆಟ್ ಸತ್ತ ಹೆಣಕ್ಕೆ ಸಿಂಗಾರ ಮಾಡಿದಂತೆ ಆಗಿದೆ ಎಂದು ವೆಂಕಟೇಶ್ ಹೆಗಡೆ, ವಕೀಲರು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ಲೋಕ ದರ್ಶನ ವರದಿಗಾರರಿಗೆ ಪತ್ರಿಕೆ  ಪ್ರಕಟಣೆ ತಿಳಿಸಿದರು.