ಕೆ.ಎಲ್‌.ಇ.ಸಂಸ್ಥೆಯ 110 ನೇ ಸಂಸ್ಥಾಪನಾ ದಿನಾಚರಣೆ

ಕೆ.ಎಲ್‌.ಇ.ಸಂಸ್ಥೆಯ 110 ನೇ ಸಂಸ್ಥಾಪನಾ ದಿನಾಚರಣೆ 110th Foundation Day Celebration of KLE

 ಸವದತ್ತಿ 13: ನಾವು ಭೌತಿಕವಾಗಿ ಹಚ್ಚಿದ ದೀಪ ಆರಬಹುದು, ಕೆ.ಎಲ್‌.ಇ.ಸಂಸ್ಥೆಯನ್ನು ಕಟ್ಟಿದ ಸಪ್ತರ್ಷಿಗಳು ಹಚ್ಚಿದ ಅಕ್ಷರದ ದೀಪ ಇಡೀ ಭೂಮಂಡಲ ಇರೋವರೆಗೂ ಬೆಳಗುತ್ತಿರುತ್ತದೆ ಎಂದು ಹುಬ್ಬಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ವಾಯ್‌.ಎಂ.ಭಜಂತ್ರಿ ಹೇಳಿದರು.    

ಇಲ್ಲಿನ ಬೆಳ್ಳುಬ್ಬಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕೆ.ಎಲ್‌.ಇ.ಅಂಗ ಸಂಸ್ಥೆಗಳ ಸಹಯೋಗದಲ್ಲಿ ಏರಿ​‍್ಡಸಿದ ಕೆ.ಎಲ್‌.ಇ.ಸಂಸ್ಥೆಯ 110 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಮನುಷ್ಯರಲ್ಲಿ ಮೂರು ಪ್ರಕಾರದವರಿರುತ್ತಾರೆ. ಮೊದಲನೆಯವರು ಭೌತಿಕವಾಗಿ ಇಲ್ಲದಿದ್ದರೂ ಬದುಕಿರುತ್ತಾರೆ. ಎರಡನೆಯವರು ಬದುಕಿದ್ದೂ ಸತ್ತಂತಿರುವವರು, ಮೂರನೆಯವರು ಸಾಮಾನ್ಯ ಜನ. ಇವರುಗಳಲ್ಲಿ ಭೌತಿಕವಾಗಿ ಇಲ್ಲದಿದ್ದರೂ ಬದುಕಿರುವವರಲ್ಲಿ ಕೆ.ಎಲ್‌.ಇ.ಸಂಸ್ಥೆಯನ್ನು ಕಟ್ಟಿದ ಸಪ್ತರ್ಷಿಗಳು ಮೊದಲನೆಯ ಸ್ಥಾನದಲ್ಲಿ ಬರುತ್ತಾರೆಂದರುಬೆಲ್ಲದ ಪುತ್ಥಳಿಯ ಕೈಯಲ್ಲಿ ಹಿಡಿದು ಎಲ್ಲಿ ಚುಂಬಿಸಿದರೂ ಇನಿದಹುದು ಎಂಬ ಅಲ್ಲಮಪ್ರಭುವಿನ ವಚನದ ಸಾರದಂತೆ ಕೆ.ಎಲ್‌.ಇ.ಸಂಸ್ಥೆಯಲ್ಲಿ ಎಲ್ಲ ಬಗೆಯ ಕೋರ್ಸುಗಳು ಇಲ್ಲಿ ಲಭ್ಯವಿವೆ ಎಂದು ಈ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿನ ಅಕ್ಷಯಪಾತ್ರೆ, ಕಾಮಧೇನು ಅಥವಾ ಕಲ್ಪವೃಕ್ಷವೆಂದರೂ ತಪ್ಪಾಗಲಿಕ್ಕಿಲ್ಲ ಎಂದರು.  

ಉತ್ತರ ಕರ್ನಾಟಕವು 1916ರ ಸಮಯದಲ್ಲಿ ಶೈಕ್ಷಣಿಕ ಬರಗಾಲ ಆವರಿಸಿದ ಸಂದರ್ಭದಲ್ಲಿ ಶಿ.ಶಿ.ಬಸವನಾಳರು, ಎಮ್‌.ಆರ್‌.ಸಾಖರೆಯವರು, ಬಿ.ಬಿ.ಮಮದಾಪುರ, ಎಚ್‌.ಎಫ್‌.ಕಟ್ಟೀಮನಿ, ಪಂಡಿತಪ್ಪ ಚಿಕ್ಕೋಡಿ, ಬಿ.ಎಸ್‌.ಹಂಚಿನಾಳ ಮತ್ತು ಸರದಾರ ವಿ.ವಿ.ಪಾಟೀಲರು ಈ ಭಾಗಕ್ಕೆ ಅಕ್ಷರದ ದೀಕ್ಷೆಯನ್ನು ಕೊಡಲು ಶಾಲೆಯನ್ನು ತೆರೆದರು ಎಂದು ಕೆ.ಎಲ್‌.ಇ.ಸಂಸ್ಥೆಯ ಇತಿಹಾಸವನ್ನು ಹೇಳಿದರು. 

ಈ ವೇಳೆ ಬಸವರಾಜ ಪುಟ್ಟಿ, ಪ್ರಾಚಾರ್ಯ ಡಾ.ಎನ್‌.ಆರ್‌.ಸವತೀಕರ, ಪ್ರೊ. ಕೆ.ರಾಮರೆಡ್ಡಿ, ಡಾ.ಎ.ಎಫ್‌.ಬದಾಮಿ, ಬಿ.ವಿ.ಚಿಚಕಂಡಿ ಬಿ.ಕೆ.ಕಠಾರೆ, ಎಂ.ಜಿ.ಅಂಬಲಿ, ಸಂತೋಷ ಹುಬ್ಬಳ್ಳಿ, ಎಸ್‌.ಜಿ.ಪಾಟೀಲ, ಡಿ.ಎಸ್‌.ಡಿಗ್ಗಿಮಠ, ಬಿ.ಬಿ.ಜಾಬರ, ಬಿ.ಎಂ.ಕೊಕಟನೂರ,  ಪಿ.ಆಯ್‌.ಬಾಗವಾನ, ಎಸ್‌.ಎಂ.ಕಿರೋಜಿ ಹಾಗೂ ಪ್ರಾಧ್ಯಾಪಕರು, ಅಂಗಸಂಸ್ಥೆಗಳ ಶಿಕ್ಷಕ ವೃಂದ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.