ಪಟ್ಟಣದ ಅಂಬೇಡಕರ ವೃತ್ತದಲ್ಲಿ ಸೇರಿದ ವಿವಿಧ ದಲಿತ ಸಂಘಟನೆಗಳ ಮಹಾ ಒಕ್ಕೂಟದಲ್ಲಿ ಯುರೋಪಿಯನ್ ಮಂಗಳವಾರ ಪ್ರತಿಭಟನ
ಅಥಣಿ 24 ; ಕೇಂದ್ರ ಸಚಿವ ಅಮಿತ್ ಶಾ ಪ್ರತಿಕೃತಿಗೆ ಬೆಂಕಿ ಹಚ್ಚಿ ದಲಿತ ಸಂಘಟನೆ ಆಕ್ರೋಶ, ಅಥಣಿ ಬಂದ್ ಯಶಸ್ವಿಅಥಣಿ, ಡಾ. ಬಿ ಆರ್ ಅಂಬೇಡಕರ ಅವರ ಕುರಿತು ರಾಜ್ಯ ಸಂಭೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಅಥಣಿ ಪಟ್ಟಣ ಬಂದ್ ಕರೆ ನೀಡಿದ್ದ ವಿವಿಧ ದಲಿತ ಸಂಘಟನೆಗಳ ಮಹಾ ಒಕ್ಕೂಟ ಅಮಿತ್ ಶಾ ಅವರ ಪ್ರತಿಕೃತಿ ದಹಿಸಿ ಗೃಹ ಸಚಿವ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಥಣಿ ಪಟ್ಟಣದ ಅಂಬೇಡಕರ ವೃತ್ತದಲ್ಲಿ ಸೇರಿದ ವಿವಿಧ ದಲಿತ ಸಂಘಟನೆಗಳ ಮಹಾ ಒಕ್ಕೂಟದಲ್ಲಿ ಯುರೋಪಿಯನ್ ಮಂಗಳವಾರ ಪ್ರತಿಭಟನೆಯನ್ನು ಹಮ್ಮಿಕೊಂಡಿರುವ ಪ್ರಯುಕ್ತ ಸ್ವಯಂ ಪ್ರೇರಿತರಾಗಿ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ನೀಡಿದರು. ಅಂಬೇಡಕರ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಅಂಬೇಡಕರ್ ವೃತ್ತದಲ್ಲಿ ಸೇರಿದ ಸಾವಿರಾರು ಜನ ಸೇರಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ ಮೂಲಕ ರಾಷ್ಟೊಪತಿಗಳು ಹಾಗೂ ಸಂಸತ್ ಭವನಕ್ಕೆ ಮನವಿ ಸಲ್ಲಿಸಿದರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಪ್ರಕಾಶ ಅಂಬೇಡಕರ ಬ್ರಿಗೇಡ್ ಅಧ್ಯಕ್ಷ ಮಹಾಂತೇಶ ಬಾಡಗಿ ಮಾತನಾಡಿ, ಸಂವಿದಾನದ ಮೂಲಕ ನಡೆಯುವ ಸಂಸತ್ತಿನ ರಾಜ್ಯ ಸಂಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಬಾಬಾ ಸಾಹೇಬ ಅಂಬೇಡಕರ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಅಕ್ಷಮ್ಯ ಅಪರಾಧ, ನಮ್ಮೇಲ್ಲರ ಆರಾದ್ಯ ದೈವ ಅಂಬೇಡಕರ, ಅವರ ಬಗ್ಗೆ ಮಾತನಾಡಿದ್ದ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾ ಮಾಡಬೇಕು ಹಾಗೂ ದೇಶದ ಜನರ ಬೇಶರತ್ ಕ್ಷೇಮೆಯಾಚನೆ ಮಾಡಬೇಕು ಇಲ್ಲದೆ ಹೋದರೆ ದೇಶದ ದಲಿತ ಸಮೂದಾಯ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ಗೌತಮ ಪರಾಜೆಂಪೆ, ಶಶಿಕಾಂತ ಸಾಳವೆ, ಮಂಜು ಹೋಳಿಕಟ್ಟಿ, ಅನೀಲ ಭಜಂತ್ರಿ, ರವಿ ಕಾಂಬಳೆ, ನೀಶಾಂತ ಮಡ್ಡಿ, ಕಪೀಲ ಘಟಕಾಂಬಳೆ, ಸಿದ್ದಾರ್ಥಮಡ್ಡಿ, ಶಬ್ಬೀರ ಸಾತಬಚ್ಚೆ, ಸುನೀಲ ನಾಯಿಕ, ಬಸು ಗಾಡಿವಡ್ಡರ, ಕುಮಾರ ಗಸ್ತಿ, ಉದಯ ಮಾಕಣಿ, ಸಂದೀಪ ಘಟಕಾಂಬಳೆ, ಸುಕಮಾರ ಕಾಂಬಳೆ, ನ್ಯಾಯವಾದಿಗಳಾದ ದಯಾನಂದ ವಾಘಮೋರೆ, ಸುಭಾಷ ಮನ್ನಪ್ಪಗೋಳ, ಶಶಿಕಾಂತ ಬಾಡಗಿ, ರಾಮ ಮರೇಳರ, ಮೀತೆಶ ಪಟ್ಟಣ, ಅಮೀತ ಜಿರಗ್ಯಾಳ, ಸದಾಶಿವ ಕಾಂಬಳೆ, ಬಂಗಾರೆಪ್ಪಾ ಕಾಂಬಳೆ, ಮುಖಂಡರಾದ ರೂಪಾ ಕಾಂಬಳೆ, ಸುನೀತಾ ಐಹೊಳೆ, ಸವೀತಾ ಕಾಂಬಳೆ, ಮಹಾದೇವಿ ಹೊಳಿಕಟ್ಟಿ, ಅರತಿ ಶಿವಶರಣ, ಜಾನಕಿ ದೆವರಮನಿ ಸೇರಿದಂತೆ ವಿವಧ ದಲಿತ ಸಂಘಟನೆಗಳ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಹಾಗೂ ಅಪಾರ ಪ್ರಮಾಣದಲ್ಲಿ ಯುವಕರು ಭಾಗಿಯಾಗಿದ್ದರು.