100 ಕೋ. ಸಿ.ಎಸ್.ಆರ್ ಅನುದಾನದಲ್ಲಿ ಬಬಲೇಶ್ವರ ಕ್ಷೇತ್ರದಲ್ಲಿ ಶಾಲೆಗಳನ್ನು ಬೆಂಗಳೂರು ಮಾದರಿಯಲ್ಲಿ ಸುಧಾರಣೆ
ವಿಜಯಪುರ 26: ಅಭಿವೃದ್ಧಿಯಿಂದಾಗಿರೈತರಜಮೀನಿಗೆ ಭಾರಿ ಬೆಲೆ ಬಂದಿದ್ದು, ಅನ್ನದಾತರರುತಮ್ಮ ಭೂಮಿಯನ್ನು ಮಾರಾಟ ಮಾಡಬಾರದುಎಂದುಕೈಗಾರಿಕೆ, ಮೂಲಸೌಲಭ್ಯಅಭಿವೃದ್ಧಿ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಕಿವಿಮಾತು ಹೇಳಿದ್ದಾರೆ.
ಶನಿವಾರ ಬಬಲೇಶ್ವರತಾಲೂಕಿನ ಬೋಳಚಿಕ್ಕಲಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವಗ್ರಾ. ಪಂ. ಕಟ್ಟಡ, ಎಸ್.ಡಬ್ಲ್ಯೂ.ಎಂಘಟಕ, ಗೋದಾಮು, ಎನ್.ಆರ್.ಎಲ್.ಎಂಘಟಕ ಮತ್ತು ಪ್ರೌಢಶಾಲೆಕಟ್ಟಡ ಉದ್ಘಾಟಿಸಿ ಆವರು ಮಾತನಾಡಿದರು.
ಅಭಿವೃದ್ಧಿ ಕಾರ್ಯಗಳಿಂದಾಗಿ ಆರ್ಥಿಕವಾಗಿ ಸಮರ್ಥರಾಗಿರುವರೈತರುತಮ್ಮ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ರೂ. 100 ಕೋ. ಸಿ.ಎಸ್.ಆರ್ ಅನುದಾನದಲ್ಲಿ ಬಬಲೇಶ್ವರ ಮತಕ್ಷೇತ್ರದಗ್ರಾಮೀಣ ಭಾಗದ ಶಾಲೆಗಳನ್ನು ಬೆಂಗಳೂರು ಮಾದರಿಯಲ್ಲಿ ಸುಧಾರಣೆ ಮಾಡಲಾಗುವುದು. ಶಾಲಾ ಆವರಣದಲ್ಲಿಕ್ರೀಡಾ ಸಲಕರಣೆ ವ್ಯವಸ್ಥೆ, ಅಂಗನವಾಡಿಗಳಲ್ಲಿ ಪ್ಲೆ ಸ್ಕೂಲ್ ಮಾದರಿ ಸೌಲಭ್ಯಒದಗಿಸಲಾಗುವುದು. ಶಾಲಾ ಕಟ್ಟಡಗಳ ನಿರ್ಮಾಣ, ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆ, ಮೂಲಭೂತ ಸೌಕರ್ಯಒದಗಿಸಲಾಗುತ್ತಿದೆ. ಯುವಕರಿಗೆಓಪನ್‌ಜಿಮ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ, ಮತಕ್ಷೇತ್ರ ವ್ಯಾಪ್ತಿಯಲ್ಲಿರೂ. 319 ಕೋ. ವೆಚ್ಚದಲ್ಲಿ ನೀರಾವರಿ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಬಾಕಿ ಇರುವ 25 ಸಾವಿರಎಕರೆಗೆ ನೀರಾವರಿ ಸೌಲಭ್ಯಒದಗಿಸಲಾಗುವುದುಎಂದುಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿ. ಪಂ. ಸಿಇಓ ರಿಷಿ ಆನಂದ, ಜಿಲ್ಲೆಯಲ್ಲಿ ಜಲ, ವೃಕ್ಷ, ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಸಚಿವ ಎಂ. ಬಿ. ಪಾಟೀಲ ಅವರು ಸವಾಂರ್ಗೀಣಅಭಿವೃದ್ಧಿಗೆಕ್ರಮಕೈಗೊಂಡಿದ್ದಾರೆ. ದೇಶದ ಬಹುಪಾಲು ಜನರು ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಹೀಗಾಗಿ ಗ್ರಾಮಗಳ ಅಭಿವೃದ್ಧಿಯಿಂದದೇಶದಅಭಿವೃದ್ಧಿ ಸಾಧ್ಯ. ಪಂಚಾಯಿತಿ ವ್ಯವಸ್ಥೆಜಾರಿಗೆ ಬಂದಗ್ರಾ.ಪಂ ಜನಪ್ರತಿನಿಧಿಗಳು ತಂತಮ್ಮ ಗ್ರಾಮಗಳ ಅಭಿವೃದ್ಧಿಯಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆದರ್ಶಗ್ರಾಮ ಮಾಡಲುಎಲ್ಲರೂಕೈಜೋಡಿಸಬೇಕುಎಂದು ಹೇಳಿದರು.
ಇದೇ ವೇಳೆ ಸಚಿವರು ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಿದರು.
