‘ಕಟ್ಟಡ ಕಾರ್ಮಿಕರು ಗುರುತಿನ ಕಾರ್ಡ್‌ಗಳ ಸದುಪಯೋಗ ಪಡಿಸಿಕೊಳ್ಳಿ’
'Construction workers, make good use of identity cards'
ಸಿಂದಗಿ 24; ಪ್ರತಿಯೊಬ್ಬ ಕಟ್ಟಡ ಕಾರ್ಮಿಕರು ತಮ್ಮ ಗುರುತಿನ ಕಾರ್ಡ್‌ಗಳನ್ನು ಈಗಾಗಲೇ ಮಾಡಿಸಿಕೊಂಡಿರುವುದರಿಂದ, ಅದರ ಸದುಪಯೋಗವನ್ನು ಸಮರ್ಕವಾಗಿ ಪಡೆದುಕೊಳ್ಳಬೇಕು. ಗುರುತಿನ ಕಾರ್ಡ್‌ಗಳು ವಿವಿಧ ಸರ್ಕಾರಿ ಸೌಲಭ್ಯಗಳು, ಯೋಜನೆಗಳು ಹಾಗೂ ಭದ್ರತಾ ಉದ್ದೇಶಗಳಿಗೆ ಅತ್ಯಂತ ಅಗತ್ಯವಾಗಿರುವುದರಿಂದ, ಅವುಗಳನ್ನು ಸದಾ ಜಾಗ್ರತೆಯಿಂದ ಇಟ್ಟುಕೊಳ್ಳಬೇಕೆಂದು ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ ಸಂತೋಷ ಸಲಹೆ ನೀಡಿದರು.
ತಾಲ್ಲೂಕಿನ ಕಟ್ಟಡ ಕಾರ್ಮಿಕರಿಗಾಗಿ ಆಯೋಜಿಸಲಾದ ಜಾಗೃತಿ ಸಭೆ ಸಭೆಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ, ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿರುವುದನ್ನು ಪರೀಶೀಲಿಸಿಕೊಳ್ಳಬೇಕು. ಜೊತೆಗೆ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡು ಜವಾಬ್ದಾರಿಯುತವಾಗಿ ಮತದಾನ ಮಾಡುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು. ಮತದಾನವು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದ್ದು, ಅದನ್ನು ಎಲ್ಲರೂ ತಪ್ಪದೇ ಬಳಸಿಕೊಳ್ಳಬೇಕು ಎಂದರು.
ಸಂಗಮ ಸಂಸ್ಥೆಯ ಮಕ್ಕಳ ಸಂಯೋಜಕ ಮಹೇಶ ಚವ್ಹಾಣ ರವರು ಪ್ರಜಾಪ್ರಭುತ್ವದ ಕುರಿತು ಮಾತನಾಡಿ, ದೇಶದ ಆಡಳಿತದ ಪ್ರಮುಖ ಆಧಾರವಾಗಿದ್ದು, ಜನರೇ ಆಡಳಿತದ ಕೇಂದ್ರಬಿಂದುವಾಗಿರುತ್ತಾರೆ. ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು ಹಾಗೂ ಕರ್ತವ್ಯ ಇರುವುದರಿಂದ ಮತದಾನವು ಪ್ರಜಾಪ್ರಭುತ್ವದ ಅತಿಮುಖ್ಯ ಅಸ್ತ್ರವಾಗಿದೆ. ಮತದಾನದ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಉತ್ತಮ ಆಡಳಿತಕ್ಕೆ ಕಾರಣರಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಜಾಗೃತ ನಾಗರಿಕರಾಗಿ ತಮ್ಮ ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕೆಂದು ಹೇಳಿದರು.
ಆರ್ಯಭಟ್ಟ ತರಬೇತಿ ಕೇಂದ್ರದ ಉಪನ್ಯಾಸಕ ಪರುಶುರಾಮ ಬಿರಾದಾರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನದ ಪಾತ್ರ ಮತ್ತು ಪ್ರತಿಯೊಬ್ಬ ನಾಗರಿಕನ ಮಟ್ಟದ ಹಕ್ಕು ಕುರಿತು ವಿವರಿಸಿದರು ಮತ್ತು ಎಲ್ಲರಿಗೂ ತಮ್ಮ ಹಕ್ಕನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳುವಂತೆ ಮನವಿ ಮಾಡಿದರು. ಜೊತೆಗೆ, ಮಕ್ಕಳ ಶಿಕ್ಷಣವು ಭವಿಷ್ಯದ ಬಲಿಷ್ಠ ಸಮಾಜ ನಿರ್ಮಾಣಕ್ಕೆ ಕಾರಣವಾಗುವುದರಿಂದ, ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಗಮನಹರಿಸಲು ಸೂಚನೆ ನೀಡಲಾಯಿತು.
ಸಂಗಮ ಸಂಸ್ಥೆಯ ಕಾರ್ಯಕರ್ತ ಬಸವರಾಜ ಬಿಸನಾಳ ಇವರು ಸಾವಯವ ಕೃಷಿ ಅಥವಾ ಆರ್ಗ್ಯಾನಿಕ್ ಕೃಷಿ, ರಾಸಾಯನಿಕ ಸಾರುಗಳ ಬದಲು ಸಸ್ಯಮೂಲಕ ರಸಾಯನಿಕಗಳು, ಸೌಂದರ್ಯಮೂಲಕ, ಹಾಗೂ ನೈಸರ್ಗಿಕ ಪೀಟಿಕೆಗಳು ಬಳಸಿ ಬೆಳೆಸುವ ವಿಧಾನವಾಗಿದೆ. ಇದರಿಂದ ಕೇವಲ ಬಾಳಿಕೆಯ ಉತ್ಪಾದನೆ ಮಾತ್ರವಲ್ಲ, ಭೂಮಿ ಮತ್ತು ಪರಿಸರದ ಆರೋಗ್ಯವೂ ಕಾಪಾಡಬಹುದು ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸಂಗಮ ಸಂಸ್ಥೆಯ ಸಹನಿರ್ದೇಶಕರಾದ ಸಿಸ್ಟರ ಸಿಂತಿಯಾ ಡಿ ಮೆಲ್ಲೊ ರವರು ಹಾಗೂ ವಿವಿಧ ಹಳ್ಳಿಯ ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು. ವಿಜಯ ಬಂಟನೂರ ನಿರೂಪಿಸಿದರು. ಉಮೇಶ ದೊಡಮನಿ ಸ್ವಾಗತಿಸಿದರುಮಲಕಪ್ಪ ಹಲಗಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 