72ನೇ ಅಖಿಲ ಭಾರತ ಸಹಕಾರ ಸಪ್ತಾಹ
72nd All India Cooperation Week
ಗದಗ 18 : ಸಹಕಾರ ಇಲಾಖೆ ಗದಗ, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ. ಗದಗ ಕೆ.ಸಿ.ಸಿ. ಬ್ಯಾಂಕ್ ಲಿ. ಧಾರವಾಡ, ಕೆ.ಎಂ.ಎಫ್ ಧಾರವಾಡ, ಗದಗ ಉಪವಿಭಾಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ. ಗದಗ, ಕೆ. ಸಿ. ಸಿ. ಬ್ಯಾಂಕ್ ಲಿ. ಧಾರವಾಡ, ಕೆ. ಎಂ. ಎಫ್ ಧಾರವಾಡ, ಗದಗ ಉಪವಿಭಾಗ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಬೂದಿಹಾಳ ಹಾಗೂ ಮುಂಡರಗಿ ತಾಲೂಕಿನ ಎಲ್ಲಾ ಸಹಕಾರ ಸಂಘ/ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-ಧ್ಯೇಯ ಮಂಗಳವಾರ ಮುಂಡರಗಿ ಸಭಾಭವನದಲ್ಲಿ ಮಂಗಳವಾರ ಗದಗ ಜಿಲ್ಲಾ ಸಹಕಾರ 0ುೂನಿ0ುನ್ ನಿ ಗದಗ ಇದರ ನಿರ್ದೇಶಕರಾದ ತಿಪ್ಪಣ್ಣ ಎಸ್. ಭಜಮ್ಮನವರ ಸಹಕಾರಿ ಪಿತಾಮಹ ಭಾವಚಿತ್ರಕ್ಕೆ ಪುಷ್ಪಾಚಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಾಲು ಒಕ್ಕೂಟ, ಧಾರವಾಡ ನಿರ್ದೇಶಕರಾದ ಲಿಂಗರಾಜಗೌಡ ಎಚ್. ಪಾಟೀಲ ಇವರು ಉದ್ಘಾಟಿಸಿ ಮಾತನಾಡಿ ಭಾರತವು ಅಮೃತ ಕಾಲದತ್ತ ಸಾಗುತ್ತಿರುವಂತೆ ಸಹಕಾರಿ ಚಳುವಳಿಯು ಯುವಕರು ಮಹಿಳೆಯರು ಮತ್ತು ದುರ್ಬಲ ವರ್ಗಗಳನ್ನು ವಿಶೇಷವಾಗಿ ಹೈನುಗಾರಿಕೆ ಕರಕುಶಲ ವಸ್ತುಗಳು ಕೈಮಗ್ಗಗಳು ಕಾರ್ಮಿಕರು ಮತ್ತು ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿ ತೊಡಗಿರುವವರನ್ನು ಸಬಲೀಕರಣಗೊಳಿಸುವಲ್ಲಿ ಪರಿವರ್ತನಾತ್ಮಕ ಪಾತ್ರವನ್ನು ವಹಿಸಲು ಸಜ್ಜಾಗಿದೆ ಗ್ರಾಮೀಣ ಮಹಿಳೆ0ುರು ಇವತ್ತು ನಮ್ಮ ತಾಲೂಕಿನಲ್ಲಿ ಸ್ವಾವಲಂಬಿ ಜೀವನ ನೆಡೆಸುತ್ತಿದ್ದಾರೆ. ಕೃಷಿ0ೊಂದಿಗೆ ಹೈನುಗಾರಿಕೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ ಭಾರತದ ಗ್ರಾಮೀಣ ಮತ್ತು ಅನೌಪಚಾರಿಕ ಆರ್ಥಿಕತೆಯ ಬೆನ್ನೆಲುಬಾಗಿವೆ ಸಹಕಾರಿ ಉದ್ಯಮಶೀಲತೆಯು ಅವರಿಗೆ ಸಾಮೂಹಿಕ ಉದ್ಯಮದ ಮೂಲಕ ಸಬಲೀಕರಣ ಆರ್ಥಿಕ ಸ್ವಾತಂತ್ರ್ಯ ಮತ್ತು ಘನತೆಗೆ ಮಾರ್ಗವನ್ನು ನೀಡುತ್ತದೆ. ಸಹಕಾರಿ ಉದ್ಯಮಶೀಲತೆಯು ಆರ್ಥಿಕ ದಕ್ಷತೆಯನ್ನು ಸಾಮಾಜಿಕ ಜವಾಬ್ದಾರಿಯೊಂದಿಗೆ ಸಂಯೋಜಿಸುವ ಜನರನ್ನು ಉದ್ಯಮ ಸೃಷ್ಟಿಯ ಕೇಂದ್ರದಲ್ಲಿ ಇರಿಸುವ ವ್ಯವಹಾರಕ್ಕೆ ವಿಶಿಷ್ಟ ವಿಧಾನವನ್ನು ಪ್ರತಿನಿಧಿಸುತ್ತದೆ. ಇದು ಸದಸ್ಯರ ಮಾಲೀಕತ್ವ ಪ್ರಜಾಸತ್ತಾತ್ಮಕ ನಿರ್ಧಾರ ತೆಗೆದುಕೊಳ್ಳುವಿಕೆ ಸಮಾನ ಲಾಭ ವಿತರಣೆ ಮತ್ತು ಹಂಚಿಕೆಯ ಬೆಳವಣಿಗೆಗೆ ಒತ್ತು ನೀಡುತ್ತದೆ ಇದು ಇತರ ಉದ್ಯಮಶೀಲತೆಗಿಂತ ಭಿನ್ನವಾಗಿವೆ ಎಂದು ಹೇಳಿದರು.
ಮುಂಡರಗಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಿಯರ ಪತ್ತಿನ ಸಹಕಾರ ಸಂಘ ನಿ ಮುಂಡರಗಿ ಅಧ್ಯಕ್ಷರಾದ ಆರ್. ಸಿ. ಪಟ್ಟೇದ ರವರು ಮಾತನಾಡಿ ನಮ್ಮ ಸಂಘವು ಅತೀ ಕಡಿಮೆ ಮೂಲ ಬಂಡವಾಳದಿಂದ ಪ್ರಾರಂಭಗೊಂಡಿತು. ವಿಶೇಷವಾಗಿ ನಮ್ಮ ಸಂಘದ ಆಡಳಿತ ಮಂಡಳಿಯವರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಸಂಘಗಳಿಗೆ ಭೇಟಿ ನೀಡಿ ಅವರ ಉತ್ತಮ ಕಾರ್ಯವನ್ನು ಅವಲೋಕಿಸಿ ಅದನ್ನು ನಮ್ಮ ಸಂಘದಲ್ಲಿ ಅಳವಡಿಸಿ ಸದಸ್ಯರ ಅವಶ್ಯಕತೆಗಣುಗುಣವಾಗಿ ಪ್ರಾಮಾಣಿಕವಾಗಿ ಪೂರಕ ದಾಖಲೆಗಳೊಂದಿಗೆ ಸಾಲ ನೀಡುತ್ತಿದ್ದು ಅಷ್ಟೇ ಪ್ರಾಮಾಣಿಕವಾಗಿ ಸದಸ್ಯರು ಪ್ರತಿ ತಿಂಗಳು ಪಾವತಿಸುತ್ತಿದ್ದು ಸಂಘವು ವರ್ಷದಿಂದ ವರ್ಷಕ್ಕೆ ಹೆಚ್ಚು ಲಾಭ ಗಳಿಸುತ್ತಿರುವುದು ನಮಗೆ ಸಂತಸದ ವಿಷಯ. ಸಹಕಾರ ಸಂಘದ ಎಲ್ಲಾ ಸದಸ್ಯರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಇಡದೇ ಸಹಕಾರ ಸಂಘಗಳಲ್ಲಿ ಠೇವಣಿ ಇಟ್ಟು ಆರ್ಥಿಕವಾಗಿ ಅಬಲರಾದ ಸದಸ್ಯರಿಗೆ ಸಾಲ ನೀಡಿದಲ್ಲಿ ಸಂಘಗಳು ಸದೃಡವಾಗಿರುತ್ತವೆ ಹಾಗೂ ಸದಸ್ಯರಿಗೆ ಹೆಚ್ಚಿನ ರೀತಿಯಲ್ಲಿ ಸಾಲ ಸೌಲಭ್ಯ ಒದಗಿಸಿ ಕೊಟ್ಟಂತ್ತಾಗುತ್ತದೆ ಸಹಕಾರದಿಂದ ಸಮೃಧ್ಧಿ ಎಂಬ ಪರಿಕಲ್ಪನೆಯಲ್ಲಿ ಆರಂಭವಾದ ನೀತಿಯು ವಿಕಸಿತ ಭಾರತ 2027 (ಅಬಿವೃಧ್ಧಿ ಹೊಂದಿದ ಭಾರತ 2027)ರ ಮಹತ್ವಾಕಾಂಕ್ಷೆ ಗುರಿಯೊಂದಿಗೆ ಗ್ರಾಮೀಣಾಭಿವೃಧ್ಧಿ ಉದ್ಯೋಗ ಸೃಷ್ಠಿ ಮತ್ತು ದೇಶದ ಆರ್ಥಿಕ ಬೆಳವಣಿಗೆಯ ದೃಷ್ಠಿಯನ್ನು ಹೊಂದಿದೆ ಸಹಕಾರ ಚಳವಳಿಯನ್ನು ತಳಮಟ್ಟದಿಂದ ಬಲಪಡಿಸುವ ಮುಖ್ಯ ಧ್ಯೇಯವನ್ನು ರಾಷ್ಟ್ರೀಯ ಸಹಕಾರ ನೀತಿಯೂ ಹೊಂದಿದೆ ಎಂದು ಹೇಳಿದರು.
