ಕಾಗವಾಡದಲ್ಲಿ ಅದ್ದೂರಿಯಾಗಿ 76ನೇ ಗಣರಾಜೋತ್ಸವ; ಧ್ವಜಾರೋಹನ ನೆರವೇರಿಸಿದ ತಹಶೀಲ್ದಾರ ರಾಜೇಶ ಬುರ್ಲಿ

76th Gana Rajotsava in Kagawad; Tehsildar Rajesh Burli carried out the flag hoisting

ಕಾಗವಾಡದಲ್ಲಿ ಅದ್ದೂರಿಯಾಗಿ 76ನೇ ಗಣರಾಜೋತ್ಸವ; ಧ್ವಜಾರೋಹನ ನೆರವೇರಿಸಿದ ತಹಶೀಲ್ದಾರ ರಾಜೇಶ ಬುರ್ಲಿ 

ಕಾಗವಾಡ 26: ತಾಲೂಕಾಡಳಿತದ ವತಿಯಿಂದ ಪಟ್ಟಣದ ಮಲ್ಲಿಕಾರ್ಜುನ ಮಹಾವಿದ್ಯಾಲಯ ಮೈದಾನದಲ್ಲಿ 76ನೇ ಗಣರಾಜ್ಯೋತ್ಸದ ನಿಮಿತ್ಯ ಡಾ. ಬಾಬಾಸಹಾಹೇಬ ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಸಾರ್ವಜನಿಕ ಧ್ವಜಾರೋಹಣವನ್ನು ತಾಲೂಕಾ ದಂಡಾಧಿಕಾರಿ ರಾಜೇಶ ಬುರ್ಲಿ ನೆರವೇರಿಸಿ, ಅದ್ದೂರಿಯಾಗಿ ಆಚರಿಸಲಾಯಿತು. ಈ ವೇಳೆ ಶಾಸಕ ರಾಜು ಕಾಗೆ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ತಮ್ಮ ಮೂಲಭೂತ ಹಕ್ಕು ಮತ್ತು ಕರ್ತವ್ಯವನ್ನು ತಿಳಿಸಿ, ಸಾಮನ್ಯನ್ನು ಅಸಮಾನ್ಯನಾಗಲು ದಾರಿ ತೋರಿಸಿದ್ದಾರೆ. ಅವರ ಪರಿಶ್ರಮ ಫಲವಾಗಿ ಭಾರತ ದೇಶ ಇಂದು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಗಣತಂತ್ರ ದೇಶ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಆ ಗಣತಂತ್ರ ವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯ ಪ್ರಜೆಯದ್ದಾಗಿದೆ ಎಂದು ಹೇಳಿದರು. ಇದೇ ವೇಳೆ ಪಟ್ಟಣದ ವಿವಿಧ ಶಾಲಾ- ಕಾಲೇಜುಗಳ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಂದ ಗೌರವ ವಂದನೆ ಹಾಗೂ ಪಥಸಂಚಲನ ನಡೆಯಿತು. ನಂತರ ಪಟ್ಟಣದಲ್ಲಿ ವಿವಿಧೆಡೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಮಲ್ಲಿಕಾರ್ಜುನ ವಿದ್ಯಾಲಯದ ಅಧ್ಯಕ್ಷ ಜೋತಿಕುಮಾರ ಪಾಟೀಲ, ತಾ.ಪಂ. ಇಒ ವೀರಣ್ಣಾ ವಾಲಿ, ಬಿಇಒ ಎಂ.ಆರ್‌. ಮುಂಜೆ, ಸಿಡಿಪಿಒ ಸಂಜುಕುಮಾರ ಸದಲಗೆ, ಪಿಎಸ್‌ಐ ಜಿ.ಜಿ. ಬಿರಾದರ, ಉಪತಹಶೀಲ್ದಾರ ರೇಷ್ಮಾ ಜಕಾತಿ, ಅಣ್ಣಾಸಾಬ ಕೋರೆ, ವೈದ್ಯಾಧಿಕಾರಿ ಪುಷ್ಪಲತಾ ಸುಣ್ಣದಕಲ್ಲ, ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ರಾಜಶೇಖರ ಮುಕ್ಕನ್ನವರ, ಎಸ್‌.ಎ. ಕರ್ಕಿ ಸೇರಿದಂತೆ ತಾಲೂಕಾಡಳಿದ ಅಧಿಕಾರಿಗಳು, ಪಟ್ಟಣದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಶಿಕ್ಷಕರು, ಮಾಜಿ ಸೈನಿಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.  

ಫೋಟೋ ಶಿರ್ಷಿಕೆ: (26 ಕಾಗವಾಡ-2) ಪಟ್ಟಣದ ಮಲ್ಲಿಕಾರ್ಜುನ ವಿದ್ಯಾಲಯದ ಮೈದಾನದಲ್ಲಿ ಜರುಗಿದ ಗಣರಾಜ್ಯೋತ್ಸವ ಧ್ವಜಾರೋಹಣ ನೇರವೇರಿಸಿದ ತಹಶಿಲ್ದಾರ ರಾಜೇಶ ಬುರ್ಲಿ, ಶಾಸಕ ರಾಜು ಕಾಗೆ ಮತ್ತು ಇತರರು.