ಇರಾಕ್, ಮಾರ್ಚ್ 12: ಸಿರಿಯಾದ ಪೂರ್ವ ಪ್ರಾಂತ್ಯದ ಡೀರ್ ಅಲ್-ಜೌರ್ ಅನ್ನು ಗುರಿಯಾಗಿಸಿಕೊಂಡು ಬುಧವಾರ ಸಂಜೆ ನಡೆಸಲಾಗಿರುವ ವೈಮಾನಿಕ ದಾಳಿಯಲ್ಲಿ ಕನಿಷ್ಠ ೨೬ ಇರಾಕ್ ಯೋಧರು ಸಾವನ್ನಪ್ಪಿದ್ದಾರೆ ಎಂದು ಯುದ್ಧ ಕಣ್ಗಾವಲು ಸಂಸ್ಥೆ ಗುರುವಾರ ವರದಿ ಮಾಡಿದೆ.ಅಮೆರಿಕ ನೇತೃತ್ವದ ಮೈತ್ರಿಪಡೆಗಳು ಈ ವೈಮಾನಿಕ ದಾಳಿ ನಡೆಸಿವೆ ಎನ್ನಲಾಗಿದೆ. ಪೂರ್ವ ಗ್ರಾಮಾಂತರ ಪ್ರದೇಶವಾದ ಡೀರ್ ಅಲ್-ಜೌರ್ ನಲ್ಲಿನ ಅಲ್-ಬುಕಮಾಲ್ ನಗರದ ಆಗ್ನೇಯ ಪ್ರದೇಶವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಸಿರಿಯಾ ಮಾನವ ಹಕ್ಕುಗಳ ಕೇಂದ್ರ ತಿಳಿಸಿದೆ.ವೈಮಾನಿಕ ದಾಳಿಯಲ್ಲಿ ಇರಾಕ್ ನ ಹಶ್ದ್ ಶಾಬಿ ಇಲ್ಲವೇ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸ್ನ ಯೋಧರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ತಿಳಿಸಿದೆ.ಇರಾನ್ ಬೆಂಬಲಿತ ಹೋರಾಟಗಾರರು ಅಲ್-ಬುಕಮಾಲ್ ಸಮೀಪದ ಪ್ರದೇಶಗಳಲ್ಲಿ ಅನೇಕ ಜಾಗಗಳನ್ನು ನೆಲೆಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಒಂದು ದಿನದ ಹಿಂದೆ, ಅಲ್-ಬುಕಮಾಲ್ ಪ್ರದೇಶದಲ್ಲಿ ಇರಾನ್ ಬೆಂಬಲಿತ ಹೋರಾಟಗಾರರ ನೆಲೆಗಳ ಮೇಲೆ ಮೂರು ಅಪರಿಚಿತ ಯುದ್ಧ ವಿಮಾನಗಳು 10 ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಬ್ರಿಟನ್ ಮೂಲದ ಕಣ್ಗಾವಲು ಸಂಸ್ಥೆ ತಿಳಿಸಿದೆ. ಜನವರಿಯಲ್ಲಿ, ಅಲ್-ಬುಕಮಾಲ್ ಬಳಿ ಅಪರಿಚಿತ ಯುದ್ಧ ವಿಮಾನಗಳು ನಡೆಸಿದ ದಾಳಿಗಳಲ್ಲಿ ಎಂಟು ಇರಾನ್ ಪರ ಹೋರಾಟಗಾರರು ಸಾವನ್ನಪ್ಪಿದ್ದರು. ಸಿರಿಯಾದ ಒಂಬತ್ತು ವರ್ಷಗಳ ಸುದೀರ್ಘ ಯುದ್ಧದಲ್ಲಿ ಕಳೆದ ಎರಡು ವರ್ಷಗಳಲ್ಲಿ, ಅಲ್-ಬುಕಮಾಲ್ ಬಳಿಯ ಪ್ರದೇಶವನ್ನು ಪದೇ ಪದೇ ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲಾಗುತ್ತಿದೆ.2018 ರ ಜೂನ್ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್-ಬುಕಮಾಲ್ ಬಳಿ ೫೫ ಇರಾನ್ ಮತ್ತು ಇರಾನ್ ಪರÀ ಯೋಧರು ಸಾವನ್ನಪ್ಪಿದ್ದರು.