ಕಾರವಾರ ನಗರ ಕುಡಿಯುವ ನೀರಿಗೆ 106 ಕೋಟಿ ಅನುದಾನ
ಕಾರವಾರ: ಹಾಲಕ್ಕಿ ಒಕ್ಕಲಿಗ ಜನಾಂಗದ ಸಾಂಸ್ಕೃತಿಕ ವೈಭವ ಪ್ರದರ್ಶನಕ್ಕೆ ಮ್ಯೂಜಿಯಂ ಸ್ಥಾಪನೆಗೆ ಸಕರ್ಾರ 3 ಕೋಟಿ ರೂ. ಮಂಜೂರು ಮಾಡಿದೆ.ಪ್ರವಾಸಿಗರಿಗೆ ಶಾಶ್ವತವಾಗಿ ಹಾಲಕ್ಕಿ ಜನಾಂಗದ ಸಾಂಸ್ಕೃತಿಕ ಮಹತ್ವ ತಿಳಿಯುವ ಹಾಗೆ ಮ್ಯುಜಿಯಂ ನಿಮರ್ಾಣ ಮಾಡಲಾಗುವುದು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಕಾರವಾರದ ಪತ್ರಿಕಾಭವನದಲ್ಲಿ ಬುಧುವಾರ ಸುದ್ದಿಗೋಷ್ಠಿ ಮಾಡಿದ ಅವರು ಹಾಲಕ್ಕಿಗಳ ಉಡುಗೆ ತೊಡುಗೆ, ಸುಗ್ಗಿಕುಣಿತ, ಗುಮಟೆಪಾಂಗ್, ಸಂಪ್ರದಾಯಿಕ ಹಾಡಿನ ದಾಖಲೆ ಎಲ್ಲವೂ ಮ್ಯೂಜಿಯಂನಲ್ಲಿರಲಿವೆ ಎಂದರು. ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಹು ವರ್ಷಗಳ ಬೇಡಿಕೆ ಹಾಗೆ ಉಳಿದಿದೆ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸಕರ್ಾರವಿದ್ದು, ಜಾನಪದ ಕಲಾವಿದೆ ಸುಕ್ರಿ ಬೊಮ್ಮ ಗೌಡರ ಮಾರ್ಗದರ್ಶನ ಪಡೆದು ಹಾಲಕ್ಕಿ ಸಮುದಾಯವನ್ನು ಎಸ್.ಟಿ.ಗೆ ಸೇರಿಸಲು ಪ್ರಯತ್ನ ಮಾಡುವೆ. ಸುಕ್ರಿ ಬೊಮ್ಮ ಗೌಡರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಕರೆದೊಯ್ಯುವೆ. ಅವರ ಬಯಕೆಯನ್ನು ಈಡೇರಿಸಲು ಯತ್ನಿಸುವೆ. ಇದರಿಂದ ಹಾಲಕ್ಕಿ ಸಮುದಾಯ ಸಾಮಾಜಿಕವಾಗಿ, ಆಥರ್ಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಲಿದೆ ಎಂದರು.
