ಕಾಯಕ ನಿಧಿ ಯೋಜನೆಯಿಂದ 25ಸಾವಿರ ರೂಪಾಯಿಗಳು ಮೃತ ಕಾರ್ಮಿಕ ಕುಟುಂಬಕ್ಕೆ ಹಸ್ತಾಂತರ
25 thousand rupees handed over to the family of the deceased worker from the Kayaka Nidhi scheme
ಬಳ್ಳಾರಿ 27: ನಗರದಲ್ಲಿ ಕಾಯಕ ನಿಧಿ ಕಾರ್ಮಿಕ ಯೋಜನೆಯಿಂದ ಅಮೃತ ಕಾರ್ಮಿಕ ಕುಟುಂಬಕ್ಕೆ ಶವ ಅಂತಿಮ ಸಂಸ್ಕಾರಕ್ಕಾಗಿ ಇಪ್ಪತ್ತೈದು ಸಾವಿರ ರೂಪಾಯಿ ಚೆಕ್ಕನ್ನು ಗುರುವಾರ ದಿ. 27ರಂದು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ನಗರದ ಎಪಿಎಂಸಿ ಮಾರ್ಕೆಟ್‌ನಲ್ಲಿ ಹಮಾಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾ ಮಾರುತಿ ಎಂಬಾತ (40). ಮೃತಪಟ್ಟ. ಇವರ ಅಂತಿಮಸ್ಕಾರಕ್ಕಾಗಿ ಮಂಜೂರಾದ 25,000 ಸಾವಿರ ಚೆಕ್ಕನ್ನು ಅವರ ಧರ್ಮಪತ್ನಿ ಲಕ್ಷ್ಮಿ ಅವರಿಗೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ, ಕಟ್ಟೆಮನೆ ನಾಗೇಂದ್ರ, ಮತ್ತು ಎಪಿಎಂಸಿ ಕಾರ್ಯದರ್ಶಿಗಳು, ವೀ ಆರ್ ಜಯ್ ಕುಮಾರ್ ಪರಿಹಾರವನ್ನು ವಿತರಿಸಲಾಯಿತು. ಇದೆ ವೇಳೆಯಲ್ಲಿ ಎಪಿಎಂಸಿ ಮಾರ್ಕೆಟ್ ಕಾರ್ಯದರ್ಶಿ, ಜಯಕುಮಾರ್ ಮಾತನಾಡುತ್ತಾ, ರಾಜ್ಯ ಸರ್ಕಾರ, ಕಾರ್ಮಿಕರ ಸಂಕ್ಷೇಮಕ್ಕಾಗಿ, ಮೃತ ಅಮಾಲಿ ಕುಟುಂಬಕ್ಕೆ ಇಪ್ಪತೈದು ಸಾವಿರ ಶವ ಸಂಸ್ಕಾರಗಳ ನಿರ್ವಹಣೆಗೆ ಅದೇ ರೀತಿಯಾಗಿ ಒಂದು ಲಕ್ಷ ರೂಪಾಯಿ ವಿಮಾ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾರ್ಕೆಟ್ ಹಮಾಲಿ ಸಂಘದ ಅಧ್ಯಕ್ಷ, ಹನುಮಂತಪ್ಪ, ಎಪಿಎಂಸಿ ಮಾರ್ಕೆಟ್, ಮಾರ್ಕೆಟಿಂಗ್ ಅಸಿಸ್ಟೆಂಟ್, ನಿರಂಜನ್ ಮೂರ್ತಿ ಜೊತೆಗೆ, ಇತರ ಸಿಬ್ಬಂದಿ ಹಾಗೂ ಹಮಾಲಿ ಸಂಘದ ಪದಾಧಿಕಾರಿಗಳು ಇತರರು ಆಗಮಿಸಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 