ನಗರದ ವೈದ್ಯನ ಅಪಹರಣ ಪ್ರಕರಣದಲ್ಲಿ 7 ಜನರ ಬಂಧನ
ಬಳ್ಳಾರಿ 29: ಕಳೆದ ನಾಲ್ಕು ದಿನಗಳ ಹಿಂದೆ ಜ.25 ರಂದು ನಗರದ ಜಿಲ್ಲಾ ಆಸ್ಪತ್ರೆಯ ವೈದ್ಯ ಸುನೀಲ್ ಕುಮಾರ್ ಅವರಲ್ಲೆ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿಪೊಲೀಸರು ಓರ್ವ ವಿದ್ಯಾರ್ಥಿ ಸೇರಿದಂತೆ ಏಳು ಜನರನ್ನು ಬಂಧಿಸಿದ್ದು. ಅವರಲ್ಲಿ ಒಬ್ಬ ಸ್ಥಳ ಮಹಜರಿಗೆ ಹೋದಾಗ ಪೊಲೀಸನ ಮೇಲೆ ಹಲ್ಕೆ ನಡೆಸಿದವನ ಕಾಲಿಗೆ ಗುಂಡು ಹೊಡೆಯಲಾಗಿದೆ.ಜ.25 ರಂದು ಬೆಳಿಗ್ಗೆ ಕಿಡ್ನಾಪ್ ಮಾಡಿದ ಮೇಲೆ ವೈದ್ಯನನ್ನು ತಾಲೂಕಿನ ಊರು ಊರುಗಳಲ್ಲಿ ಸುತ್ತಾಡಿಸಿದ್ದ ಅಪಹರಣಕಾರು ಮೂರು ಕೋಟಿ ನಗದು ಮೂರು ಕೋಟಿ ಮೌಲ್ಯದ ಬಂಗಾರದ ಗಟ್ಟಿಗೆ ಬೇಡಿಕೆ ಇಟ್ಟಿದ್ದರಂತೆಈ ಪ್ರಕರಣದ ತನಿಖೆ ನಡೆಸಿದ ಗಾಂಧಿನಗರ ಠಾಣೆಯ ಪೊಲೀಸರು ನಗರ ಮೋಕಾ ರಸ್ತೆಯಲ್ಲಿ ಅಪಹರಣಕ್ಕೆ ಸಂಬಂಧಿಸಿ ಏಳು ಜನರನ್ನು ಬಂಧಿಸಿದ್ದಾರಂತೆ.
ಬಸವೇಶ್ವರ ನಗರದ ಎಸ್. ಶ್ರೀಕಾಂತ್ (44) ವೃತ್ತಿ ಕಾರು ಚಾಲಕ, ಪಟೇಲ್ ನಗರದ ವೈ.ಬೋಜರಾಜ (25) ವೃತ್ತಿ ಕಾರ್ ಚಾಲ, ಹೊಸಪೇಟೆಯ ಎಸ್.ರಾಕೇಶ್ (44) ವರ್ಷ, ನಗರದ ಅನಂತಪುರಂ ರಸ್ತೆಯ ಶೇಕ್ಷಾವಲಿ ದರ್ಗಾ ಹತ್ತಿರ ನಿವಾಸಿ ಎಸ್. ಸಾಯಿ ಅಲಿಯಾಸ್ ಬಿಸ್ನಳ್ಳಿ (21) ವರ್ಷ, ಬಿಕಾಂ 2ನೇ ವರ್ಷದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾನೆ. ಆಟೋ ನಗರದ ನಿವಾಸಿ ಕೆ.ತರುಣ್ ಕುಮಾರ್ (22) ವೃತ್ತಿ ಕಾರ್ ಚಾಲಕ, ಎಸ್.ಎನ್. ಪೇಟೆ ನಾಲ್ಕನೇ ಕ್ರಾಸ್ ನಿವಾಸಿ ಉಮೇಶ್ ಯಾದವ್ ಅಲಿಯಾಸ್ ಅರುಣ್ ಅಲಿಯಾಸ್ ಪತ್ತಿ (25) ವೃತ್ತಿ ಟಾಟಾ ಎ.ಸಿ.ಇ. ಚಾಲಕ ಮತ್ತು ಮಾಲೀಕ ಮತ್ತು ಹರಿಪ್ರಿಯ ನಗರದ ಕೆ. ಪುರುಷೋತ್ತಮ್ (37) ವೃತ್ತಿ ವ್ಯವಸಾಯ ಇವರನ್ನು ಪ್ರಕರಣದ ಸಂಬಂಧ ಬಂಧಿಸಲಾಗಿದೆ.ಪೈರಿಂಗ್:ಪ್ರಕರಣದ ತನಿಖಾಧಿಕಾರಿ ಎಂ.ಎನ್.ಸಿಂಧೂರ ಮತ್ತು ತಂಡದವರು ಸದರಿ ಪ್ರಕರಣದಲ್ಲಿ ಭಾಗಿಯಾದ ಆರೋಪಿ-ಎಸ್. ಶ್ರೀಕಾಂತ್ ನನ್ನು ಬಂಧಿಸಿ ತನಿಖೆಗೆ ಒಳಪಡಿಸಿ ಮೊಕಾ ರಸ್ತೆಯಲ್ಲಿ ಕೃತ್ಯಕ್ಕೆ ಬಳಿಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವ ತನಿಖೆ ಪ್ರಕ್ರಿಯೆದಲ್ಲಿದ್ದಾಗ ಆರೋಪಿಯು ಪೊಲೀಸ್ ವಶದಿಂದ ತಪ್ಪಿಸಿಕೊಳ್ಳಲು ತನಿಖಾ ತಂಡದ ಪೊಲೀಸ್ ಸಿಬ್ಬಂದಿ ಗಾಂಧಿನಗರ ಠಾಣೆಯ ಪೇದೆ ಕೊಹ್ಲಿ ಕಾಳಿಂಗಪ್ಪ ಅವರ ಮೇಲೆ ಮರಣಾಂತಿಕ ಹಲ್ಲೆ ಮಾಡುತ್ತಿದ್ದಾಗ ಸ್ವಯಂ ಆತ್ಮರಕ್ಷಣೆಗಾಗಿ ತನಿಖಾಧಿಕಾರಿ ಎಂ.ಎನ್.ಸಿಂಧೂರ ಅವರು ಆರೋಪಿ ಶ್ರೀಕಾಂತನ ಕಾಲಿಗೆ ಫೈರ್ ಮಾಡಿದ್ದಾರೆ.
