ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‌ನಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ
ಬಳ್ಳಾರಿ 26: ನಗರದ ಡಾಽಽರಾಜ್‌ಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‌ನಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆಯು ಮಹಾತ್ಮ ಗಾಂಧೀಜಿಯವರ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಿಸುವುದರ ಮೂಲಕ ಅತ್ಯಂತ ಸಡಗರ, ಸಂಭ್ರಮದಿಂದ ನೆರವೇರಿತು. ಈ ಆಚರಣೆಯ ಅಂಗವಾಗಿ ಸಂಸ್ಥೆಯ ಅಧ್ಯಕ್ಷರಾದ ಡಾಽಽಎಸ್.ಜೆ.ವಿ.ಮಹಿಪಾಲ್‌ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಜೆ.ಅನೀಲ್ ಕುಮಾರ್‌ರವರು ಹಾಗೂ ಬಿ.ಪಿ.ಎಸ್.ಸಿ.ಕಿಡ್ಸ್ ಅಕಾಡೆಮಿಯ ಕೋ-ಆರ್ಡಿನೇಟರ್ ಶೇಕ್ ಹಸೀನಾರವರು ಉಪಸ್ಥಿತರಿದ್ದರು. 9 ನೇ ತರಗತಿ ಕುಮಾರಿ ನಂದಿತಾ ಹಾಗೂ ತಂಡದವರು ದೇಶಭಕ್ತಿಗೀತೆಯ ಪ್ರಾರ್ಥನೆಯನ್ನು ಹಾಡಿದರು. 9 ನೇ ತರಗತಿ ಕುಮಾರಿ ವರ್ಷಾ.ಪಿ ರವರು ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ-್ಯ ದಿನೋತ್ಸವ ಹಾಗೂ ಗಣರಾಜ್ಯೋತ್ಸವದ ವ್ಯತ್ಯಾಸಗಳನ್ನು ವಿವರಿಸುತ್ತಾ ಅವುಗಳ ಮಹತ್ವದ ಬಗ್ಗೆ ತಿಳಿಸಿದರು. ನಂತರ 6 ನೇ ತರಗತಿ ಮಕ್ಕಳು ಡಂಬಲ್ಸ್ ಪ್ರದರ್ಶನ ನೀಡಿದರು ಹಾಗೂ 4, 5, 6, 8 ನೇ ತರಗತಿ ವಿಧ್ಯಾರ್ಥಿಗಳು ಕರಾಟೆ ಪ್ರದರ್ಶನವನ್ನು ಮಾಡಿದರು.
ನಂತರ ಮಾತನಾಡಿದ ಡಾಽಽಎಸ್.ಜೆ.ವಿ.ಮಹಿಪಾಲ್‌ರವರು ಸ್ವತಂತ್ರ ಪೂರ್ವ ಭಾರತ ದೇಶದ ಶ್ರೀಮಂತಿಕೆ ನಂತರ ಪರಕೀಯರ ಅಧೀನ ಹಾಗೂ ಅನೇಕ ಸ್ವಾತಂತ್ರ ಹೋರಾಟಗಾರರ ಚಳುವಳಿ ಮೂಲಕ ದೇಶ ಸ್ವತಂತಗೊಂಡದ್ದು, 1950 ಸಂವಿಧಾನ ರಚನೆಯ ಕತೃವಾದ ಡಾಽಽಬಿ.ಆರ್.ಅಂಬೇಡ್ಕರ್‌ರವರನ್ನು ಸ್ಮರಿಸುತ್ತಾ, ವಿವಿಧ ಭಾಷೆ, ಸಂಪ್ರದಾಯ, ಸಂಸ್ಕೃತಿಯನ್ನು ಹೊಂದಿದ ಭಾರತ ದೇಶದಲ್ಲಿ ಸಂವಿಧಾನದ ರಚನೆಯ ಕರಡು ಸಮಿತಿಯ ಪ್ರಾಮುಖ್ಯತೆಯನ್ನು ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು 9 ನೇ ತರಗತಿಯ ವಿಧ್ಯಾರ್ಥಿ ಸಬೀರ್ ನಡೆಸಿಕೊಟ್ಟರು. ಕೊನೆಯಲ್ಲಿ ಎಲ್ಲಾ ಮಕ್ಕಳಿಗೆ ಹಾಗೂ ಪಾಲಕರಿಗೆ ಸಿಹಿಯನ್ನು ಹಂಚುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.