‘ಪ್ರತಿಯೊಬ್ಬರು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಿ’
'Everyone should plant saplings and join hands in protecting the environment'
‘ಪ್ರತಿಯೊಬ್ಬರು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಿ’
ರಾಯಬಾಗ 29: ಪ್ರತಿಯೊಬ್ಬರು ಒಂದೊಂದು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಲು ಕೈಜೋಡಿಸಬೇಕೆಂದು ಸಿ.ಬಿ.ಕೆ.ಎಸ್.ಎಸ್.ಕೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು. ಮಂಗಳವಾರ ತಾಲೂಕಿನ ದಿಗ್ಗೆವಾಡಿ ಗ್ರಾಮದಲ್ಲಿ ಡಾ.ಪ್ರಭಾಕರ ಕೋರೆ ಅವರ 78ನೇ ಹುಟ್ಟುಹಬ್ಬದ ಪ್ರಯುಕ್ತ ಡಾ.ಪ್ರಭಾಕರ ಕೋರೆ ಕೋ.ಆ.ಸೊಸಾಯಿಟಿ ಆವರಣದಲ್ಲಿ ನವೀಕೃತ ಗಾರ್ಡನ್ ಉದ್ಘಾಟಿಸಿ, ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡಾ.ಪ್ರಭಾಕರ ಕೋರೆಯವರ ಹುಟ್ಟುಹಬ್ಬದ ಅಂಗವಾಗಿ ಅಂಕಲಿ ಗ್ರಾಮದಲ್ಲಿ ಈ ಭಾಗದ ಜನರಿಗಾಗಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರಿ್ಡಸಿದ್ದು, ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ಅಷ್ಟೇ ಅಲ್ಲದೇ ರಾಷ್ಟ್ರ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗಳು ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಬೇಕೆಂದು ಕರೆ ನೀಡಿದರು. ಡಾ.ಪ್ರಭಾಕರ ಕೋರೆ ಸೊಸಾಯಿಟಿ ದಿಗ್ಗೆವಾಡಿ ಶಾಖೆಯ ಸದಸ್ಯ ಅಪ್ಪಾಸಾಹೇಬ ಮೈಶಾಳೆ ಮಾತನಾಡಿ, ಸಾಮಾಜಿಕ ಕಳಕಳಿ ಹೊಂದಿರುವ ಡಾ.ಪ್ರಭಾಕರ ಕೋರೆ ಅವರು ಜನರ ಸೇವೆಗಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ ಹೊರತು ತಮಗಾಗಿ ಎಂದೂ ಕೂಡ ರಾಜಕೀಯ ಮಾಡಲಿಲ್ಲ. ಅವರು ಶಿಕ್ಷಣ, ಆರೋಗ್ಯ ಮತ್ತು ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ ಎಂದರು. ಸಿ.ಬಿ.ಕೆ.ಎಸ್.ಎಸ್.ಕೆ ಉಪಾಧ್ಯಕ್ಷ ತಾತ್ಯಾಸಾಬ ಕಾಟೆ, ನಿರ್ದೇಶಕ ಮಲ್ಲಪ್ಪ ಮೈಶಾಳೆ, ಡಾ.ಪ್ರಭಾಕರ ಕೋರೆ ಕೋ.ಆ.ಸೊಸಾಯಿಟಿ ದಿಗ್ಗೆವಾಡಿ ಶಾಖೆಯ ಅಧ್ಯಕ್ಷ ಬಸಪ್ಪ ಚೌಗಲಾ, ಉಪಾಧ್ಯಕ್ಷ ಚಿದಾನಂದ ಸಲಗರೆ, ಸದಸ್ಯರಾದ ಅಪ್ಪಾಸಾಬ ಮೈಶಾಳೆ, ಗಂಗಾಧರ ಮೈಶಾಳೆ, ಮನೋಹರ ಮಿರ್ಜೆ, ಪ್ರಕಾಶ ಮಿರ್ಜೆ, ಕುಮಾರ ಕುಂಬಾರ, ಭೈರಾ್ಪ ಚೌಗಲಾ, ಶಾಖಾಧಿಕಾರಿ ಎಮ್.ಬಿ.ಅವಟೆ, ಗ್ರಾ.ಪಂ.ಅಧ್ಯಕ್ಷ ರವೀಂದ್ರ ಚೌಗಲಾ, ಡಿ.ಎಲ್.ಮಿರ್ಜೆ, ಸಂಜು ಮೈಶಾಳೆ, ಅಶೋಕ ಚೌಗಲಾ, ಲಿಂಬಾಜಿ ನಾಗರಾಳೆ, ರಾಜು ಹರಗನ್ನವರ, ಬಸು ಅವ್ವನ್ನವರ, ಬಸವರಾಜ ಡೋಣವಾಡೆ ಹಾಗೂ ಸೊಸಾಯಿಟಿ ಸಿಬ್ಬಂದಿ ಸೇರಿ ಅನೇಕರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 