ಗುಂಡಿನ ದಾಳಿಗೆ ಸಿಲುಕಿದ ಆರೋಪಿ ಶ್ರೀಕಾಂತ್ ನನ್ನು ನಗರದ ಟ್ರಾಮ ಕೇರ್ ಆಸ್ಪತ್ರೆಯಲ್ಲಿ ದಾಖಲಿಸಿದೆ. ಪೇದೆ ಕೊಹ್ಲಿ ಕಾಳಿಂಗಪ್ಪ ಎದೆಗೆ ಒಳಪೆಟ್ಟು ಮತ್ತು ದೇಹದ ಮೇಲೆ ಅಲ್ಲಲ್ಲಿ ತೆರಚಿದ ಗಾಯವಾಗಿದ್ದು ಇವರನ್ನು ಸಹ ಟ್ರಾಮಾ ಕೇರ್ ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಪ್ರಕರಣವು ವರದಿಯಾಗಿ 48 ಗಂಟೆಯಲ್ಲಿ ಆರೋಪಿತರನ್ನು ಪತ್ತೆ ಮಾಡಿದ ವಿಶೇಷ ತಂಡದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘನೆ ಮಾಡಿ ಸೂಕ್ತ ಬಹುಮಾನ ಘೋಷಿಸಲಾಗಿದೆ.ಕಿಡ್ನಾಪ್ ಮಾಡಿದವರಲ್ಲಿ ಒಬ್ಬ ಮಾಜಿ ಕಾರ್ೊರೇಟರ್ ಅವರ ಪುತ್ರ ಇದ್ದಾನೆ ಆತ ಇನ್ನು ಪೊಲೀಸರಿಗೆ ದೊರೆತಿಲ್ಲ ಎಂದು ಹೇಳಲಾಗುತ್ತಿದೆ.ಇಂದು ಈ ಕುರಿತು ಸುದ್ದಿಗೊಷ್ಟಿ ನಡೆಸಿದ ಎಸ್ಪಿ. ಡಾ.ಶೋಭಾರಾಣಿ ಅವರು ಪ್ರಕರಣದಲ್ಲಿ ಏಳು ಜನರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಯೂ ಇದರಲ್ಲಿ ಭಾಗಿಯಾಗಿರುವುದು ಮಾಹಿತಿ ಆತನ ಪತ್ತೆ ಕಾರ್ಯ ನಡೆದಿದೆ. ಆತ ಯಾರು ಎಂಬ ಪ್ರಶ್ನೆಗೆ ಪತ್ತೆಯಾದ ತಕ್ಷಣ ತಿಳಿಸುವುದಾಗಿ ಹೇಳಿದ್ದಾರೆ.ಕಿಡ್ನಾಪ್ ಮಾಡಿದವರಲ್ಲಿ ಒಬ್ಬ ಮಾಜಿ ಕಾರ್ೊರೇಟರ್ ಅವರ ಪುತ್ರ ಇದ್ದಾನೆ ಆತ ಇನ್ನು ಪೊಲೀಸರಿಗೆ ದೊರೆತಿಲ್ಲ. ಎಸ್ಪಿ ಅವರು ಹೇಳುವ ರೀತಿ ಮತ್ತೊಬ್ಬ ಆರೋಪಿ ಈತನೇ ಇರಬೇಕು.ಈ ಆರೋಪಿ ನೀರೀಕ್ಷಣಾ ಜಾಮೀನು ನಡೆಯಲು ಪ್ರಯತ್ನಿಸುತ್ತಿದ್ದಾನೆಂದು ತಿಳಿದು ಬಂದಿದೆ ಎಂದು ತಿಳಿಸಿದರು.