ಗಡಿನಾಡನಲ್ಲಿ ಕನ್ನಡ ಸಾಂಸ್ಕೃತಿ ಭವನ ನಿಮರ್ಾಣದ ಅವಶ್ಯಕತೆಯಿದ್ದು, ಇದಕ್ಕಾಗಿ 1.25 ಕೋಟಿ ರೂ.ಮಂಜೂರಾಗಿದೆ. ಕನ್ನಡ ಸಾಂಸ್ಕೃತಿ ಭವನವನ್ನು ಕನರ್ಾಟಕ -ಗೋವಾ ಗಡಿ ಭಾಗದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು. ಕನ್ನಡ ಭಾಷೆಯ ಅಭಿವೃದ್ಧಿಗೆ, ಕನ್ನಡದ ಚಟುವಟಿಕೆಗೆ ಈ ಭವನ ಬಳಕೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಿಗೆ 100 ಕೋಟಿ ರೂ. ಸಕರ್ಾರ ನೀಡಿದೆ. ವಿವಿಧ ರಸ್ತೆ, ಚರಂಡಿ ನಿಮರ್ಾಣ ಕಾರ್ಯ, ರಸ್ತೆ ದುರಸ್ಥಿ ಕೆಲಸ ತೆಗೆದುಕೊಳ್ಳಲಾಗುತ್ತಿದೆ. ರಾಮನಗುಳಿ-ಕಲ್ಲೇಶ್ವರ ನಡುವೆ ಸೇತುವೆ ನಿಮರ್ಾಣಕ್ಕೆ 17 ಕೋಟಿ ರೂ. ಸಕರ್ಾರ ಮಂಜೂರಿ ಮಾಡಿದೆ. ಕಳೆದ ಮಳೆಗಾಲದ ಪ್ರವಾಹದಲ್ಲಿ ಈ ಭಾಗದ ತೂಗು ಸೇತುವೆ ಕೊಚ್ಚಿ ಹೋಗಿತ್ತು. ಇದಕ್ಕೆ ಶಾಶ್ವತ ಕಾಮಗಾರಿ ಮಾಡಲು ಸಕರ್ಾರ 17 ಕೋಟಿ ನೀಡಿದೆ ಎಂದರು.
ಕಾರವಾರ ಪ್ರವಾಸಿ ಮಂದಿರ ನಿಮರ್ಾಣಕ್ಕೆ 10 ಕೋಟಿ ಮಂಜೂರಾಗಿದೆ. ಕೋಡಿಭಾಗ, ಕಾಳಿ ಮಾತಾ ದೇವಾಲಯ ಇರುವ ದ್ವೀಪಕ್ಕೆ ಜಟ್ಟಿ ನಿಮರ್ಿಸಲು ಒಟ್ಟು 5 ಕೋಟಿ ಬಂದಿದೆ. ಕೂರ್ಮಗಡ ಬಳಿ ಜಟ್ಟಿ ನಿಮರ್ಾಣದ ಕಾಮಗಾರಿಗೆ ಹಣ ಮಂಜೂರಿ ಹಂತದಲ್ಲಿದೆ ಎಂದು ಶಾಸಕಿ ರೂಪಾಲಿ ನಾಯ್ಕ ವಿವರಿಸಿದರು.
ಚಿಕ್ಕ ನೀರಾವರಿ ವಿಭಾಗಕ್ಕೆ 4 ಕೋಟಿ ಬಂದಿದೆ. ಕುಡಿಯುವ ನೀರಿನ ಕಾಮಗಾರಿಗಳ ರಿಪೇರಿಗೆ 10 ಕೋಟಿ ರೂ. ಹಾಗೂ ಸೀಬರ್ಡ ನೌಕಾನೆಲೆ, ಕಾರವಾರ ನಗರಕ್ಕೆ ನೀರು ಸರಬರಾಜು ಯೋಜನೆಗೆ 106 ಕೋಟಿ ರೂ.ಮಂಜೂರಾಗಿದೆ ಎಂದು ಶಾಸಕಿ ವಿವರಿಸಿದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಡಿ 4 ಕೋಟಿ ರೂ.