ಗದಗ ಜಿಲ್ಲಾ ಸಹಕಾರ 0ುೂನಿ0ುನ್ ನಿ ಗದಗ ಇದರ ನಿರ್ದೇಶಕರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘ ನಿ ಬೂದಿಹಾಳ ಇದರ ಅಧ್ಯಕ್ಷರಾದ ಶಿದ್ದನಗೌಡ ಬಿ. ಪಾಟೀಲರು ಮಾತನಾಡಿ ಭಾರತ ಸಹಕಾರಿ ವಲಯವು ವಿಶ್ವದ ಅತಿದೊಡ್ಡ ಸಹಕಾರಿ ವಲಯಗಳಲ್ಲಿ ಒಂದಾಗಿದೆ ಇದು 30 ವಲಯಗಳಲ್ಲಿ 32 ಕೊಟಿಗೂ ಹೆಚ್ಚು ಸದಸ್ಯತ್ವವನ್ನು ಹೊಂದಿರುವ 8,45,475 ಸಹಕಾರಿ ಸಂಸ್ಥೆಗಳನ್ನು ಒಳಗೊಂಡಿದೆ. ಸ್ವಾವಲಂಬಿ ಆರ್ಥಿಕತೆಗಾಗಿ ಭಾರತದ ದೃಷ್ಟಿಕೋನವಾದ ಆತ್ಮನಿರ್ಭರ ಭಾರತ ಇದರ ಗುರಿಗಳನ್ನು ಸಾಧಿಸುವಲ್ಲಿ ಸಹಕಾರಿ ಉದ್ಯಮಶೀಲತೆ ಪ್ರಮುಖ ಪಾತ್ರ ವಹಿಸುತ್ತದೆ ಸ್ಥಳಿಯ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮೂಲಕ ಮತ್ತು ವಿಕೇಂದ್ರಿಕೃತ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಸಹಕಾರ ಸಂಸ್ಥೆಗಳು ದೇಶದ ಸಾಮಾಜಿಕ-ಆರ್ಥಿಕ ಅಭಿವೃಧ್ಧಿಗೆ ಗಮನಾರ್ಹವಾದ ಕೊಡುಗೆ ನೀಡುತ್ತವೆ ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಸಹಕಾರ ಚಟುವಟಿಕೆಗಳಿಗೆ ಸಹಕಾರ ವಲಯವೇ ಮೂಲಾಧಾರವಾಗಿದೆ ಎಂದು ಹೇಳಿದರು. ಡಾ. ಎಂ. ಬಿ. ಮಡಿವಾಳರ ಇವರು ಉಪನ್ಯಾಸ ನೀಡಿದರು
ಮುಂಡರಗಿ ಎಂ. ಎಸ್. ಡಂಬಳ ಪ್ರೌಢಶಾಲೆ ಕುಮಾರಿ ಮೀನಾಕ್ಷಿ ಮತ್ತು ಸಂಗಡಿಗರು ಪ್ರಾಥನೆ ಹಾಗೂ ನಾಡಗೀತೆ ನೆರವೇರಿಸಿ ಕೊಟ್ಟರು, ಕೆ.ಸಿ.ಸಿ. ಬ್ಯಾಂಕಿನ ನಿವೃತ್ತ ಅಧಿಕಾರಿಗಳಾದ ಎಸ್.ಪಿ. ಪಾಟೀಲರವರು ಸ್ವಾಗತಿಸಿದರು. ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ನಿರೂಪಿಸಿ ವಂದಿಸಿದರು ಈ ಸಂದರ್ಬದಲ್ಲಿ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಇದರ ನಿರ್ದೇಶಕರಾದ 0ುಂಕಪ್ಪ ಎಲ್.ಹುಳಕಣ್ಣವರ ಸಹಕಾರ ಸಂಘಗಳ ಲೆಕ್ಕ ಪರಿಶೊಧನಾ ಇಲಾಖೆ0ು ಹಿರಿ0ು ಲೆಕ್ಕಪರಿಶೋಧಕರಾದ ಎ.ಎಂ.ಖಟವಟೆ ಕೆ.ಸಿ.ಸಿ. ಬ್ಯಾಂಕ್ ಲಿ.ಮುಂಡರಗಿ ಮ್ಯಾನೇಜರ್ ವ್ಹಿ.ಬಿ. ಚಿಕ್ಕನಗೌಡ್ರ, ಬ್ಯಾಂಕ್ ನೀರಿಕ್ಷಕರಾದ ಕೆ.ಬಿ. ದೊಡ್ಡಮನಿ, ಸಹಾಯಕ ವ್ಯವಸ್ಥಾಪಕರು, ಮತ್ತು ಗದಗ ಜಿಲ್ಲಾ ಮುಖ್ಯಸ್ಥರು, ಧಾರವಾಡ ಹಾಲು ಒಕ್ಕೂಟದ ಗದಗ ಉಪವಿಭಾಗ ಡಾ. ಪ್ರಸನ್ನ ಎಸ್.ಪಟ್ಟೇದ,ಧಾರವಾಡ ಹಾಲು ಒಕ್ಕೂಟ, ಮುಂಡರಗಿ ತಾಲೂಕಿನ ವಿಸ್ತರಣಾಧಿಕಾರಿಗಳಾದ ಸಿ.ಎಸ್.ಕಲ್ಲನಗೌಡರ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 