ಶಿರಗುಪ್ಪಿ ಸಹಕಾರಿ ಸಂಘಕ್ಕೆ 47.73 ಲಕ್ಷ ಲಾಭ
47.73 lakh profit for Shiraguppi Co-operative Society
ಲೋಕದರ್ಶನ ವರದಿ
ಕಾಗವಾಡ ಸೆ. 4: ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಸ್ವಾಭಿಮಾನಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯು 2025-26ನೇ ಸಾಲಿನಲ್ಲಿ ಸದಸ್ಯರ ಸಹಕಾರ, ಆಡಳಿತ ಮಂಡಳಿಯ ಪಾರದರ್ಶಕತೆ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ 47.73 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.25ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಸೊಸೈಟಿ ಅಧ್ಯಕ್ಷ ರಾಜೇಂದ್ರ ಚೌಗುಲಾ ತಿಳಿಸಿದರು.
ಶುಕ್ರವಾರ ಶಿರಗುಪ್ಪಿ ಗ್ರಾಮದ ಮಲ್ಲಿಕಾರ್ಜುನ ಸಭಾಭವನದಲ್ಲಿ ನಡೆದ ಸೊಸೈಟಿಯ 7ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
ಮುಖ್ಯ ಕಾರ್ಯದರ್ಶಿ ರಾಕೇಶ ಅಕಿವಾಟೆ ವರದಿ ಮಂಡಿಸಿ, ಸೊಸೈಟಿಯು ಶಿರಗುಪ್ಪಿ ಸೇರಿದಂತೆ ಮಂಗಸೂಳಿ ಹಾಗೂ ಶೇಡಬಾಳದಲ್ಲಿ ಶಾಖೆಗಳನ್ನು ಹೊಂದಿದ್ದು, ಒಟ್ಟು 908 ಸದಸ್ಯರಿದ್ದಾರೆ. 8.79 ಲಕ್ಷ ಷೇರು ಬಂಡವಾಳ, 19 ಕೋಟಿ ದುಡಿಯುವ ಬಂಡವಾಳ, 1.55 ಕೋಟಿ ನಿಧಿಗಳು ಹಾಗೂ 17.36 ಕೋಟಿ ಠೇವಣಿ ಹೊಂದಿದ್ದು, 10.88 ಕೋಟಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಸ್ಥರಾದ ಸುರೇಶ ಚೌಗುಲೆ ಹಾಗೂ ಶೇಡಬಾಳ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ನೇಮಗೌಡ ನರಸಗೌಡ ಮಾತನಾಡಿ, ರೈತ ಸದಸ್ಯರ ಸಹಕಾರದೊಂದಿಗೆ ಸೊಸೈಟಿ ಪ್ರಗತಿಯತ್ತ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು.
ಸೊಸೈಟಿ ಉಪಾಧ್ಯಕ್ಷ ಭೀಮಣ್ಣ ಅಕಿವಾಟೆ, ಸಂಚಾಲಕರಾದ ಪ್ರಕಾಶ ಹೇಮಗಿರೆ, ವಿಜಯ ಅಕಿವಾಟೆ, ಸುನೀಲ ಚೌಗುಲಾ, ಅರುಣ ಶಿರಗುಪ್ಪೆ, ಬಾಳಾಸಾಬ ಕಾಟಕರ್, ಅಪ್ರೋಜ್ ಕನವಾಡೆ ಸೇರಿದಂತೆ ಶಾಖೆಗಳ ಸಲಹಾ ಸಮಿತಿ ಸದಸ್ಯರು, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 