ಗುರುಬಸಯ್ಯ ಹಿರೇಮಠ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಖಂಡರಾದಈರಗೊಂಡ ಬಿರಾದಾರ, ಉಮೇಶ ಮಲ್ಲಣ್ಣವರ, ಬಾಪುಗೌಡ ಪಾಟೀಲ ಶೇಗುಣಸಿ, ರಾಮಲಿಂಗಕೊಕಟನೂರ, ಎಸ್. ಎಂ. ಸಜ್ಜನ, ಹಣಮಂತ ದಳವಾಯಿ, ಮುತ್ತಪ್ಪ ಶಿವಣ್ಣವರ, ಗ್ರಾ. ಪಂ. ಅಧ್ಯಕ್ಷ ಮಲ್ಲಿಕಾರ್ಜುನಅಂಗಡಿ, ಉಪಾಧ್ಯಕ್ಷೆ ಸಂಗೀತಾ ನರಳಿ, ಜಿ. ಪಂ. ಸಿಇಓ ರಿಷಿ ಆನಂದ, ತಾ. ಪಂ. ಇಓ ಜೆ. ಎಸ್. ಪಠಾಣ, ಗ್ರಾಮೀಣ ವಲಯ ಬಿಇಓ ಪ್ರಮೋದಿನಿ ಬಳೂಲಮಟ್ಟಿ, ನಾನಾ ಇಲಾಖೆ ಅಧಿಕಾರಿಗಳು, ನಾನಾ ಮುಖಂಡರು, ಗ್ರಾಮದ ಹಿರಿಯರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.
ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥನೆ ಮತ್ತು ಸ್ವಾಗತಗೀತೆ ಹಾಡಿದರು. ಪಿಡಿಓರವಿ ವೆಂಕಣ್ಣ ಮಾಸರಡ್ಡಿ ಸ್ವಾಗತಿಸಿದರು. ಶಿಕ್ಷಕ ಶ್ರೀಶೈಲ ಮಠಪತಿ ನಿರೂಪಿಸಿದರು.
ಸಂಜೆಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆಕಾರ್ಖಾನೆ ಬಳಿ ಯರಗಟ್ಟಿ-ಬಬಲೇಶ್ವರರಸ್ತೆಚಿಕ್ಕಗಲಗಲಿಯಿಂದ ಶಿರಬೂರವರೆಗೆ 10ಕಿ.ಮೀ ರಸ್ತೆ ಸುಧಾರಣೆಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದಅವರು, ಒಂದುಕಾಲದಲ್ಲಿದೇಶದಲ್ಲಿಯೇ ಮುಂಚೂಣಿಯಲ್ಲಿದ್ದ ಮತ್ತು ಈ ಭಾಗದ ಅಸ್ಮಿತೆಯಾಗಿರುವ ನಂದಿ ಸಹಕಾರಿ ಸಕ್ಕರೆಕಾರ್ಖಾನೆಯನ್ನುಗತವೈಭವಕ್ಕೆತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಸರಕಾರದಿಂದಕನಿಷ್ಠ ರೂ. 50 ಕೋಟಿಅನುದಾನ ನೀಡುವಂತೆ ಸಿಎಂ ಭೇಟಿ ಮಾಡಿ ಮನವಿ ಮಾಡಲಾಗಿದೆ. ರೈತರು, ಜನಪ್ರತಿನಿಧಿಗಳು ಸೇರಿದಂತೆಎಲ್ಲರೂ ಈ ಕಾರ್ಖಾನೆಯಅಭಿವೃದ್ಧಿಗೆ ಕೈ ಜೋಡಿಸೋಣ. ಈ ಭಾಗದಅಭಿವೃದ್ಧಿಗೆ ಬದ್ಧನಾಗಿದ್ದು, ಶಕ್ತಿಮೀರಿ ಶ್ರಮಿಸುತ್ತೇನೆಎಂದು ಹೇಳಿದರು.
ಸಚಿವರಿಗೆ ಬೆಂಗಳೂರು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿರೈತರು ಎಂ. ಬಿ. ಪಾಟೀಲ ಅವರಿಗೆಗೌರವ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ನಂದಿ ಸಹಕಾರಿ ಸಕ್ಕರೆಕಾರ್ಖಾನೆಅಧ್ಯಕ್ಷಆನಂದಕುಮಾರದೇಸಾಯಿ, ಉಪಾಧ್ಯಕ್ಷ ಅಶೋಕ ಲೆಂಕೆಣ್ಣವರ, ಬಾಲವಿಕಾಸ ಅಕಾಡೆಮಿಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಾಜಿಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ನಿರ್ದೇಶಕರಾದಎಚ್. ಎಸ್. ಕೋರಡ್ಡಿ, ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷಈರಗೊಂಡ ಬಿರಾದಾರ, ಮುತ್ತುದೇಸಾಯಿ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ವಿಭಾಗದಎಕ್ಸಿಕ್ಯೂಟಿವ್‌ಎಂಜಿನಿಯರ್ ವಿಜಯ ಪಾಟೀಲ, ಸಹಾಯಕಎಕ್ಸಿಕ್ಯೂಟಿವ್‌ಎಂಜಿನಿಯರ್ ವಿವೇಕ ಮಠ ಮುಂತಾದವರು ಉಪಸ್ಖಿತರಿದ್ದರು.