ಕೈಗಾ ವಸತಿ ಸಂಕೀರ್ಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ
77th Republic Day celebration at Kaiga Residential Complex
ಕಾರವಾರ, ಜ27(ಕರ್ನಾಟಕ ವಾರ್ತೆ):- ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರದ ವಸತಿ ಸಂಕೀರ್ಣದಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಸ್ಥಳ ನಿರ್ದೇಶಕ ಬಿ. ವಿನೋದ ಕುಮಾರ್ ನೆರವೇರಿಸಿ, ಪರೇಡ್ ಗೌರವ ವಂದನೆ ಸ್ವೀಕರಿಸಿ, ಗಣರಾಜ್ಯೋತ್ಸವದ ಮಹತ್ವ ಹಾಗೂ ವಿದ್ಯುತ್ ಕೇಂದ್ರದ ಸಾಧನೆಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಿ.ಐ.ಎಸ್.ಎಫ್. ಹಾಗೂ ಎನ್.ಸಿ.ಸಿ. ಕೆಡೆಟ್ ಗಳಿಂದ ಪಥಸಂಚಲನ ನಡೆಯಿತು. ಅಣು ವಿದ್ಯುತ್ ಕೇಂದ್ರದ ನೌಕರರಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಸಿ.ಐ.ಎಸ್.ಎಫ್. ತಂಡದ ಶ್ವಾನದಳದ ಹಾಗೂ ಅಗ್ನಿಶಾಮಕ ದಳದ ಪ್ರದರ್ಶನಗಳು ಎಲ್ಲರನ್ನು ರಂಜಿಸಿದವು. ಖಾಯಂ ಹಾಗೂ ಗುತ್ತಿಗೆ ನೌಕರರಿಗಾಗಿ ಮತ್ತು ವಸತಿ ಸಂಕೀರ್ಣದ ನಿವಾಸಿಗಳಿಗಾಗಿ ಏರಿ್ಡಸಲಾದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ನಿರ್ದೇಶಕರಾದ ಕೆ ಶ್ರೀರಾಮ್, ಎಸ್.ಕೆ.ಓಝಾ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಸುವರ್ಣಾ ಎಸ್. ಗಾಂವಕರ್, ಆಚರಣಾ ಸಮಿತಿಯ ಅಧ್ಯಕ್ಷ ಕೆ. ಚೈತನ್ಯ, ಸಿ.ಐ.ಎಸ್.ಎಫ್. ಹಿರಿಯ ಕಮಾಂಡಂಟ್ ಅಜಯ ಕುಮಾರ ಓಝಾ, ಹಿರಿಯ ಅಧಿಕಾರಿಗಳು, ಕೈಗಾ ಪರಿಯೋಜನೆ ನೌಕರರ ಸಂಘ ಮತ್ತು ಎಸ್ಸಿ ಎಸ್ಟಿ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನೌಕರರು, ಶಾಲಾ ಶಿಕ್ಷಕ ವೃಂದ, ಮಕ್ಕಳು ಹಾಗೂ ಟೌನಶಿಪ್ ನಿವಾಸಿಗಳು ಭಾಗವಹಿಸಿದ್ದರು. ಸಿದಾಂತ್ ಪವಾರ್ ವಂದಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 