'ಮತದಾರರು ಮೋದಿಯನ್ನು ಗೆಲ್ಲಿಸಿದ್ದಾರೆ, ನಿದ್ರೆರಾಮಯ್ಯರನ್ನು ಮನೆಗೆ ಕಳುಹಿಸಿದ್ದಾರೆ'

 ಬಾಗಲಕೋಟೆ 29: ಮುಗ್ಧ ಬಾದಾಮಿ ಜನರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರ ಹಣೆಬರಹ ಗೊತ್ತಿಲ್ಲದೆ ಗೆಲ್ಲಿಸಿದ್ದಾರೆ. ರಾಜ್ಯದಲ್ಲಿ 5 ವರ್ಷ ನೀವು ಏನೂ ಕೆಲಸ  ಮಾಡಿಲ್ಲ, ನಿದ್ದೆ ಮಾಡಿ ಎಂದು ಮನೆಗೆ ಕಳುಹಿಸಿದ್ದಾರೆ. ಪ್ರಧಾನಿ ಮೋದಿ ಅವರು ಕೆಲಸಗಾರ  ಎಂದು ಮತ ನೀಡಿದ್ದಾರೆ  ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು  ನೀಡಿದ್ದಾರೆ. 

   ಶನಿವಾರ ನಗರದಲ್ಲಿ  ಸುದ್ದಿಗಾರ ಜೊತೆ ಮಾತನಾಡಿದ ಅವರು ,  ಸಿದ್ದರಾಮಯ್ಯ ಸರಿಯಾಗಿಯೇ ಹೇಳಿದ್ದಾರೆ.ಮತದಾರರು ಕೆಲಸಗಾರ ಮೋದಿಯವರನ್ನು  ಗೆಲ್ಲಿಸಿದ್ದಾರೆ. 5 ವರ್ಷ ನಿದ್ದೆರಾಮಯ್ಯ ಆಗಿದ್ದರು ಎಂದೇ ನಿದ್ರೆ ಮಾಡುವ  ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಿದ್ದಾರೆ. ಅಧಿಕಾರ ಇದ್ದಾಗ ಸಿದ್ದರಾಮಯ್ಯ  ಏನು  ಕೆಲಸ ಮಾಡಿದ್ದಾರೆ?  ಎಂದು ಪ್ರಶ್ನಿಸಿದ ಕೆ.ಎಸ್.ಈಶ್ವರಪ್ಪ, ನಾನು ಹಾಲು ಕೊಟ್ಟೆ  ,ಮೊಟ್ಟೆ ಕೊಟ್ಟೆ, ಶೂ ಕೊಟ್ಟೆ ಎನ್ನುತ್ತಾರೆ.  

   ಅದನ್ನೆಲ್ಲ ಸಿದ್ದರಾಮಯ್ಯ  ತಮ್ಮ ಜೇಬಿನ  ಹಣದಿಂದ ಕೊಟ್ಟಿದ್ದರಾ? ಅನ್ನಭಾಗ್ಯ ಯೋಜನೆಗೆ ಮೋದಿ ಸರಕಾರ  ಪ್ರತಿ ಕೆಜಿ ಅಕ್ಕಿಗೆ 28  ರೂ. ಕೊಡುತ್ತಾರೆ. ರಾಜ್ಯ ಸರಕಾರ  4 ರೂ ಹಣ ಖಚರ್ು ಮಾಡಿ ಕೊಟ್ಟು ತಾವು  ಕೊಟ್ಟಿದ್ದೇವೆ ಎನ್ನುತ್ತಾರೆ. ಇದನ್ನು ಸಿದ್ದರಾಮಯ್ಯ ರಾಜ್ಯದ ಜನಕ್ಕೆ ಸ್ಪಷ್ಟಪಡಿಸಲಿ  ಎಂದು ಅವರು ಹೇಳಿದರು.ಜನ ಕೈಯಲ್ಲಿ ಶೂ ಹಿಡಿದಿದ್ದಾರೆ.ಆದರೆ ಹೊಡೆಯುತ್ತಾರೆ ಎಂದು ಹೇಳಿಲ್ಲ ಎಂದು ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿದ್ದಾರೆ. 

    ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಂದರೆ ಸಿದ್ದರಾಮಯ್ಯ  ಅವರ ಹೇಳಿಕೆಯನ್ನೇ ಮುಂದಿಟ್ಟು ಕೊಂಡು ಪ್ರಚಾರ ಮಾಡುತ್ತೇವೆ. ಸಿದ್ದರಾಮಯ್ಯ ಅವರೇ  ಹೇಳಿದಂತೆ ನಿದ್ರೆ ಮಾಡುವವರನ್ನು ಜನರು ಗೆಲ್ಲಿಸಬಾರದು. ಹಾಗಂತ ನಾನು ಮಧ್ಯಂತರ  ಚುನಾವಣೆ ನಡೆಯುವುದು ಬೇಡ ಎಂಬುದೇ ನನ್ನ ಅಭಿಪ್ರಾಯ. ಮೈತ್ರಿ ಪಕ್ಷಗಳ ನಾಯಕರು  ಜಗಳವಾಡಿಕೊಂಡು ಜೈಲಿಗೆ ಹೋದರೆ ರಾಜ್ಯವನ್ನು ಮುನ್ನಡೆಸುವವರು ಬೇಕಲ್ಲ.ಹೀಗಾಗಿ ನಾವು ಕೂಡ ಕೆಲಸ  ಮಾಡುವವರಿಗೆ ಮತ ನೀಡಿ  ನಿದ್ರೆ ಮಾಡುವವರಿಗೆ ಮತ ಹಾಕಬೇಡಿ ಎನ್ನುತ್ತೇವೆ. ಈ  ವಿಷಯದಲ್ಲಿ ಸಿದ್ದರಾಮಯ್ಯನ  ಮಾತಿಗೆ ನಮ್ಮ ಸಹಮತವಿದೆ ಎಂದು ಲೇವಡಿ ಮಾಡಿದರು. 

    ಬಿಜೆಪಿ ಈಸ್ಟ್  ಇಂಡಿಯಾ ಕಂಪನಿ ಇದ್ದಂತೆ ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನಿಗೆ ತಿರುಗೇಟು  ನೀಡಿದ ಈಶ್ವರಪ್ಪ , ದೇಶಕ್ಕೆ ಬ್ರಿಟಿಷರನ್ನು ಕರೆತಂದವರು ಯಾರು? ಅವರ ಜೊತೆ ಸಂಬಂಧ ಇಟ್ಟುಕೊಂಡಿದ್ದರು ಯಾರು? ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯಾನಂತರ ಬ್ರಿಟಿಷರೊಂದಿಗೆ  ಯಾರು ಸಂಬಂಧ ಇಟ್ಟುಕೊಂಡಿದ್ದರು ? ಎಂಬುದೆಲ್ಲ ದೇಶದ ಜನರಿಗೆ ಗೊತ್ತಿದೆ. ಸಿದ್ದರಾಮಯ್ಯ  ಏನೂ ಗೊತ್ತಿಲ್ಲದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಬ್ರಿಟಿಷರ ಸಂತತಿ ಇನ್ನೂ ನಮ್ಮ  ದೇಶದಲ್ಲಿದೆ. ಯಾರಿದ್ದಾರೆ ಎನ್ನುವುದು ನಿಮಗೂ ಗೊತ್ತಿದೆ. ಅವರ ಸೆರಗು ಹಿಡಿದುಕೊಂಡು  ಓಡಾಡುತ್ತಿರುವ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ.  ದೇಶದ ಜನ ಬ್ರಿಟಿಷರನ್ನು ಮರೆತಿದ್ದರೂ ಸಿದ್ದರಾಮಯ್ಯ ಮರೆತಿಲ್ಲ ಎಂದು ವಾಗ್ದಾಳಿ  ನಡೆಸಿದ್ದಾರೆ.

   ಸಿದ್ದರಾಮಯ್ಯ ಎಷ್ಟೇ ಬಡಿದುಕೊಂಡರೂ ರಾಜ್ಯದಲ್ಲಿ ಕಾಂಗ್ರೆಸ್  ಅಧಿಕಾರಕ್ಕೆ ಬರುವುದಿಲ್ಲ. ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗುವುದಕ್ಕೆ ಯೋಗ್ಯರಲ್ಲ  ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ ಅವರೇ ಹೇಳಿದ್ದರು. ಸಿದ್ದರಾಮಯ್ಯ ಮತ್ತು  ಕುಮಾರಸ್ವಾಮಿಯವರು ಭೇಟಿಯಾಗೋದು ಅಪರೂಪ. ಇನ್ನು ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಯಾವಾಗ  ಚಚರ್ಿಸುತ್ತಾರೆ ? ಕನಿಷ್ಠ ಮೊದಲು ನೀವಿಬ್ಬರೂ ಭೇಟಿಯಾಗಿ ಚಚರ್ಿಸಿರಿ ಎಂದು ಈಶ್ವರಪ್ಪ  ಸಲಹೆ ನೀಡಿದ್ದಾರೆ.