ಗೋಮಟೇಶ ವಿದ್ಯಾಪೀಠದಲ್ಲಿ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ
150th anniversary of Vande Mataram celebrated at Gomatesh Vidyapeeth
ಬೆಳಗಾವಿ 26: ಸ್ಥಳೀಯ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿ ಇಂದು ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ವಂದೇಮಾತರಂ ಗೀತೆಯನ್ನು ಸಾಮೂಹಿಕವಾಗಿ ಹಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ‌್ಯಕ್ರಮದ ನೇತ್ರತ್ವವನ್ನು ಗೋಮಟೇಶ ವಿದ್ಯಾಪೀಠದ ಅಧಿಷ್ಠಾತಾ, ಬೆಳಗಾವಿ ಗ್ರಾಮೀಣ ವಿಧಾನ ಸಭಾ ಮತಕ್ಷೇತ್ರದ ಮಾಜಿ ಶಾಸಕ ಸಂಜಯ ಬಿ ಪಾಟೀಲ ಅವರು ವಹಿಸಿದ್ದರು.
ಸಪಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ ಜಗದೀಶ ಹಿರೇಮಣಿ ಅವರು ಭಾಗವಹಿಸುವುದರ ಮೂಲಕ ಮಕ್ಕಳಿಗೆ ವಂದೇ ಮಾತರಂ ಗೀತೆಯ ಮಹತ್ವವನ್ನು ವಿವರಿಸಿದರು. ನಾಡಗೀತೆ, ರಾಷ್ಟ್ರಗೀತೆ, ಹಾಗೂ ವಂದೇ ಮಾತರಂ ಗೀತೆಯನ್ನು ಸಾಮೂಹಿಕವಾಗಿ ಹಾಡುವುದರ ಮೂಲಕ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯನ್ನು ಸಂಭ್ರಮಿಸಲಾಯಿತು.
ಬೆಳಗಾವಿ ಗ್ರಾಮಾಂತರ ಭಾ.ಜ.ಪ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ ಹಾಗೂ ಶಿವುಕುಮಾರ ್ಘ ಯಲ್ಲೇಶ ಕೋಲಕಾರ, ಗೋಮಟೇಶ ವಿದ್ಯಾಪೀಠದ, ನಿರ್ದೇಶಕರುಗಳಾದ ವೃಷಭ ಸಂಜಯ ಪಾಟೀಲ, ಸನತ್‌ಕುಮಾರ ವ್ಹಿ.ವ್ಹಿ. ಅವರು ಉಪಸ್ಥಿತರಿದ್ದರು.
ಇನ್ನುಳಿದಂತೆ ಗೋಮಟೇಶ ವಿದ್ಯಾದಪೀಠದ ಶಾಲಾ ಕಾಲೇಜುಗಳ ಮುಖ್ಯಸ್ಥರಾದ, ಡಿ.ಎಸ್.ಹನಗಂಡಿ, ಸುನೀಲ ಬಿ ಪಾಟೀಲ, ಸರೋಜಾ ಪಾಟೀಲ, ಪಿ.ಎಂ.ನಾಯಕ, ಮಹೇಶ ಕಾರೇಕರ, ಬೈರು ಪಾಟೀಲ, ಅಕ್ಷಯ ನಂದಗಾಂವ, ನವೀನ ಭಸ್ಮೇ, ಜ್ಯೋತಿ ಮೋರೆ, ರತ್ನಾ ಬಡಗೇರ, ಹಾಗೂ ಗೋಮಟೇಶ ವಿದ್ಯಾಪೀಠದ ಸಮಸ್ತ ಶಿಕ್ಷಕ-ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಮಕ್ಕಳಿಗೆ ಗೀತೆಯ ಆದೇಶವನ್ನು ದೈಹಿಕ ಶಿಕ್ಷಣ ಶಿಕ್ಷಕ ಮಹಾವೀರ ಬುಡಗೌಡರ ಅವರು ನೀಡಿದರು. ಕಾರ‌್ಯಕ್ರಮವನ್ನು ಪದ್ಮಾಕರ ಖತಗಲ್ಲಿ ಅವರು ನಿರೂಪಿಸಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 