100ನೇ ವರ್ಷದ ಓಂ ನಮಃ ಶಿವಾಯ ತಾರಕ ಮಂತ್ರ ಪಠಣಕ್ಕೆ ಚಾಲನೆ
100th year of Om Namah Shivaya Taraka Mantra chanting begins
ಹಾರೂಗೇರಿ, 11 : ಓಂ ನಮಃ ಶಿವಾಯ ಭಜನೆ ಎಂದರೆ ದೇವರಲ್ಲಿ ತಲ್ಲೀನತೆ ಹೊಂದಿ, ಭಕ್ತರ ಮನಸ್ಸನ್ನು ವಿಕಾಸಗೊಳಿಸುವಂಥದ್ದು. ಧ್ಯಾನದ ಸಂದರ್ಭದಲ್ಲಿ ಮನುಷ್ಯರ ದುರ್ಗುಣಗಳು ದೂರವಾಗಿ ಅಂತರಂಗಕ್ಕೆ ಚೈತನ್ಯದ ಬಲ ತುಂಬುತ್ತದೆ ಎಂದು ಇಂಚಲ ಶ್ರೀ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀ ಗುರು ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಲೀಲಾಮಠದಲ್ಲಿ ಬುಧವಾರ 100ನೇ ವರ್ಷದ ಓಂ ನಮಃ ಶಿವಾಯ ತಾರಕ ಮಂತ್ರ ಪಠಣಕ್ಕೆ ಚಾಲನೆ ಅವರು ಆಶೀರ್ವಚನ ನೀಡಿದರು. ಮಹಾಶಿವರಾತ್ರಿ ಸಪ್ತಾಹದ ಭಾಗವಾಗಿ ನಿರಂತರ 7ದಿನ ನಡೆಯುವ ಓಂ ನಮಃ ಶಿವಾಯ ಭಜನೆ ಪಠಣವು ಭಕ್ತರಲ್ಲಿ ಭಕ್ತಿ ಭಾವ ಮೂಡಿಸುತ್ತದೆ. ದೇಶದ ಬಹುದೊಡ್ಡ ಮೌಲ್ಯ ಆಧ್ಯಾತ್ಮ ಸಂಸ್ಕೃತಿ. ದೇವರನ್ನು ಒಲಿಸಿಕೊಳ್ಳಲು ಇರುವ ಹಲವು ಮಾರ್ಗಗಳಲ್ಲಿ ಭಜನೆ ಕೂಡ ಒಂದಾಗಿದ್ದು, ಈ ಭಜನೆಯ ಮೂಲಕ ಧರ್ಮ, ಸಂಸ್ಕೃತಿ, ಆಚಾರ, ವಿಚಾರಗಳು ಇನ್ನೂ ಜೀವಂತವಾಗಿವೆ ಎಂದರು.
ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಮಾತನಾಡಿ ಶ್ರೀ ಚನ್ನವೃಷಭೇಂದ್ರ ಲೀಲಾಮಠ ಆಧ್ಯಾತ್ಮಿಕ, ವೇದಾಂತ, ಪ್ರವಚನದ ಮೂಲಕ ಲಕ್ಷ್ಯಾಂತರ ಭಕ್ತರ ಮನೋಭಿಲಾಷೆಯನ್ನು ಪೂರೈಸುತ್ತ ಬಂದಿದೆ. ನಮ್ಮಂತಹ ಭಕ್ತರಿಗೆ ಶ್ರೀಮಠ ಶಕ್ತಿ ಕೇಂದ್ರವಾಗಿದೆ ಎಂದರು. ಹಂಪಿಯ ಶ್ರೀ ವಿದ್ಯಾನಂದ ಭಾರತಿ ಸ್ವಾಮೀಜಿ ಆಶೀವರ್ಚನ ನೀಡುತ್ತ ಗಡಿಭಾಗದಲ್ಲಿ ಶ್ರೀ ಚನ್ನವೃಷಭೇಂದ್ರರ ವೇದಾಂತ ಪರಿಷತ್ ಬಹುದೊಡ್ಡ ಆಧ್ಯಾತ್ಮಿಕ ಅರಿವಿನ ಕೇಂದ್ರವಾಗಿದ್ದು, ಇದು ಜ್ಞಾನವನ್ನು ಪಸರಿಸುವ ಧಾರ್ಮಿಕ ಕಾರ್ಯವಾಗಿದೆೆ ಎಂದರು.
ಶ್ರೀ ಪೂರ್ಣಾನಂದ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಸಚ್ಚಿದಾನಂದ ಸ್ವಾಮೀಜಿ, ಮಾತೋಶ್ರೀಯವರಾದ ಲಕ್ಷ್ಮೀ ತಾಯಿ, ನೀಲಮ್ಮ ತಾಯಿ, ಅನುಸೂಯಾ ತಾಯಿ, ಶ್ರೀ ಮಲ್ಲೇಶ್ವರ ಶರಣರು, ಬಿ.ಎಂ.ಮುಜಾವರ ಸಾಹೇಬರು, ಶ್ರೀ ನಿಂಗಾನಂದ ಸ್ವಾಮೀಜಿ, ಶ್ರೀಮಠದ ಸದ್ಭಕ್ತರಾದ ಶಿವಗೊಂಡ ಧರ್ಮಟ್ಟಿ, ವಿಠ್ಠಲರಾವ ಬಂತಿ, ಬಾಬು ಪರಮಗೌಡರ, ಶ್ರೀಶೈಲಗೌಡ ಉಮರಾಣಿ, ನೇಮಣ್ಣ ಕೊತ್ತಲಗಿ, ಸಿದ್ದಪ್ಪ ಗವಣ್ಣವರ, ಶಶಿಧರ ಶಿಂಗೆ, ಮಲಗೌಡ ಉಮರಾಣಿ, ಜ್ಯೋತೆಪ್ಪ ಉಮರಾಣಿ, ವಿಜಯ ಬಂತಿ, ರಾಜು ಕರ್ಣವಾಡಿ, ರಾಘವೇಂದ್ರ ದೇಶಪಾಂಡೆ, ಭಗವಂತ ಸೂರಣ್ಣವರ, ತಮ್ಮಣ್ಣಿ ಕುರಿ, ಲಾಲಸಾಬ ಜಮಾದಾರ, ಗೋಪಾಲ ಧರ್ಮಟ್ಟಿ, ಎಸ್.ವಾಯ್.ಸನದಿ, ಬಾಬು ಹಳ್ಳೂರ ಮೊದಲಾದ ಭಕ್ತರು ಉಪಸ್ಥಿತರಿದ್ದರು. ಶ್ರೀಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ಮಂಗಲ ಗೀತೆ ಹಾಡಿದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 