‘ಭಾರತೀಯ ಸಂವಿಧಾನ ರೂಪಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪಾತ್ರ ಅಪಾರ’
'Sardar Vallabhbhai Patel's role in shaping the Indian Constitution was immense'
ಗದಗ 06: ನಗರದ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್. ಎಸ್. ಎಸ್. ಘಟಕದ ವತಿಯಿಂದ ದಿ. 06 ಗುರುವಾರ ರಂದು (ಸರ್ದಾರ್ ಅ150) ಏಕತೇಯ ದೃಷ್ಠೀಕೋನ ದಲ್ಲಿ “ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರೂಪಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪಾತ್ರ ಅಪಾರ” ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇರ ವ್ಯಕ್ತಿತ್ವ, ಗಟ್ಟಿತನ, ಏಕತೇಯ ನಿಲುವು, ಸ್ವಾತಂತ್ಯ್ರಾನಂತರ ಭಾರತದ ಒಗ್ಗೂಡುವಿಕೆಗೆ ಕಾರಣವಾದ ಅವರ ಮಾತಿನ ಚಾಣಾಕ್ಷತೆ ಮತ್ತು ಮನವೋಲೈಕೆಯ ತಂತ್ರಗಳು ಹಾಗೂ ಪ್ರಸ್ತುತ ಭಾರತದ ಪ್ರಜೆಗಳ ಪ್ರಾತ್ರ, ಜನರ ಆಚಾರ ಹಿ ವಿಚಾರ, ಸಂಸ್ಕೃತಿ, ಪದ್ಧತಿಗಳು ಇತ್ಯಾದಿಗಳ ಬಗ್ಗೆ ತಮ್ಮ ಮಾತುಗಳಲ್ಲಿ ಎನ್. ಎಸ್. ಎಸ್. ಸ್ವಯಂಸೇವಕರಿಗೆ ಉಪನ್ಯಾಸಕರಾಗಿ ಆಗಮಿಸಿದ್ದ ರವಿ ಹುಡೇದ್ ಅವರು ತಿಳಿಸಿದರು.
ಈ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ. ಕೆ. ಮಠ ಅವರು ಮಾತನಾಡಿ, ಭಾರತಿಯ ಶಿಕ್ಷಣ, ವಿದ್ಯಾರ್ಥಿಗಳ ನೆಡೆವಳಿಕೆ, ಬೌದ್ಧಿಕ ಸಾರ್ಮಥ್ಯ ಮತ್ತು ಹಲವಾರು ವಿಷಯಗಳ ಕುರಿತು ಮಾತನಾಡಿದರು.
ಮಹಾವಿದ್ಯಾಲಯದ ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ವಾಗೀಶ ಗು. ರೇಶ್ಮಿ, ಎನ್. ಎಸ್. ಎಸ್. ಘಟಕದ ಕಾರ್ಯನಿರ್ವಾಹಕರಾದ ಕುಮಾರಿ. ನೀಲಮ್ಮ ಸೀತಾರಳ್ಳಿ, ಎನ್. ಎಸ್. ಎಸ್. ಘಟಕದ ಎಲ್ಲ ತಂಡಗಳ ನಾಯಕ ಮತ್ತು ನಾಯಕಿಯರು ಹಾಗೂ ಎನ್. ಎಸ್. ಎಸ್. ಘಟಕದ ಎಲ್ಲ ಸ್ವಯಂ ಸೇವಕ ಮತ್ತು ಸೇವಕಿಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 