‘ನಿಂತುಹೋದ ಯೋಜನೆಗಳನ್ನು ಪುನಃ ಆರಂಭಿಸಿ ಕೀರ್ತಿ ಕಾಂಗ್ರೆಸ್ ಸರಕಾರಕ್ಕಿದೆ’

‘ನಿಂತುಹೋದ ಯೋಜನೆಗಳನ್ನು ಪುನಃ ಆರಂಭಿಸಿ ಕೀರ್ತಿ ಕಾಂಗ್ರೆಸ್ ಸರಕಾರಕ್ಕಿದೆ’ 'The credit goes to the Congress government for resuming stalled projects'

          ಸಿಂದಗಿ 04: ರೈತರಿಗೆ ನೀಡುವ ಎಲ್ಲ ಯೋಜನೆಗಳು ಹಿಂದಿನ ಬಿಜೆಪಿ ಸರಕಾರದಿಂದ ನಿಂತು ಹೋಗಿದ್ದವು ಅವುಗಳನ್ನು ಪುನಃ ಆರಂಭಿಸಿದ ಕೀರ್ತಿ ಕಾಂಗ್ರೆಸ್ ಸರಕಾರಕ್ಕಿದೆ. ಕೃಷಿಯ ಜೊತೆಗೆ ಹೈನುಗಾರಿಕೆ ಮಾಡಿದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದಲ್ಲದೆ ಭೂಮಿಯ ಫಲವತ್ತತೆ ಹೆಚ್ಚಿಸಲು ಸಾಧ್ಯ ಕಾರಣ ಸರಕಾರ ಸಾಕಷ್ಟು ಯೋಜನೆಗಳು ನೀಡುತ್ತಿದೆ ಅದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಅಶೋಕ ಮನಗೂಳಿ ಕರೆ ನೀಡಿದರು. 

      ನಗರದ ಕೃಷಿ ಇಲಾಖಾ ಉಪ ನಿರ್ದೇಶಕರ ಕಛೇರಿಯ ಆವರಣದಲ್ಲಿ ಜಿಪಂ, ವಿಜಯಪುರ, ಕೃಷಿ ಇಲಾಖೆ ಸಿಂದಗಿ ಇವುಗಳ ಸಹಯೋಗದಲ್ಲಿ 2025-26ನೇ ಸಾಲಿನ ಜಲಾನಯನ ಅಭಿವೃದ್ಧಿ ಇಲಾಖೆಯ ಆರ್‌ಎಡಿ,ಆರ್‌.ಕೆವ್ಹಿವೈ- ರಫ್‌ಟರ್ ಯೋಜನೆಯಡಿ ಹೈನುಗಾರಿಕೆ ಹಾಗೂ ಸಮಗ್ರ ಕೃಷಿ ಉತ್ತೇಜಿಸಲು ಹಸುಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಸಾಯನಿಕ ಗೊಬ್ಬರಗಳನ್ನು ಹಾಕಿ ಈ ಕ್ಷೇತ್ರದಲ್ಲಿ 26ವರೆ ಸಾವಿರ ಹೆಕ್ಟೆರ ಕಬ್ಬು ಬೆಳೆಯಲಾಗುತ್ತಿದೆ. ಬಹು ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು ಅಲ್ಲದೆ ಸರಕಾರ ಹಸು ಖರೀದಿಗೆ ರೂ 30 ಸಾವಿರ ನೀಡಲಾಗುತ್ತಿದೆ ಹೀಗೆ 33 ಹಸುಗಳ ಖರೀದಿಗೆ ಹಣ ಮಂಜೂರು ನೀಡಲಾಗಿದೆ ಮತ್ತು ಈ ಕ್ಷೇತ್ರದಲ್ಲಿ 64 ಎಂಎಂ ಮಳೆಯಾಗಿ ಎಲ್ಲ ಬೆಳೆಗಳು ಹಾನಿಯಾಗಿದ್ದು ಸರಕಾರದಿಂದ ಈ ಜಿಲ್ಲೆಗೆ ರೂ 5 ಕೋಟಿ 70 ಲಕ್ಷ ಬಿಡುಗಡೆಯಾದರೆ ಈ ಕ್ಷೇತ್ರಕ್ಕೆ ರೂ.101 ಕೋಟಿ ಬಿಡುಗಡೆಯಾಗಿದೆ ಎಂದು ವಿವರಿಸಿದರು.    

      ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ,  ಕೃಷಿ ಎಂದರೆ ಯಾಂತ್ರಿಕತೆಯಲ್ಲ ಅದಕ್ಕೆ ಪೂರಕವಾಗಿ ವ್ಯವಸಾಯಕ್ಕೆ ಸಮಗ್ರ ಕೃಷಿ ಸಾವಯವ ಆಕಳುಗಳಿಂದ ಹಾಲು ಉತ್ಪಾಧನೆ ಮತ್ತು ಅದರ ಸೆಗಣಿಯಿಂದ ಸಾವಯವ ಕೃಷಿಗೆ ಅನೂಕೂಲವಾಗುತ್ತದೆ ಕಾರಣ ಖರೀದಿಸಿದ 33 ಹಸುಗಳಿಂದ ಆರ್ಥಿಕ ಸಬಲತೆ ಹೆಚ್ಚಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.  

      ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷ ಸುರೇಶ ಪೂಜಾರಿ, ಕೃಷಿಕ ಸಮಾಜದ ಅದ್ಯಕ್ಷ ಶಿವಪ್ಪಗೌಡ ಬಿರಾದಾರ, ಕೆಡಿಪಿ ಸದಸ್ಯ ಗಂಗಾಧರ ಚಿಂಚೋಳಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿದರು. 

        ನಗರ ಯೋಜನಾ ಪ್ರಾದಿಕಾರದ ಅಧ್ಯಕ್ಷ ಬಸವರಾಜ ಕಾಂಬಳೆ, ಕೆಡಿಪಿ ಸದಸ್ಯ ಸುರೇಶ ಬುಳ್ಳಾ, ಉಪ ನಿರ್ದೇಶಕ ಚಂದ್ರಕಾಂತ ಪವಾರ, ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ನಾಯ್ಕೋಡಿ, ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಕೆಡಿಪಿ ಸದಸ್ಯೆ ಮಹಾನಂದಾ ಬಮ್ಮಣ್ಣಿ, ಬಸಯ್ಯ ಹಿರೇಮಠ ವೇದಿಕೆ ಮೇಲಿದ್ದರು.  ಸಹಾಯಕ ನಿರ್ದೆಶಕ ಪ್ರಸನ್ ಸಾಣಿ ಸ್ವಾಗತಿಸಿದರು. ಕೃಷಿ ಅಧಿಕಾರಿ ಶಿವಾನಂದ ಹೂನಳ್ಳಿ ನಿರೂಪಿಸಿದರು. ಅನೀಲ ದಶವಂತ ವಂದಿಸಿದರು.