78ನೇ ಅಂತರ ರಾಷ್ಟ್ರೀಯ ಜಾಗತಿಕ ಸಂಸ್ಥೆ ಯೂನಿಸೆಫ್ ಸಂಸ್ಥೆಯ ಸಂಸ್ಥಾಪನಾ ದಿನ ಆಚರಣೆ
ಸಿರುಗುಪ್ಪ 11 : 78ನೇ ಅಂತರ ರಾಷ್ಟ್ರೀಯ ಯೂನಿಸೆಫ್ ದಿನ ಮಕ್ಕಳ ಹಕ್ಕು ರಕ್ಷಣೆಗೆ ಯೂನಿಸೆಫ್ ಪಣ ಅಬ್ದುಲ್ ನಬಿ ಸಿರುಗುಪ್ಪ-ಮಕ್ಕಳಿಗೆ ತುರ್ತು ಸಹಾಯ ಒದಗಿಸಲು ಮಾನವೀಯ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಜಾಗತಿಕ ಸಂಸ್ಥೆ ಯೂನಿಸೆಫ್ ಸಂಸ್ಥೆಯ ಸಂಸ್ಥಾಪನಾ ದಿನವನ್ನು ಪ್ರತಿ ವರ್ಷ ಡಿಸೆಂಬರ್ 11ರಂದು ಆಚರಿಸಲಾಗುತ್ತದೆ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸಾಕ್ಷರತಾ ಸದಸ್ಯರು ಜನ ಅಭಿಪ್ರಾಯ ಮುಖಂಡ ಅಬ್ದುಲ್ ನಬಿ ಹೇಳಿದರು ಸಿರುಗುಪ್ಪ ನಗರದಲ್ಲಿ ಅಂತರರಾಷ್ಟ್ರೀಯ ಯೂನಿಸೆಫ್ ದಿನವನ್ನು ನೆನಪಿಸಿ ಮಾತನಾಡುತ್ತಾ ಇದು ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ 78ನೇ ವಾರ್ಷಿಕೋತ್ಸವವು ಆಗಿದೆ ವಿಶ್ವ ಸಂಸ್ಥೆಯು ಪ್ರಪಂಚ ದಾದ್ಯಂತ 190 ದೇಶಗಳಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ 1946ರಲ್ಲಿ ಯುನೈಟೆಡ್ ನೇಶನ್ಸ್ ಅಂಗ ಸಂಸ್ಥೆಯಾಗಿ ಸ್ಥಾಪಿತವಾದ ಯೂನಿಸೆಫ್ ಅನ್ನು ಲುಡ್ವಿಕ್ ರಾಜ್ಷ್ಟ್ರನ್ ಎಂಬುವರು ಸ್ಥಾಪಿಸಿದರು ಇದು ಮಕ್ಕಳಿಗೆ ತುರ್ತು ಸಹಾಯ ಒದಗಿಸಲು ಮಾನವೀಯ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದೆ ಪ್ರಸ್ತುತ ಪ್ರಪಂಚದಾದ್ಯಂತ 190 ದೇಶಗಳಲ್ಲಿ ಕೆಲಸ ಮಾಡುತ್ತಿದೆ ಸಂಸ್ಥೆಯು ಮಕ್ಕಳ ಆರೋಗ್ಯ ಶಿಕ್ಷಣಕ್ಕೆ ಬೆಂಬಲ ಮಕ್ಕಳ ರಕ್ಷಣೆ ಮತ್ತು ತುರ್ತು ಪರಿಹಾರ ಒದಗಿಸುವತ್ತ ಕೇಂದ್ರೀಕರಿಸುತ್ತದೆ ಮಕ್ಕಳ ಆರೈಕೆ ಸಂಪನ್ಮೂಲಗಳನ್ನು ಒದಗಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ ಈ ನಿಟ್ಟಿನಲ್ಲಿ ಸಂಸ್ಥೆಯು ಲಸಿಕ ಕಾರ್ಯಕ್ರಮಗಳ ಮೂಲಕ ಪೋಲಿಯೋ ದಡಾರದಂತಹ ರೋಗಗಳ ನಿರ್ಮೂಲನೆಗೆ ಕ್ರಮ ಅಪೌಷ್ಟಿಕತೆ ನಿಭಾಯಿಸುವ ಮೂಲಕ ಆಹಾರ ಕಾರ್ಯಕ್ರಮ ಬೆಂಬಲಿಸುವದು ಶಾಲೆಗಳನ್ನು ನಿರ್ಮಿಸಿ ಪುಸ್ತಕಗಳು ಮಾನವ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಶಿಕ್ಷಣ ಮತ್ತು ಸಮಾನತೆಯನ್ನು ಬೆಂಬಲಿಸುವದು ಕುಡಿಯುವ ನೀರಿನ ಸೌಲಭ್ಯ ಮತ್ತು ಸ್ವಚ್ಛ ನೈರ್ಮಲ್ಯ ಖಚಿತ ಪಡಿಸುವುದಾಗಿದೆ ಭಾರತದಲ್ಲಿ ಯೂನಿಸೆಫ್ 1949ರಲ್ಲಿ ಮೂರು ಸಿಬ್ಬಂದಿಯೊಂದಿಗೆ ಕಾರ್ಯ ಚಟುವಟಿಕೆ ಆರಂಭಿಸಿತು 3 ವರ್ಷಗಳ ನಂತರ ದೆಹಲಿಯಲ್ಲಿ ಕಚೇರಿ ಸ್ಥಾಪಿಸಿತು ಪ್ರಸ್ತುತ ದೇಶದ 16 ರಾಜ್ಯಗಳಲ್ಲಿ ಮಕ್ಕಳ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತಿದೆ ಮಕ್ಕಳ ಆರೋಗ್ಯ ಭಾರತದಲ್ಲಿ ಕಾರ್ಯ ಚಟುವಟಿಕೆ ಶಿಕ್ಷಣ ಸೇರಿ ಹಲವು ವಲಯಗಳಲ್ಲಿ ಯೂನಿಸೆಫ್ ಕೊಡುಗೆ ನೀಡಿದೆ ಎಂದು ರಾಷ್ಟ್ರೀಯ ಸಾಕ್ಷರತಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸದಸ್ಯರಾದ ಅಬ್ದುಲ್ ನಬಿ ವಿವರಿಸಿ ಹೇಳಿದರು.