ಬಂದಿದೆ. ವಿವಿಧ ಕಾಮಗಾರಿಗಳನ್ನು ಈ ಅನುದಾನದಲ್ಲಿ ತೆಗೆದುಕೊಳ್ಳಲಾಗಿದೆ. ಕ್ರಿಶ್ಚಿಯನ್, ಮುಸ್ಲಿಂ, ಕೋಮಾರಪಂಥ,ಭಂಡಾರಿ, ನಾಮಧಾರಿ, ಹರಿಕಂತ್ರ ಖಾವರ್ಿ, ಮಹಾಲೆ ಸಮಾಜಗಳಿಗೆ ಸಮುದಾಯ ಭವನ ನಿಮರ್ಾಣ ಮಾಡಿಕೊಡುವ ಉದ್ದೇಶವಿದೆ. ಈ ಭವನಗಳಿಗೆ ಅನುದಾನ ಮಂಜೂರಿ ಹಂತದಲ್ಲಿವೆ ಎಂದರು. ಮೆಡಿಕಲ್ ಕಾಲೇಜು ಆಸ್ಪತ್ರೆ ನಿಮರ್ಾಣಕ್ಕೆ 160 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ಪ್ರವಾಹ ಪರಿಹಾರ:
ಪ್ರವಾಹದಲ್ಲಿ ತೊಂದರೆಗೀಡಾದ ಕಾರವಾರ ತಾಲೂಕಿನ ವಿವಿಧ ಗ್ರಾಮಗಳ 1647 ಕುಟುಂಬಗಳಿಗೆ ತಲಾ 10 ಸಾವಿರ ದಂತೆ ಪರಿಹಾರ ವಿತರಿಸಲಾಗಿದೆ. 57 ಫಲಾನುಭವಿಗಳಿಗೆ ಮನೆ ನಿಮರ್ಾಣಕ್ಕೆ ತಲಾ 5 ಲಕ್ಷ ದಂತೆ ಪರಿಹಾರ ನೀಡಲು ಸಿದ್ಧತೆ ನಡೆದಿವೆ. ಮೊದಲ ಕಂತಿನ ಹಣ ನೀಡಲಾಗಿದೆ. ಮನೆ ಹಾನಿಯ ಸಿ ಕೆಟಗಿರಿಯ 342 ಫಲಾನುಭವಿಗಳಿಗೆ ತಲಾ 50 ಸಾವಿರ ಪರಿಹಾರ ವಿತರಿಸಲಾಗಿದೆ.
ಅಂಕೋಲಾದಲ್ಲಿ 1673 ಕುಟುಂಬಗಳಿಗೆ ತಲಾ 10 ಸಾವಿರದಂತೆ ಪರಿಹಾರ ನೀಡಲಾಗಿದೆ. 135 ಜನರಿಗೆ ಮನೆ ನಿಮರ್ಾಣಕ್ಕೆ 5 ಲಕ್ಷ ರೂ. ನೆರವು ನೀಡಲು ಪಟ್ಟಿ ಸಿದ್ಧವಿದ್ದು, ಮೊದಲ ಕಂತಿನ ಹಣ ನೀಡಲಾಗಿದೆ. 138 ಸಿ ಕೆಟಗರಿಯಲ್ಲಿ ಹಾನಿಯಾದವರಿಗೆ ತಲಾ 50 ಸಾವಿರದಂತೆ ಪರಿಹಾರ ವಿತರಿಸಲಾಗಿದೆ. ನಗರಸಭೆಯ ವ್ಯಾಪ್ತಿಯ 11 ಮನೆಗಳ ಕುಟುಂಬದವರಿಗೆ ತಲಾ 50 ಸಾವಿರದಂತೆ ಪರಿಹಾರ ವಿತರಿಸಲಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ವಿವರಿಸಿದರು.
ಬಿಜೆಪಿ ವಕ್ತಾರ ರಾಜೇಶ್ ನಾಯಕ್, ಜಗದೀಶ್ ನಾಯಕ, ನಿತಿನ್ ಪಿಕಳೆ, ಗಣಪತಿ ಉಳ್ವೇಕರ್, ಅರುಣ್ ನಾಡಕಣರ್ಿ, ನಯನಾ ನೀಲಾವರ, ಬಿಜೆಪಿ ನಗರ ಮತ್ತು ಗ್ರಾಮೀಣ ಘಟಕದ ಅಧ್ಯಕ್ಷರು, ಶಾಸಕರು ಬೆಂಬಲಿಗರು ಪತ್ರಿಕಾಗೋಷ್ಠಿಯಲ್ಲಿದ್ದರು.