ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಅವಳಿನಗರ ಸಜ್ಜು : ದೀಪಾ ಚೋಳನ್

ಲೋಕ ದರ್ಶನ ವರದಿ

ಧಾರವಾಡ 11: ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ದೇಶಾದ್ಯಂತ ಕುತೂಹಲ ಮೂಡಿಸಿದ್ದ 2019ರ ಲೋಕಸಭೆ ಚುನಾವಣೆಯ ಮೂಹೂರ್ತ ಕೊನೆಗೂ ನಿಗದಿಯಗಿದೆ. ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆ ದಿನಾಂಕ ಘೋಷಿಸಿದ್ದು ಮಾರ್ಚ 10ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಭಾರತೀಯ ಚುನಾವಣಾ ಆಯೋಗದ ನಿದರ್ೇಶನ ರೀತ್ಯ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ರಾಜಕೀಯ ವ್ಯಕ್ತಿ, ಪಕ್ಷ, ಲಾಂಛನಗಳ ಸಾರ್ವತ್ರಿಕ ಪ್ರದರ್ಶನ ಸ್ಥಳದಿಂದ ತೆರುವುಗೊಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ ನಿದರ್ೇಶನ ನೀಡಿದ್ದಾರೆ.

 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿ ಜರುಗಿಸಿ, ಮಾತನಾಡಿದರು. ಅವಳಿನಗರದಲ್ಲಿ 23 ಎಪ್ರಿಲ್ ರಂದು ಮತದಾನ ನಡೆಯಲಿದೆ ಪುರುಷರು 858370, ಮಹಿಳೆಯರ 829697 ಮತಗಳಿದ್ದು ಒಟ್ಟು 1688067 ಮತದಾರು ಇದ್ದಾರೆ ಎಂದು ಹೇಳಿದರು. 

     ಲೋಕಸಭಾ ಕ್ಷೇತ್ರಗಳ ಚುನಾವಣಾ ದಿನಾಂಕಗಳ ಪ್ರಕಟಣೆ ಹಿನ್ನಲೆಯಲ್ಲಿ ಈ ಯಾವುದೇ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳ, ಖಾಸಗಿ ಸ್ಥಳ, ಸಕರ್ಾರಿ ಕಚೇರಿಗಳಲ್ಲಿ ರಾಜಕೀಯ ವ್ಯಕ್ತಿ, ಪಕ್ಷ, ಅವುಗಳ ಲಾಂಛನ, ಬ್ಯಾನರ, ಗೋಡೆ ಬರಹ ಇದ್ದಲ್ಲಿ ತಕ್ಷಣವೇ ಇವುಗಳ ತೆರವುಗೊಳಿಸಲು ಕ್ರಮವಹಿಸುವದು. ಮಹಾನಗರ ಪಾಲಿಕೆ ವ್ಯಪ್ತಿಯಲ್ಲಿ ಪಾಲಿಕೆ ಆಯುಕ್ತರು, ಗ್ರಾ.ಪಂ. ಮಟ್ಟದಲ್ಲಿ ಪಿಡಿಓ ಹಾಗೂ ನಗರ ಪ್ರದೇಶಗಳಲ್ಲಿ ಪೌರಾಯುಕ್ತ ಹಾಗೂ ಮುಖ್ಯಾಧಿಕಾರಿಗಳ ಜವಾಬ್ದಾರಿಯಾಗಿದೆ. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯತ ಮತ್ತು ಗ್ರಾಮ ಪಂಚಾಯತ ಮಟ್ಟದಲ್ಲಿ ಈಗಾಗಲೇ ರಚಿಸಲಾಗಿರುವ ತಂಡಗಳು ಭಾರತ ಚುನಾವಣಾ ಆಯೋಗದ ನಿದರ್ೇಶನದಂತೆ ಎಲ್ಲ ಜಾಹೀರಾತು ಪ್ರಚಾರ ಸಾಮಗ್ರಿಗಳನ್ನು ಮುಂದಿನ 24 ಗಂಟೆಯಲ್ಲಿ ತೆರವುಗೊಳಿಸಬೇಕು.

        ಈ ಕುರಿತು ಅವುಗಳ ತೆರವಿಗೆ ಮುತುವಜರ್ಿ ವಹಿಸಿ ಕಾರ್ಯ ಪೂರ್ಣಗೊಳಿಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಸಕರ್ಾರಿ ವಾಯವ್ಯ ಕನರ್ಾಟಕ ಸಾರಿಗೆ ಬಸ್ ಇತರೆ ಪ್ರಚಾರ ವಾಹನಗಳ ಮೇಲಿರುವ ಇಂತಹ ಪ್ರಚಾರ ಸಾಮಗ್ರಿ ತೆರವುಗೊಳಿಸಲೂ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

     ಸರಕಾರಿ ಇಲಾಖೆಗಳು ನಿರ್ವಹಿಸುವ ವೆಬ್ಸೈಟ್, ಪೆಸ್ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಅಳವಡಿಸಿರುವ ಜನಪ್ರತಿನಿಧಿಗಳ ಭಾವಚಿತ್ರ, ಮಾಹಿತಿಯನ್ನು ತಕ್ಷಣ ತೆಗೆಯಲು ಜಿಲ್ಲೆಯಲ್ಲಿರುವ ಇಲಾಖಾ ಮುಖ್ಯಸ್ಥರು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

         ಸಹಾಯಕ ಚುನಾವಣಾ ಅಧಿಕಾರಿಗಳು ತಹಸಿಲ್ದಾರಗಳ ಸಹಯೋಗದಲ್ಲಿ ತಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ವಿವಿಧ ತಂಡಗಳ ಅಧಿಕಾರಿಗಳೊಂದಿಗೆ ಇಂದೇ ಸಭೆ ಜರುಗಿಸಿ, ಮಾದರಿ ನೀತಿ ಸಂಹಿತೆ ಪಾಲನೆ ಬಗ್ಗೆ ಎಚ್ಚರ ವಹಿಸುವಂತೆ ಮತ್ತು ಕರ್ತವ್ಯಕ್ಕೆ ಹಾಜರಾಗಿ ತಕ್ಷಣದಿಂದ ತಮಗೆ ನೀಡಿದ ಜವಾಬ್ದಾರಿಗಳನ್ನು ನಿರ್ವಹಿಸಲು ಕ್ರಮಕೈಗೊಳ್ಳಬೇಕು ಮತ್ತು ಈ ಕುರಿತು ವರದಿಯನ್ನು ನೀಡಬೇಕೆಂದು ಅವರು ಆದೇಶಿಸಿದರು.

         ಸಭೆಯಲ್ಲಿ ಮಾದರಿ ನೀತಿ ಸಂಹಿತೆ ಅನುಷ್ಠಾನದ ನೋಡಲ್ ಅಧಿಕಾರಿ ಆಗಿರುವ ಜಿ.ಪಂ. ಸಿ.ಇ.ಓ ಡಾ.ಬಿ.ಸಿ.ಸತೀಶ, ಅಪರಜಿಲ್ಲಾಧಿಕಾರಿ ಸುರೇಶ ಇಚ್ನಾಳ, ಹು- ಧಾ ಪೋಲಿಸ್ ಆಯುಕ್ತ ಎಂ. ಎನ್ ನಾಗರಾಜ ಸೇರಿದಂತೆ ಎಲ್ಲಾ ಸಹಾಯಕ ಚುನಾವಣಾ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಉಪಸ್ಥಿತರಿದ್ದರು.