ದಿಽಽ ಹೆಚ್ ಲಿಂಗಾರೆಡ್ಡಿ ರವರ 49ನೇ ಪುಣ್ಯತಿಥಿ ಸಮಾರಂಭ ಕಾರ್ಯಕ್ರಮ
49th death anniversary ceremony of Dr. H. Lingareddy
ದಿಽಽ ಹೆಚ್ ಲಿಂಗಾರೆಡ್ಡಿ ರವರ 49ನೇ ಪುಣ್ಯತಿಥಿ ಸಮಾರಂಭ ಕಾರ್ಯಕ್ರಮ
ಬಳ್ಳಾರಿ 25 : ನಗರದಲ್ಲಿ ಸಂಗಮ ವೃತ್ತ ಬಳಿ ಇರುವ ರಾಘವ ಮೆಮೋರಿಯಲ್ ಅಸೋಶಿಯೇಶನ್ ವತಿಯಿಂದ ದಿವಂಗತ ಹೆಚ್ ಲಿಂಗಾರೆಡ್ಡಿ 49 ನೇ ಪುಣ್ಯತಿಥಿ ಸಮಾರಂಭ ನಿನ್ನೆ ಸಂಜೆ ರಾಘವ ಕಲಾ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನೂ ಸಂಸ್ಥೆಯ ಪದಾಧಿಕಾರಿಗಳು ಮತ್ತು ದಿವಂಗತ ಹೆಚ್. ಲಿಂಗಾ ರೆಡ್ಡಿ ಕುಟುಂಬದವರು ಉದ್ಘಾಟಿಸಿದರು. ಸಂಸ್ಥೆಯ ಮಾಜಿ ಗೌರವ ಕಾರ್ಯದರ್ಶಿ ಪದವಿ ಪೂರ್ವ ಮುನಿಸಿಪಾಲ್ ಕಾಲೇಜಿನ ಮಾಜಿ ಅರ್ಥಶಾಸ್ತ್ರ ಉಪನ್ಯಾಸಕರಾದ ಎನ್ ಬಸವರಾಜ್ ದಿವಂಗತ ಹೆಚ್ ಲಿಂಗಾ ರೆಡ್ಡಿ ರವರ ಸಾಧನೆಯನ್ನು ಕುರಿತು ಮಾತನಾಡಿ ಲಿಂಗಾರೆಡ್ಡಿ ಕುರುಗೋಡು ಶಾಸಕರಾಗಿದ್ದರು. ಕಂಪ್ಲಿ ಸಕ್ಕರೆ ಕಾರ್ಖಾನೆ ಬಳ್ಳಾರಿ ನಗರದಲ್ಲಿ ದಾರದ ಮಿಲ್ ಜನತಾ ಬಜಾರ್ ಸ್ಥಾಪನೆ ಮಾಡಿದರು. ರಾಘವ ಕಲಾ ಮಂದಿರಕ್ಕೂ ಕೊಡುಗೆ ಬಹಳ ಇದೆ. ವಕೀಲರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಂಪ್ಲಿ ಸಕ್ಕರೆ ಕಾರ್ಖಾನೆ ಸಂಕಷ್ಟದಲ್ಲಿದ್ದಾಗ ಮನೆಯಲ್ಲಿನ ಚಿನ್ನಾಭರಣವನ್ನು ಬಳಸಿಕೊಂಡವರು. ರಾಜಕಿಯಕ್ಕೆ ಕುಟುಂಬದವರನ್ನು ದೂರವಿಟ್ಟಿದ್ದರು. ಇಂತಹವರು ಸದಾ ಸ್ಮರಣೀಯರು. ಇವರ ಬಗ್ಗೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಿರು ಪುಸ್ತಕ ತರಲು ಸಿದ್ದವಿದೆಂದರು. ನಂತರ ನಾಟಕ ಕಲಾ ರಂಗ ಸಂಸ್ಕೃತಿ ವತಿಯಿಂದ ಪಿ ವಿ ಭವಾನಿ ಪ್ರಸಾದ ರಚನೆಯಲ್ಲಿ ಲಾಲ್ ರೆಡ್ಡಿ ನಿರ್ದೇಶನದಲ್ಲಿ ಒಕ್ಕ ಮಾಟೆ ಚಾಲು ತೆಲುಗು ಸಾಮಾಜಿಕ ನಾಟಕ ಅದ್ಬುತವಾಗಿ ಪ್ರದರ್ಶನ ನೀಡಿದರು.ಈ ನಾಟಕದಲ್ಲಿ ಪ್ರವೀಣ್ ರವೀಂದ್ರ ನಾಥ್ ಲಾಲ್ ರೆಡ್ಡಿ ಶ್ರೀಮತಿ ಆದೋನಿ ವೀಣಾ ಶ್ರೀಮತಿ ತಿರುಪತಿ ಹಸೀನಾ ಇವರೆಲ್ಲರೂ ನಾಟಕದಲ್ಲಿ ಅದ್ಬುತ ಪ್ರದರ್ಶನ ನೀಡಿದರು. ಕಾರ್ಯಕ್ರಮ ನಿರೂಪಣೆ ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್ ಪ್ರಕಾಶ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಕೆ. ಚನ್ನಪ್ಪ ಅಧ್ಯಕ್ಷ ಕೆ. ಕೊಟೆಶ್ವರ ರಾವ್ ಉಪಾಧ್ಯಕ್ಷರು ಹೆಚ್. ವಿಷ್ಣುವರ್ಧನ್ ರೆಡ್ಡಿ ಖಜಾಂಚಿ ಪಿ ಧನಂಜಯ ಸದಸ್ಯರುಗಳಾದ ಟಿ ಜಿ ವಿಠಲ್ ಶ್ಯಾಮ ಸುಂದರ ಪಿ ಶ್ರೀನಿವಾಸಲು ಸಿ ಎ ಚೌದರಿ ಕೆ ಕೃಷ್ಣ ಎಂ ರಮೇಶ್ ಬಾಬು ಎಂ ಹೇಮ ಚಂದ್ರ ರೆಡ್ಡಿ ರಾಮ ಬ್ರಹ್ಮಂ ಭೀಮನೇನಿ ಭಾಸ್ಕರ್ ಪ್ರಸಾದ್‌ಹೆಚ್ ರಾಮ ಪ್ರಕಾಶ್ ರೆಡ್ಡಿ ಸುರೇಂದ್ರ ಬಾಬುವಿ ರಾಮಚಂದ್ರ ಶೇಷ ರೆಡ್ಡಿ ರಮಣಪ್ಪ ಭಜಂತ್ರಿ ಮತ್ತು ಕಲಾಭಿಮಾನಿಗಳು ಇತರರು ಆಗಮಿಸಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 