ಕೊಪ್ಪಳ : ಭಾರತದ ಪ್ರಥಮ ನಾಗರಿಕತೆ ಸಿಂಧೂ ನಾಗರಿಕತೆ: ಎಂದು ಸಂಶೋಧಕ ಗಂಗಾವತಿಯ ಶರಣಬಸಪ್ಪ

ಲೋಕದರ್ಶನ ವರದಿ

ಕೊಪ್ಪಳ 19: ಭಾರತದ ಪ್ರಥಮ ನಾಗರಿಕತೆ ಸಿಂಧೂ ನಾಗರಿಕತೆಯಾಗಿದೆ,  ಐದು ಸಾವಿರ ವರ್ಷದ ಮುಂಚೆಗೆ ನಾಗರಿಕತೆ ಆರಂಭವಾಗಿದೆ. ಎಂದು ಸಂಶೋಧಕ ಗಂಗಾವತಿಯ ಶರಣಬಸಪ್ಪ ಕೋಲ್ಕಾರ ಹೇಳಿದರು.

ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಭವನದಲ್ಲಿ ಭಾನುವಾರ ಕುಕನೂರಿನ ತಾಯಿ ಪ್ರಕಾಶನದ 25ನೇ ವರ್ಷ ಪೂರೈಸಿದ ನಿಮಿತ್ತ ನಡೆದ ರಜತಮಹೋತ್ಸವ, ಪುಸ್ತಕ ಬಿಡುಗಡೆ ಹಾಗೂ ಕಾವ್ಯ ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಅವರು ಅಂದು ನಾಗರು, ಕೊಂಡರು ವಾಸವಾಗಿದ್ದರು ಎಂದ ಅವರು ಕುಕನೂರಿನ ಶಾಸನಗಳನ್ನು ವಿವರಿಸಿರುವುದನ್ನು ನೋಡಿದರೆ ಮಹಾಮಾಹೆಯ ಭಕ್ತರಾಗಿಬಿಡುತ್ತೇವೆ. ಅಷ್ಟೊಂದು ಉತ್ತಮವಾಗಿ ಶಾಸನದಲ್ಲಿ ಹೇಳಲಾಗಿದೆ. ಇದರಂತೆಯೇ ಮತ್ತೊಬ್ಬ ತಾಯಿ 'ತಾಯಿ ಪ್ರಕಾಶನ' ವಾಗಿದ್ದು, ಕುಕನೂರಿನ ಇತಿಹಾಸ ಪುಟದಲ್ಲಿ ಇದು ಕೂಡಾ ಸೇರಿದೆ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ಮೇತ್ರಿ ಮಾತನಾಡಿ, ಏಕ ಕಾಲದಲ್ಲಿ ಮೂರು ವಿಭಿನ್ನ ಪುಸ್ತಕಗಳು ಬಿಡುಗಡೆಗೊಳಿಸಿರುವುದು ವಿಶೇಷ. ಮಧ್ಯ ಮತ್ತು ದಕ್ಷಿಣ ಕನರ್ಾಟಕದಲ್ಲಿ ಹಿಂದಿ ಭಾಷೆಯ ಬಳಕೆ ಕಡಿಮೆ. ಅದೇ ಉತ್ತರ ಕರ್ನಾಟಕ್ ಹಿಂದಿ ಬಳಕೆ ಹೆಚ್ಚಾಗಿದೆ. ಈ ಭಾಗದಲ್ಲಿ ನಿಜಾಮರ ಆಡಳಿತ ಇದ್ದುದರಿಂದ ಹಿಂದಿ ಭಾಷೆಯ ಹೆಚ್ಚು ಪ್ರಚಲಿತದಲ್ಲಿವೆ ಎಂದರು.

ಸಿಂಧೂ ನಾಗರಿಕತೆ ಲಿಪಿಗೆ ಸ್ಪಷ್ಟತೆ ಇಲ್ಲ. ಅದು ನಮ್ಮ ಪ್ರಾಚೀನ ಲಿಪಿ. ಛತ್ತೀಸ್ಗಡದಲ್ಲಿ ದಕ್ಷಿಣ ಭಾರತದಲ್ಲಿ ಗೋಟುಲ್ ನಲ್ಲಿ ಪ್ರತಿದಿನ ಶಿಕ್ಷಣ, ನೃತ್ಯ, ಸಂಗೀತ, ವಾದ್ಯ, ಅನುಭವ ಹಂಚಿಕೆಯಂತಹ ಕಾರ್ಯಕ್ರಮಗಳು ನಡೆಯುತ್ತಿದ್ದವು. ಹಾಗಾಗಿ ಅಂದು ಸಂಸ್ಕೃತಿಕ, ಮನರಂಜನೆಯ ಇದು ಪ್ರಮುಖ ಕೇಂದ್ರವಾಗಿತ್ತು ಎಂದರು.

ಸಾಹಿತಿ ಡಾ. ರಾಜಶೇಖರ ಮಠಪತಿ ಭಾರತದ ಮೂಲ ನಿವಾಸಿಗಳು ಎಂಬ ಕೃತಿಯನ್ನು ಬಿಡುಗಡೆಗೊಳಸಿದರು. ಬಳಿಕ ಇವರ ನೇತೃತ್ವದಲ್ಲಿ ಡಾ.ಕೆ.ಬಿ.ಬ್ಯಾಳಿ ಅವರ 'ಮಧು ಮಂದಿರ' ಕೃತಿಯ ಕಾವ್ಯ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಶೋಧಕಿ ಹನುನಾಕ್ಷಿ ಗೋಗಿ ವಹಿಸಿದ್ದರು. ಸಾಹಿತಿಗಳಾದ ಮುನಿಯಪ್ಪ ಹುಬ್ಬಳ್ಳಿ, ಅಲ್ಲಮ್ಮಪ್ರಭು ಬೆಟ್ಟದೂರು, ವೀರಣ್ಣ ನಿಂಗೋಜಿ, ಜಾಜಿ ದೇವೆಂದ್ರಪ್ಪ, ವಕೀಲ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಸ್.ಹನಸಿ ಇದ್ದರು. ಸಾಹಿತಿ ಮಹಾಂತೇಶ ಮಲ್ಲನಗೌಡರ್ ಸ್ವಾಗತಿಸಿದರು. ಸಾಹಿತಿ ಡಾ.ಕೆ.ಬಿ.ಬ್ಯಾಳಿ ಪ್ರಾಸ್ತಾವಿಕ ಮಾತನಾಡಿದರು. ಸಾವಿತ್ರಿ ಮುಜುಂದಾರ್ ನಿರೂಪಿಸಿದರು. ಪ್ರಾಧ್ಯಪಕಿ ಸ್ಮಿತಾ ಅಂಗಡಿ ವಂದಿಸಿದರು.