11 ಗಂಟೆಯಲ್ಲಿ 18 ಎಕರೆ ಜಮೀನು ಬಿತ್ತನೆ: ರೈತನಿಗೆ ಗ್ರಾಮಸ್ಥರಿಂದ ಸನ್ಮಾನ
18 acres of land sown in 11 hours: Farmer felicitated by villagers
ದೇವರ ಹಿಪ್ಪರಗಿ 04: ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ರೈತ ಮುಖಂಡರಾದ ಹಣಮಂತ್ರಾಯ ಮುಳಜಿ ಅವರ ಅಪೇಕ್ಷೆಯಂತೆ ಮತ್ತು ಅವರ ಆಸೆಯಂತೆ ಗ್ರಾಮದ ಅಶೋಕ್ ಗೌಡ ಪಾಟೀಲ್ ಅವರ ಜಮೀನಿನಲ್ಲಿ ರೈತರಾದ ಮಲ್ಲಪ್ಪ ರೊಟ್ಟಿ ಅವರು ಒಂದೇ ದಿನ ಸುಮಾರು ಸತತ 11 ಗಂಟೆಯಲ್ಲಿ 18 ಎಕರೆ ಜಮೀನು ಬಿತ್ತನೆ ಮಾಡುವುದರ ಮೂಲಕ ಸಾಧನೆ ಮಾಡಿದ್ದಾರೆ ಇವರ ಕಾರ್ಯಕ್ಕೆ ಇಡೀ ಗ್ರಾಮಸ್ಥರು ಹುರಿದುಂಬಿಸಿ ಪ್ರೂತ್ಸಾಹ ಮಾಡಿದ್ದಾರೆ.
ಈ ರೈತನ ಸಾಧನೆಗೆ ಊರಿನ ರೈತರಿಗೆ ಹೊಸ ಹುರುಪು ನೀಡಿದಂತಾಗಿದೆ ಬಿತ್ತನೆ ಮಾಡಿದ ನಂತರ ಊರನಲ್ಲಿ ರೈತ ದಂಪತಿಗಳಿಗೆ ಮತ್ತು ಎತ್ತುಗಳನ್ನು ಮೆರವಣಿಗೆ ಮಾಡಲಾಯಿತು. ಊರಿನ ಪ್ರಗತಿ ಪರ ರೈತರು ಪಿಕೆಪಿಎಸ್ ಅಧ್ಯಕ್ಷರಾದ ನಾಗಣ್ಣ ಮುಳಜಿ ಅವರು ತಮ್ಮ ಮನೆಗೆ ಕರಿಸಿ ಸಾಧನೆ ಮಾಡಿದ ರೈತ ದಂಪತಿಗಳಿಗೆ ಬಟ್ಟೆ ಆಹೇರಿ ಮಾಡಿ ಸತ್ಕರಿಸಿ ಮಾತನಾಡಿದ ಅವರು ರೈತನ ಸಾಧನೆಯಿಂದ ಮತ್ತಷ್ಟು ರೈತನ ಹೊಸ ಹುರುಪು ನಿಡಿದಂತಾಗಿದೆ. ಇಂದಿನ ಕಾಲದಲ್ಲಿ ಒಕ್ಕಲುತನ ದಿಂದ ದೂರ ಉಳಿಯುತ್ತಿರುವ ಸಂದರ್ಭದಲ್ಲಿ ಯುವ ಸಮುದಾಯಕ್ಕೆ ಇದೊಂದು ಪ್ರೆರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಊರಿನ ರೈತರಾದ ನಿಲಕಂಠ ಬೆನಕನಹಳ್ಳಿ ಬಸವರಾಜ ಹೊಸಮನಿ ಮಹಾಂತೇಶ ಉಡಗಿ ಸಿಂಧೂರ ಪೂಜಾರಿ ಲಗಮಣ್ಣ ಪೂಜಾರಿ ಹಣಮಂತ ಕಂಬಾರ ಭೀಮಾಶಂಕರ ಪ್ಯಾಟಿ ದೇವಾನಂದ್ ಬಾಗಲಕೋಟ ಗಂಗಪ್ಪ ಇಮ್ಮನ ಮಹಾದೇವ ಕಡ್ಲೇವಾಡ ಸಂತೋಷ ಹಾದಿಮನಿ ಬಾಬು ಖೋಜೀಗಿರ ಜಟ್ಟೇಪ್ಪ ಯಳಕೋಟಿ ಸಿದ್ದು ಕಡ್ಲೇವಾಡ ದಾನಪ್ಪಗೌಡ ಪಾಟೀಲ್ ಮಂಜುನಾಥ ಬಾಗಲಕೋಟ ಶಶಿಕಾಂತ ಚಕ್ಕಡಿ ದೇವಾನಂದ್ ಉಡಗಿ ಸಂತೋಷ ಸಿಂದಗಿ ಹಲವಾರು ರೈತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 