25ನೇ ವರ್ಷದ ರಜತ ಮಹೋತ್ಸವ ಸಮಾರಂಭ
25th Anniversary Silver Jubilee Ceremony
25ನೇ ವರ್ಷದ ರಜತ ಮಹೋತ್ಸವ ಸಮಾರಂಭ
ಯರಗಟ್ಟಿ, 27 : ಗ್ರಾಹಕರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಜಗದ್ಗುರು ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ, ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 25ನೇ ವರ್ಷದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಅತ್ಯಂತ ಕಡೆಯ ವ್ಯಕ್ತ ಗುರುತಿಸಿ ಅಂತಹ ವ್ಯಕ್ತಿಯನ್ನು ಆರ್ಥಿಕವಾಗಿ ಸಬಲೀಕರಣ ಮಾಡಲು ಬಸವೇಶ್ವರ ಅರ್ಬನ್ ಬ್ಯಾಂಕನ ಎಲ್ಲ ಆಡಳಿತ ಮಂಡಳಿಯ ಮುಖ್ಯ ಉದ್ದೇಶವಾಗಿದೆ. ಸಹಕಾರ ಕ್ಷೇತ್ರದಲ್ಲಿ ನಾನು ಎನ್ನುವ ಬದಲಾಗಿ ನಾವು ಎಂದಾಗ ಮಾತ್ರ ಅಭಿವೃದ್ಧಿಯತ್ತ ಮುಂದೆ ಸಾಗಲು ಸಾಧ್ಯ. ಗ್ರಾಮೀಣ ಭಾಗದ ಹಿಂದುಳಿದವರು, ದುರ್ಬಲರಿಗೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ ನಾನಾ ಸೇವಾ ಸೌಲಭ್ಯಗಳ ಮೂಲಕ ಆರ್ಥಿಕವಾಗಿ ಸಶಕ್ತಗೊಳಿಸುವತ್ತ ಹೆಜ್ಜೆ ಇರಿಸಿದೆ. ಇಂದು ದೇಶನೂರ, ಯಾದವಾಡ, ಮಮದಾಪೂರ ಗ್ರಾಮಗಳಲ್ಲಿ ಮೂರು ಶಾಖೆಗಳನ್ನು ಹೊಂದಿ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಮಂಡಳ ಪಂಚಾಯತ ಮಾಜಿ ಪ್ರಧಾನರಾದ ಅಶೋಕ ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕೇವಲ 300 ಸದಸ್ಯರ 3 ಲಕ್ಷ ಷೇರು ಹಣದೊಂದಿಗೆ ಶುರುವಾದ ಸಂಘ ಇಂದು ಹೆಮ್ಮರವಾಗಿ ಬೆಳೆದಿದ್ದು, 4200 ಸದಸ್ಯರನ್ನು ಒಳಗೊಂಡು 2 ಕೋಟಿ 25. ಲಕ್ಷಕ್ಕೂ ಹೆಚ್ಚು ಷೇರು ಹಣದೊಂದಿಗೆ ಹೋಬಳಿಯಲ್ಲೇ ಸಹಕಾರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಅಭಿವೃದ್ಧಿಯತ್ತ ಸಾಗಿದೆ. ವರ್ಷದಿಂದ ವರ್ಷಕ್ಕೆ ಲಾಭ ಗಳಿಸುತ್ತಿರುವ ಸಂಘ ಷೇರುದಾರರಿಗೆ ಶೇ 25 ಲಾಭಾಂಶ ನೀಡುತ್ತ ಬರುತ್ತಿದೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದ ಅವರು ಬ್ಯಾಂಕ್ ಆರಂಭವಾಗಿ 25 ವರ್ಷಗಳಾಗಿದ್ದು ಬ್ಯಾಂಕ್‌ನ ಗ್ರಾಹಕರ ಷೇರುದಾರರು, ಠೇವಣಿದಾರರ ಸಹಕಾರದಿಂದ ಈ ಸಾಧನೆ ಸಾದ್ಯ ಎಂದು ಹೇಳಿದರು. ಈ ವೇಳೆ ಶಾಸಕ ವಿಶ್ವಾಸ ವೈದ್ಯ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ರಜತಮಹೋತ್ಸವದ ಕುರಿತು ಮಾತನಾಡಿದರು. ಈ ವೇಳೆ ಗಣ್ಯರನ್ನು, ಶ್ರೀಗಳನ್ನು ಸತ್ಕರಿಸಿದರು. ಸಂಸ್ಥೆ ಅಧ್ಯಕ್ಷ ಮಹಾಬಳೇಶ್ವರ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಎಸ್. ಜಿ. ಪತ್ತಾರ, ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಜಗದ್ಗುರು ಗವಿಸಿದ್ದೇಶ್ವರ ಸ್ವಾಮೀಜಿ, ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಬೈಲಹೊಂಗಲ ಲೆಕ್ಕಪರಿಶೋಕರ ಸಿ.ಎ. ಸುರೇಶ ಉಡಪಿ, ಬೈಲಹೊಂಗಲ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕೆ.ಎ.ಎಸ್. ಶಾಹೀನ ಅಖ್ತರ್, ಸವದತ್ತಿ ಮಲ್ಲಿಕಾರ್ಜುನ ಹೆಗ್ಗನ್ನವರ, ಬೀಳಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಿದ್ದಪ್ಪ ಬಿದರಿ, ನಿವೃತ್ತ ಪ್ರಾಚಾರ್ಯ ಹಾಗೂ ಹಿರಿಯ ಜಾನಪದ ವಿದ್ವಾಂಸ ಶಂಭು ಬಳಿಗಾರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ. ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದಬಸನ್ನವರ, ಚಂದ್ರು ಜಂಬ್ರಿ, ತಾಪಂ ಮಾಜಿ ಅದ್ಯಕ್ಷ ವಿನಯಕುಮಾರ ದೇಸಾಯಿ, ಬಾಸ್ಕರ ಚನ್ನಮೇತ್ರಿ, ಪ್ರಕಾಶ ವಾಲಿ, ಬ್ಯಾಂಕ್‌ನ ನಿರ್ದೇಶಕರಾದ ಗುರ್ಪ ಶೆಟ್ಟರ, ಬಿ. ಎಸ್. ಆರಿಬೆಂಚಿ, ಎಂ. ಎಂ. ತೋಟಗಿ, ಬಿ. ಪಿ. ಪಟ್ಟಣಶೆಟ್ಟಿ, ಆಯ್. ಎಮ್. ಮುಳಕೂರ, ಆರ್. ಬಿ. ಅಂಗಡಿ, ಎಮ್. ಎಚ್. ಕೊಪ್ಪದ, ಬಿ. ಎಮ್. ಚನ್ನಮೇತ್ರಿ, ವ್ಹಿ. ಡಿ ಸಣ್ಣಕ್ಕಿ, ಎನ್. ಎಸ್. ಭಾಂವಿಹಾಳ, ಎಚ್. ಬಿ. ಭೂಶನ್ನವರ, ಶ್ರೀಮತಿ ಪಿ. ಎಸ್. ವಾಲಿ, ಶ್ರೀಮತಿ ಎಸ್. ಡಿ. ಪಟ್ಟೇದ, ರಾಜೇಂದ್ರಗೌಡ ಪಾಟೀಲ, ಅಣ್ಣಪ್ಪ ಖಂಡ್ರಿ, ಡಿ.ಕೆ.ರಫೀಕ, ಪ್ರಕಾಶ ಸುಣಧೋಳಿ, ಚಂದ್ರಶೇಖರ ಬಾಳಿ, ಮಹಾಬಳೇಶ್ವರ ಪುರದಬುಡಿ, ಫಕೀರ್ಪ ಹದ್ದನ್ನವರ, ಬಂಗಾರೆಪ್ಪ ಹರಳಿ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 