ಅ. 09ರಂದು ಯಜ್ಞೋಪವೀತ ಧಾರಣೆ: ಜನಿವಾರ ಧಾರಿ ಒಕ್ಕೂಟ
A. 09th Yajna Poveeta Dharane: Janiwar Dhari Association
ಅ. 09ರಂದು ಯಜ್ಞೋಪವೀತ ಧಾರಣೆ: ಜನಿವಾರ ಧಾರಿ ಒಕ್ಕೂಟ
ಗದಗ 01:- ಪ್ರಸಕ್ತ ವರ್ಷದ ಶುದ್ಧ ಶ್ರಾವಣ ಮಾಸದಲ್ಲಿ ಬರುವ ನೂಲು ಹುಣ್ಣಿಮೆ ಪ್ರಯುಕ್ತ ಗದಗ ಜಿಲ್ಲಾ ಜನಿವಾರ ಧಾರಿ ಒಕ್ಕೂಟದ ವತಿಯಿಂದ ಗದಗ ಬೆಟಗೇರಿ ಅವಳಿ ನಗರದ ಜನಿವಾರ ಧಾರಿ ಸಮಾಜ ಭಾಂದವರಿಂದ ಸಾಮೂಹಿಕ ಯಜ್ಞೋಪವೀತ ಧಾರಣೆ ಹಾಗೂ ಶ್ರೀ ಸತ್ಯ ನಾರಾಯಣ ಪೂಜೆ ಮತ್ತು ಮಹಾ ಪ್ರಸಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕುರಿತು ಜನಿವಾರ ಧಾರಿ ಸರ್ವ ಸಮಾಜದ ಮುಖಂಡರ ವಿಶೇಷ ಸಭೆಯನ್ನು ಗದಗ ನಗರದ ವಿಠಲಾರೂಢ ಸಮುದಾಯ ಭವನದಲ್ಲಿ ಇದೇ ಅಗಷ್ಟ 01ರಂದು ಕರೆಯಲಾಗಿತ್ತು.
ಈ ಒಂದು ಐತಿಹಾಸಿಕ ಸಭೆಯಲ್ಲಿ ಇದೇ ದಿನಾಂಕ 09 ರಂದು ನೂಲು ಹುಣ್ಣಿಮೆಯ ಪ್ರಯುಕ್ತ ನಗರದ ಹಳೇ ಸರಾಫ್ ಬಜಾರ ನಲ್ಲಿರುವ ಶ್ರೀ ಜಗದಂಬಾ ಸಮುದಾಯ ಭವನದಲ್ಲಿ ಈ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಸರ್ವ ಸಮಾಜದ ಜನಿವಾರ ಧಾರಿ ಮುಖಂಡರ ಉಪಸ್ಥಿತಿಯಲ್ಲಿ ನಿರ್ಣಯಿಸಲಾಯಿತು. ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ವೆಂಕಟೇಶ್ ಕುಲಕರ್ಣಿ, ಎಸ್ ಎಸ್ ಕೆ ಸಮಾಜದ ಅಧ್ಯಕ್ಷರಾದ ಫಕ್ಕೀರಸಾ ಬಾಬಾಸಾ ಭಾಂಡಗೆ, ಎಸ್ ಎಸ್ ಕೆ ಸಮಾಜದ ಮುಖಂಡರಾದ ಶ್ರೀಕಾಂತಸಾ ಖಟವಟೆ, ಸಂಜೀವಕುಮಾರ ಖಟವಟೆ, ಶ್ರೀರಂಗಸಾ ಕಬಾಡಿ, ಹಿಂದೂ ದಶಾನಗರ ಗುಜರಾತಿ ಸಮಾಜದ ದೇವಿದಾಸ ವಜ್ರಶ್ವರಿ , ಅಖಿಲ ಕರ್ನಾಟಕ ದೈವಜ್ಞ ಮಹಾಸಭಾದ ಅಧ್ಯಕ್ಷರಾದ ರಾಘವೇಂದ್ರ ಪಾಲನಕರ ಹಾಗೂ ಸಮಸ್ತ ಜನಿವಾರಧಾರಿ ಸಮಾಜ ಭಾಂದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 