ವಿದ್ಯಾರ್ಥಿಗಳಿಗೆ ಪರಿಸರ ಅರಿವು ಮೂಡಿಸಲು ‘ಚಿಣ್ಣರ ವನ ದರ್ಶನ’: ರಾಜೀವ ಬಿರಾದಾರ.

ವಿದ್ಯಾರ್ಥಿಗಳಿಗೆ ಪರಿಸರ ಅರಿವು ಮೂಡಿಸಲು ‘ಚಿಣ್ಣರ ವನ ದರ್ಶನ’: ರಾಜೀವ ಬಿರಾದಾರ. 'Chinnar Van Darshan' to create environmental awareness among students: Rajiv Biradar.

ವಿದ್ಯಾರ್ಥಿಗಳಿಗೆ ಪರಿಸರ ಅರಿವು ಮೂಡಿಸಲು ‘ಚಿಣ್ಣರ ವನ ದರ್ಶನ’: ರಾಜೀವ ಬಿರಾದಾರ. 

ದೇವರಹಿಪ್ಪರಗಿ 14 :   ವಿದ್ಯಾರ್ಥಿ ಜೀವನದಿಂದಲೇ ಅರಣ್ಯ, ವನ್ಯಜೀವಿಗಳ ಬಗ್ಗೆ  ಮಕ್ಕಳಲ್ಲಿ ಕಾಳಜಿ ಮೂಡಿಸಬೇಕು , ಅರಣ್ಯದ ಮಹತ್ವವನ್ನು ಮಕ್ಕಳು ತಿಳಿದು ಇತರರಿಗೆ ತಿಳಿಯಪಡಿಸಬೇಕು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಚಿಣ್ಣರ ವನ ದರ್ಶನ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು  ಸಿಂದಗಿ ವಲಯ ಅರಣ್ಯ ಅಧಿಕಾರಿಗಳಾದ ರಾಜೀವ ಬಿರಾದಾರ ಹೇಳಿದರು.ತಾಲ್ಲೂಕಿನ ಇಂಗಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚಿಣ್ಣರ ವನ ದರ್ಶನ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ವಿದ್ಯಾರ್ಥಿ ದೆಸೆಯಲ್ಲಿಯೇ ಪರಿಸರದ ಬಗ್ಗೆ, ಪ್ರಾಣಿ-ಪಕ್ಷಿಗಳ ಬಗ್ಗೆ ಪ್ರಾಣಿ ಸಂಕುಲದಿಂದ ಪರಿಸರ ಸಮತೋಲನಕ್ಕೆ ಸಹಾಯವಾಗುವ ರೀತಿ, ಅಳಿವಿನಂಚಿನಲ್ಲಿರುವ ಪ್ರಾಣಿ ಸಂಕುಲವನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿ ಕುರಿತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಲ್ಲಿನಾಥ, ಭಾಗ್ಯವಂತ  ಮಸೂದಿ ಕುಸುನಾಳ ಅವರ ಮಾರ್ಗದರ್ಶನದಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.ಬೀಟ್ ಫಾರೆಸ್ಟರ್ ಜಿ.ಬಿ. ರಾಮಗಿರಮಠ ಅವರು ಮಾತನಾಡಿ,ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಉತ್ತಮ ಪರಿಸರ ಉತ್ತಮವಾದ ಆರೋಗ್ಯ ನೀಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಂಡು ಜೀವಿಸುವ ಪ್ರಾಣಿಗಳ ಬಗ್ಗೆ ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ ಎಂದು ಹೇಳಿ ಮುದ್ದೇಬಿಹಾಳ ನರ್ಸರಿ ಫಾರ್ಮ್‌ ದರ್ಶನ, ಹೊಸಪೇಟೆಯ ಅಟಲ್ ಬಿಹಾರಿ ವಾಜಪೇಯಿ ಜೂ, ದರೋಜಿ ಕರಡಿ ಧಾಮ, ಕಮಲಾಪುರದ ಅರಣ್ಯ ನರ್ಸರಿ ಫಾರ್ಮ್‌ ನಲ್ಲಿ ಸುಮಾರು ಎರಡು ದಿನಗಳ ಪ್ರವಾಸದ ಕುರಿತು ಮಾಹಿತಿ ನೀಡಿದರು. ಸ್ಥಳೀಯ ಶಾಲೆಯ ಮುಖ್ಯ ಗುರುಗಳಾದ ರಾಜು ರಾಠೋಡ ಅವರು ಮಾತನಾಡಿ, ಸುಮಾರು ಎರಡು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸುವ ಜೊತೆ ವಿದ್ಯಾರ್ಥಿಗಳಿಗೆ  ಸ್ಕೂಲ್ ಬ್ಯಾಗ್ ವಿತರಿಸುವ ಮೂಲಕ ಬೀಟ್ ಫಾರೆಸ್ಟರ್ ಜಿ.ಬಿ.ರಾಮಗಿರಮಠ ಅವರು ಶೈಕ್ಷಣಿಕ ಪ್ರೇಮ ಮೆರೆದಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಲಯದ ಅರಣ್ಯ ಅಧಿಕಾರಿ ಎಂ.ಬಿ.ಕಂಟಿಕರ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು