ಹಾನಗಲ್ ಕುಮಾರೇಶ್ವರ ಮಹಾ ಶಿವಯೋಗಿಗಳ 158 ನೇ ಜಯಂತಿ ಮಹೋತ್ಸವ

ಹಾನಗಲ್ ಕುಮಾರೇಶ್ವರ ಮಹಾ ಶಿವಯೋಗಿಗಳ 158 ನೇ ಜಯಂತಿ ಮಹೋತ್ಸವ 158th Jayanti Celebration of Maha Shivayogi of Hangal Kumareshwar

ಹಾನಗಲ್ ಕುಮಾರೇಶ್ವರ ಮಹಾ ಶಿವಯೋಗಿಗಳ 158 ನೇ ಜಯಂತಿ ಮಹೋತ್ಸವ

ಗಂಗಾವತಿ: 13 ಪೂಜ್ಯ  ಲಿಂ.ಹಾನಗಲ್ ಕುಮಾರೇಶ್ವರ ಮಹಾ ಶಿವಯೋಗಿಗಳ 158 ನೇ ಜಯಂತಿ ಮಹೋತ್ಸವದ ನಿಮಿತ್ಯವಾಗಿ ನಗರದ ಚನ್ನಬಸವ ತಾತನವರ ಮಠದ ಆವರಣದ ಪುರಾಣ ಮಂಟಪದಲ್ಲಿ ಕಳೆದ ಬುಧುವಾರದಿಂದ ಪ್ರವಚನ ನಡೆಯುತ್ತಿದೆ.ಪ್ರವಚನದ ಕಾರ್ಯಕ್ರಮದಲ್ಲಿ ಶುಕ್ರವಾರ ಶ್ರೀ ಹಾನಗಲ್ ಕುಮಾರ ಸ್ವಾಮಿಯವರ ತೊಟ್ಟಿಲು ಕಾರ್ಯಕ್ರಮವನ್ನು ಮಹಿಳೆಯರು ವಿಜ್ರಂಬಣೆಯಿಂದ ನೆರವೇರಿಸಿದರು.ಕಟ್ಟಿಗೆ ತೊಟ್ಟಿಲನ್ನು ಭಕ್ತರಾದ ಲಕ್ಶ್ಮಿ ವೀರಯ್ಯಸ್ವಾಮಿ ಹಿರೇಜಂತಕಲ್,ಬೆಳ್ಳಿ ತೊಟ್ಟಿಲನ್ನು ನಂದಿನಿ ಮುದಗಲ್, ಬೆಳ್ಳಿ ಉಡುದಾರವನ್ನು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರಯ್ಯ ಕಲ್ಮಠ ಸೇರಿದಂತೆ ಹಲವರು ವಿವಿಧ ಬೆಳ್ಳಿಯ ಕಾಣಿಕೆಗಳನ್ನು  ಅರ​‍್ಿಸಿದರು.ಮ.ಘ.ಚ ಡಾ.ಶಾಂತವೀರ ಶಿವಾಚಾರ್ಯ ಹಾವಗಿ ಲಿಂಗೇಶ್ವರ ಸಂಸ್ಥಾನಮಠ ಗಡಿಗೌಡಗಾ0ವ ಇವರು ನಡೆಸಿಕೊಟ್ಟ ಪ್ರವಚನದ ವೇದಿಕೆಯಲ್ಲಿ ಷ.ಬ್ರ.ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯ ಶ್ರೀಗಳು ಸಾನಿಧ್ಯವಹಿಸಿದ್ದರು.ಪುರಾಣ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಂಡು ಬಂದಿತು.ಪುರಾಣ ಕಾರ್ಯಕ್ರಮದ ನಂತರ ಪ್ರಸಾದದ ವ್ಯವಸ್ಥೆಯನ್ನು ಸಹ ಮಾಡಲಾಗಿದ್ದು ಭಕ್ತರು ಪ್ರಸಾದ ಸವಿದರು.ಶನಿವಾರ ಬೆಳಿಗ್ಗೆ ನಗರದ ಜುಲೈ ನಗರದ ಭಾಗದಲ್ಲಿ ವಿವಿಧ ಶ್ರೀಗಳಿಂದ ಪಾದಯಾತ್ರೆ ನಡೆಯಿತು. ಬಳೂಟಗಿಯ ಶಿವಕುಮಾರ ದೇವರು ಮತ್ತು ಚಂದ್ರಶೇಖರ ದೆವರು ಆಶೀರ್ವಚನ ನೀಡಿದರು.ಮಧ್ಯಾನ್ಹ ಹಣವಾಳ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಾಸ್ಥನದಿಂದ ಅತಿ ವಿಜ್ರಂಭಣೆಯಿಂದ,ಡೊಳ್ಳು-ಭಾಜಾ ಭಜಂತ್ರಿಗಳೊಂದಿಗೆ ನಡೆದ ಪಾದಯಾತ್ರೆಯಲ್ಲಿ ಹರ-ಚರ ಮೂರ್ತಿಗಳು,ಎಲ್ಲಾ ಸಮಾಜದ ಮುಖಂಡರು, ವೀರಶೈವ-ಲಿಂಗಾಯತ ಮಹಾ ಸಭಾದ  ಹಾಗೂ ಪೂಜ್ಯ ಹಾನಗಲ್ ಶ್ರೀ ಲಿಂ. ಹಾನಗಲ್ ಕುಮಾರ ಮಹಾ ಶಿವಯೋಗಿಗಳ ಜಯಂತಿ ಮಹೋತ್ಸವ ಸಮಿತಿಯ ಪದಾಧಿಕಾರಿಗಳಾದ ಶ್ರೀಗಳು ಭಾಗವಹಿಸಿದ್ದರು.